Breaking News

ಮೂರು ದಿನದಲ್ಲಿ ಸಾರಿಗೆ ಇಲಾಖೆಗೆ 17 ಕೋಟಿ ಲಾಸ್

Spread the love

ಮೂರು ದಿನದಲ್ಲಿ ಸಾರಿಗೆ ಇಲಾಖೆಗೆ 17 ಕೋಟಿ ಲಾಸ್

ಬೆಂಗಳೂರು:  ಕಳೆದ ಮೂರು ದಿನಗಳಿಂದ ಸಾರಿಗೆ ಸಿಬ್ಬಂದಿ ನಡೆಸುತ್ತಿರುವ  ಮುಷ್ಕರದಿಂದಾಗಿ  ರಾಜ್ಯಾದ್ಯಂತ ಕೆಎಸ್ಆರ್ ಟಿಸಿ ಹಾಗೂ ಬಿಎಂಟಿಸಿ  ಆದಾಯಕ್ಕೆ ಭಾರೀ ನಷ್ಟ ಉಂಟಾಗಿದೆ. 

ರಾಜ್ಯದಾದ್ಯಂತ ಪ್ರತಿ ದಿನ  ಸಾರಿಗೆ ಇಲಾಖೆಗೆ ಸುಮಾರು 7 ಕೋಟಿ ರೂ.  ಆದಾಯ ಬರುತ್ತಿತ್ತು.  ಆದ್ರೆ  ಮುಸ್ಕರ್ ಆರಂಭದ ಮೊದಲ  ದಿನ ರಾಜ್ಯಾದ್ಯಂತ 1464 ಬಸ್ ಗಳು ಸಂಚಾರ ಮಾಡಿದ್ದು, ಒಟ್ಟು 4.5 ಕೋಟಿ ರೂ. ನಷ್ಟವಾಗಿದೆ. ಇನ್ನು ಎರಡನೇ ದಿನ 210 ಬಸ್ ಸಂಚರಿಸಿದ ಹಿನ್ನೆಲೆ 6.5 ಕೋಟಿ ನಷ್ಟವಾಗಿದೆ.

ಇಂದು ಈ ವರೆಗೂ ಕೇವಲ  100 ಬಸ್  ಸಂಚಾರ ಆರಂಭಿಸಿವೆ ಇದೇ ಪರಿಸ್ಥಿತಿ ಮುಂದವರೆದರೆ ಇಂದು ಕೂಡಾ 6 ಕೋಟಿ ನಷ್ಟ ಉಂಟಾಗುವ ಸಾಧ್ಯತೆ ಇದೆ.

ಒಟ್ಟಾರೆ ಈ ಮೂರುದಿನದ ಮುಷ್ಕರದಿಂದಾಗಿ ಕೆಎಸ್​ಆರ್​ಟಿಸಿ ವಿಭಾಗಕ್ಕೆ ಒಟ್ಟು 17 ಕೋಟಿ ರೂಪಾಯಿ ನಷ್ಟ ಉಂಟಾಗಿದೆ.

ಈ ಮೂರು ದಿನದ ಮುಷ್ಕರದಿಂದಾಗಿ ಪ್ರತಿನಿತ್ಯ 2- 2.10.ಕೋಟಿ ರೂಪಾಯಿ ಆದಾಯಗಳಿಸುತ್ತಿದ್ದ ಬಿಎಂಟಿಸಿಗೆ ಒಟ್ಟು, 6 ಕೋಟಿ ರೂಪಾಯಿ ನಷ್ಟ ಉಂಟಾಗಿದೆ.

ರಾಜ್ಯದ ಎರಡನೇ ರಾಜ್ಯದಾನಿಯಾಗಿರುವ ಬೆಳಗಾವಿ ಜಿಲ್ಲೆವೊಂದರಲ್ಲಿಯೇ ಸುಮಾರು 2 ಕೋಟಿ. ರೂ ಆದಾಯ ಹೊಡೆತ ಬಿದ್ದಿದೆ.


Spread the love

About Laxminews 24x7

Check Also

ಗಡಿ ವಿವಾದದಿಂದಾಗಿ ಮತ್ತೆ ಮಹಾರಾಷ್ಟ್ರ ಅಲರ್ಟ್

Spread the loveಬೆಳಗಾವಿ : ಗಡಿ ಸಚಿವರಾಗಿ ಹೆಚ್. ಕೆ. ಪಾಟೀಲ್ ಅವರನ್ನು ಕರ್ನಾಟಕ ಸರ್ಕಾರ ನೇಮಿಸುತ್ತಿದ್ದಂತೆ ಮಹಾರಾಷ್ಟ್ರ ಸರ್ಕಾರ ಮತ್ತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ