ಧಾರವಾಡದಲ್ಲಿ ಕಾಣಿಸಿಕೊಂಡ ಅಯೋಧ್ಯೆ ರಾಮನ ಮೂರ್ತಿ ಸೃಷ್ಟಿಕರ್ತ ಯೋಗಿರಾಜ್… ಧಾರವಾಡ ಮಾರ್ಗವಾಗಿ ಅಥಣಿಗೆ ತೆರಳುವ ವೇಳೆ ಧಾರವಾಡದ ಬಿಜೆಪಿ ಮುಖಂಡರ ನಿವಾಸಕ್ಕೆ ಭೇಟಿ
ಅಯೋಧ್ಯೆಯಲ್ಲಿ ಹಸನ್ಮುಖಿಯಾಗಿ ನೆಲೆಯುರಿರುವ ಶ್ರೀರಾಮಚಂದ್ರನ ಮೂರ್ತಿಯ ಸೃಷ್ಟಿಕರ್ತರಾದ ಶಿಲ್ಪ ಕಲಾವಿದ ಯೋಗಿರಾಜ್ ಅವರಿಂದ ಧಾರವಾಡಕ್ಕೆ ಭೇಟಿ ನೀಡಿದ್ದರು.
ಧಾರವಾಡ ಮಾರ್ಗವಾಗಿ ಅಥಣಿಗೆ ತೆರಳುವ ಮುನ್ನ ಧಾರವಾಡದ ಬಿಜೆಪಿ ಮುಖಂಡರ ಮನೆಗೆ ಭೇಟಿ ನೀಡಿ ಸನ್ಮಾನ ಸ್ವೀಕರಿಸಿದರು.
ಹೌದು ಅಥಣಿಗೆ ಹೊರಟಿದ್ದ ಯೋಗಿರಾಜ್ ಅವರು ಮಾರ್ಗ ಮಧ್ಯೆ ಧಾರವಾಡದ ಬಿಜೆಪಿ ಮುಖಂಡೆ ಸವಿತಾ ಅಮರಶೆಟ್ಟಿ ಅವರ ನಿವಾಸಕ್ಕೆ ಭೇಟಿ ನೀಡಿದರು. ಹನುಮ ಜಯಂತಿಯಂದೇ ಧಾರವಾಡಕ್ಕೆ ಭೇಟಿ ಕೊಟ್ಟ ಯೋಗಿರಾಜ್ ಅವರನ್ನು ಭೇಟಿ ಮಾಡಲು ನೂರಾರು ಜನ ಆಗಮಿಸಿದ್ದರು.
ಈ ವೇಳೆ ಯೋಗಿರಾಜ್ ಅವರನ್ನು ಭೇಟಿ ಮಾಡಲು ನೂರಾರು ಜನ ಬಂದಿದ್ದು, ಕೆಲವರು ಅವರೊಂದಿಗೆ ಸೆಲ್ಫ ಪೋಟೋ ತೆಗೆಸಿಕೊಳ್ಳವ ಮೂಲಕ ಸಂತಸಗೊಂಡರು. ಅಖಿಲ ಭಾರತ ವಿಶ್ವಕರ್ಮ ಛಾತ್ರಾ ಯುವ ಸಂಘ,
ವಿಶ್ವಕರ್ಮ ಸಮಾಜ ಸೇರಿದಂತೆ ಅನೇಕ ಸಂಘಟನೆಗಳು ಯೋಗಿರಾಜ್ ಅವರನ್ನು ಈ ವೇಳೆ ಸನ್ಮಾನಿಸಿದವು. ವಿವಿಧ ಸಾಂಸ್ಕೃತಿಕ ಸಂಘಟನೆಗಳೂ ಯೋಗಿರಾಜ್ ಅವರನ್ನು ಸನ್ಮಾನಿಸಿದರು.