ರಾಯಚೂರು, (ಏಪ್ರಿಲ್ 08): ಆತ ಐನಾತಿಗಳಲ್ಲೇ ಐನಾತಿ. ಲಕ್ಕಿ ಭಾಸ್ಕರ್ (Lucky Bhaskar) ಸಿನೆಮಾದಂತೆ ಕೋಟಿ ಕೋಟಿ ವಂಚಿಸಿದ್ದ ಬ್ಯಾಂಕ್ನ ಮ್ಯಾನೇಜರ್ ನನ್ನು ರಾಯಚೂರು ಪೊಲೀಸರು (Raichur Police) ಕೂಡ ಸಿನೆಮಾ ಸ್ಟೈಲ್ನಲ್ಲೇ ಹೆಡೆಮುರಿಕಟ್ಟಿದ್ದಾರೆ.
ಅಷ್ಟೇ ಅಲ್ಲ ಆತನಿಗೆ ಸಪೋರ್ಟ್ ಮಾಡುತ್ತಿದ್ದ ಆಂಧ್ರ ಪ್ರದೇಶದ ಮತ್ತೊಬ್ಬ ಬ್ಯಾಂಕ್ ಉದ್ಯೋಗಿ ಕೂಡ ಲಾಕ್ ಆಗಿದ್ದು, ತನ್ನ ಗುರುತು ಮರೆಮಾಚಲು ಆ ಕಿಲಾಡಿ ತನ್ನ ಗೆಟಪ್ ಅನ್ನೇ ಬದಲಿಸಿಕೊಂಡಿದ್ದ. ಆದರೂ ಪೊಲೀಸರು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ರಾಯಚೂರು ನಗರದ ಬ್ಯಾಂಕ್ ಆಫ್ ಮಹಾರಾಷ್ಟ್ರ (Bank of Maharashtra) ಶಾಖೆಯ ಮ್ಯಾನೇಜರ್ ನರೇಂದ್ರ ರೆಡ್ಡಿ ತೆಲುಗಿನ ಲಕ್ಕಿ ಭಾಸ್ಕರ್ ಸಿನೆಮಾದಂತೆ ವಿವಿಧ ರೀತಿ ತಾಂತ್ರಿಕವಾಗಿ ಯಾಮಾರಿಸಿ ಕೋಟಿ ಕೋಟಿ ರೂ. ವಂಚಿಸಿ ಸಿಕ್ಕಿಬಿದ್ದು.
ಆದ್ರೆ ಆ ಸಿನಿಮಾ ಲಕ್ಕಿ ಭಾಸ್ಕರ್ ಸಕ್ಸಸ್ ಆಗಿದ್ದರೆ, ಉತ್ತ ಅದೇ ಮಾದರಿಯಲ್ಲೇ ಹಣ ಮಾಡಲು ಹೋಗಿದ್ದ ಬ್ಯಾಂಕ್ ಮ್ಯಾನೇಜರ್ ನರೇಂದ್ರ ರೆಡ್ಡಿ ಸಿಕ್ಕಿಬಿದ್ದಿದ್ದಾನೆ.
ಅದು ಬ್ಯಾಂಕ್ನಲ್ಲಿ ಡಿಪಾಸಿಟ್ ಮಾಡುವವರು ಹಾಗೂ ಗೋಲ್ಡ್ ಲೋನ್ ಪಡೆಯುವ ಗ್ರಾಹಕರನ್ನ ಬೆಚ್ಚಿ ಬೀಳುವಂತೆ ಮಾಡಿದ್ದ ಪ್ರಕರಣ. ರಾಯಚೂರು ನಗರದ ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆಯ ಮ್ಯಾನೇಜರ್ ನರೇಂದ್ರ ರೆಡ್ಡಿ ತೆಲುಗಿನ ಲಕ್ಕಿ ಭಾಸ್ಕರ್ ಸಿನೆಮಾದಂತೆ ವಿವಿಧ ರೀತಿ ತಾಂತ್ರಿಕವಾಗಿ ಯಾಮಾರಿಸಿ ಕೋಟಿ ಕೋಟಿ ವಂಚಿಸಿದ್ದ. 2022-2025 ರ ವರೆಗೆ ಸಣ್ಣ ಸುಳಿವೂ ಸಿಗದೇ ಇರೋ ಹಾಗೇ ಚಾಲಾಕಿ
ನರೇಂದ್ರ ರೆಡ್ಡಿ ತನ್ನ ವ್ಯಾಪ್ತಿಯಲ್ಲಿ ಅವ್ಯವಹಾರ ಎಸಗಿದ್ದ. ಬ್ಯಾಂಕ್ ಆಫ್ ಮಹಾರಾಷ್ಟ್ರ ದಲ್ಲಿ 105 ನಕಲಿ ಖಾತೆ ಓಪನ್ ಮಾಡಿದ್ದ. ಆ ಪೈಕಿ 29 ಖಾತೆಗಳಿಗೆ ಹಣ ವರ್ಗಾವಣೆಯನ್ನೂ ಮಾಡಿ ಒಂದೊಂದು ರೂಪಾಯಿ ಬಿಡದಂತೆ ಹಣ ಎಗರಿಸುತ್ತಲೇ ಇದ್ದ. ನಕಲಿ ಗೋಲ್ಡ್ ತಾನೇ ಇಟ್ಟು ಅಸಲಿ ಗೋಲ್ಡ್ ಲೋನ್ ಮಂಜೂರು ಮಾಡಿ ಆ ಹಣವನ್ನ ನಕಲಿ ಖಾತೆಗಳಿಗೆ ವರ್ಗಾಯಿಸುತ್ತಿದ್ದ.
ಇದಲ್ಲದೇ ಅಸಲಿ ಗೋಲ್ಡ್ ಲೋನ್ ಹೊಂದಿದವರಿಗೂ ತನ್ನದೇ ಸ್ಟೈಲ್ ನಲ್ಲಿ ಮೋಸ ಮಾಡಿ ವಿವಿಧ ಮಾದರಿಯಲ್ಲಿ ಬರೋಬ್ಬರಿ 10 ಕೋಟಿ 97 ಲಕ್ಷ ರೂ. ವಂಚಿಸಿದ್ದ. ಆದ್ರೆ, ಆಡಿಟ್ ವೇಳೆ ಸಿಕ್ಕಿಬಿದ್ದಿದ್ದಾನೆ. ಬಳಿಕ ಬ್ಯಾಂಕ್ನ ಹಿರಿಯ ಅಧಿಕಾರಿಗಳು ರಾಯಚೂರಿನ ಸಿಇಎನ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು.ಇದರ ಬೆನ್ನಲ್ಲೇ ಎಸ್ಕೇಪ್ ಆಗಿದ್ದ ಮೋಸ್ಟ್ ವಾಂಟೆಡ್ ಕ್ರಿಮಿನಲ್ನನ್ನ ರಾಯಚೂರು ಪೊಲೀಸರು ಈಗ ಸದ್ದಲಿಲ್ಲದೇ ಹೆಡೆಮುರಿ ಕಟ್ಟಿ ಲಕ್ಕಿ ಭಾಸ್ಕರನನ್ನ ಜೈಲಿಗಟ್ಟಿದ್ದಾರೆ.
10 ಕೋಟಿ ವಂಚನೆ ಬಳಿಕ ಆರೋಪಿ ವಿವಿಧ ರೀತಿ ತನ್ನ ಗುರುತನ್ನೇ ಬದಲಿಸಿಕೊಂಡಿದ್ದ. ಮೊದಲು ಟಿಪ್ ಟಾಪ್ ಆಗಿ ಬ್ಲೇಜರ್ ಹಾಕಿ ಫೋಸು ಕೊಡುತ್ತಿದ್ದ ಆರೋಪಿ ಮ್ಯಾನೇಜರ್ ನರೇಂದ್ರ ರೆಡ್ಡಿ ತಲೆ ಮರೆಸಿಕೊಂಡ ಬಳಿಕ ಬಿಳಿ ಗಡ್ಡ ಬಿಟ್ಟಿದ್ದ. ಅಲ್ಲದೇ ಸಾದಾ ಬಟ್ಟೆಗಳನ್ನ ಹಾಕಿಕೊಂಡು ಕಣ್ಣಿಗೆ ಸ್ಪೆಕ್ಟ್ಸ್ ಕೂಡ ಹಾಕಿಕೊಂಡಿದ್ದ. ಈ ಮೂಲಕ ತನ್ನ ಗುರುತು ಪತ್ತೆಯಾಗದ ರೀತಿ ಓಡಾಡುತ್ತಿದ್ದ ಎನ್ನುವುದು ತನಿಖೆ ವೇಳೆ ಗೊತ್ತಾಗಿದೆ. ಇದಲ್ಲದೇ ಆರೋಪಿ ಬರೀ ವಾಟ್ಸಪ್ ಕಾಲ್ನಲ್ಲಿ ಮಾತನಾಡೋದು,ವಿವಿಧ ಪುಣ್ಯ ಕ್ಷೇತ್ರಗಳಿಗೆ ಹೋಗಿ ಅಲ್ಲೇ ತಲೆ ಮರೆಸಿಕೊಳ್ಳುತ್ತಿದ್ದ. ಈ ವಿಚಾರವನ್ನು ತಿಳಿದ ಖಾಕಿ ಪಡೆ ಕಾರ್ಯಚರಣೆಗಿಳಿತು.