Breaking News

ಕಾಗವಾಡ ತಾಲೂಕ ತಳವಾರ ಸಮಾಜದ ಜನರಿಗೆ (ST) ಪ್ರಮಾಣ ಪತ್ರ ಕೊಡಲು ಯಾವುದೇ ರೀತಿಯ ತೊಂದರೆ ಮಾಡಬಾರದೆಂದು ತಹಶೀಲ್ದಾರರಿಗೆ ಮನವಿ.

Spread the love

ಕಾಗವಾಡ ತಾಲೂಕ ತಳವಾರ ಸಮಾಜದ ಜನರಿಗೆ (ST) ಪ್ರಮಾಣ ಪತ್ರ ಕೊಡಲು
ಯಾವುದೇ ರೀತಿಯ ತೊಂದರೆ ಮಾಡಬಾರದೆಂದು ತಹಶೀಲ್ದಾರರಿಗೆ ಮನವಿ.
ಕಾಗವಾಡ ತಾಲೂಕಿನ ತಳವಾರ ಸಮಾಜಕ್ಕೆ ಕೇಂದ್ರ ಸರ್ಕಾರ ಆದೇಶಿಸಿದಂತೆ ನಿಯಮ ಬದ್ಧವಾಗಿ ಎಸ ಟಿ ಪ್ರಮಾಣ ಪತ್ರ ನೈಜ ತಳವಾರ ಸಮಾಜ ಬಾಂಧವರಿಗೆ ನೀಡಲೇಬೇಕು ಎಂದು ತಾಲೂಕ ಮಟ್ಟದ ತಳವಾರ್ ಸಮಾಜದ ವತಿಯಿಂದ ತಹಶೀಲ್ದಾರರಿಗೆ ಮನವಿ ಅರ್ಪಿಸಿದರು.
ಸೋಮವಾರ ರಂದು ಕಾಗವಾಡ ತಾಲೂಕಾ ತಳವಾರ ಸಮಾಜದ ಅಧ್ಯಕ್ಷ ಸುರೇಶ್ ಕೋಳಿ ಗ್ರೇಡ್ ಟು ತಹಸಿಲ್ಲ ಶ್ರೀಮತಿ ರಶ್ಮಿ ಜಕಾತೆ ಇವರಿಗೆ ಮನವಿ ಅರ್ಪಿಸಿ ಮನವಿ ಓದಿ ಹೇಳುವಾಗ ಬರತಕ್ಕಂತಹ ತಳವಾರ ಸಮಾಜದ ಬಂದುಗಳು ಸಾವಿರಕ್ಕಿಂತಲು ಹೆಚ್ಚು (ST) ಪ್ರಮಾಣ ಪತ್ರವನ್ನು ಪಡೆದಿರುತ್ತಾರೆ.ಇವರೆಲ್ಲರು ನೈಜ ಜಾತಿಗೆ ಸೇರಿರುತ್ತಾರೆ.
ಅದರಂತೆ ನಮ್ಮ ಸಮಾಜದ ಬಂದುಗಳ ಗಮನಕ್ಕೆ ಬಂದ ವಿಷಯ ಮಾನ್ಯ ಸುದ್ದಿ ಮಾದ್ಯಮಗಳಿಂದ ನೋಡಲಾಗಿ ನಮಗೆ ತೋಂದರೆಯಾಗುವ ಸಾದ್ಯತೆಯ ಅನುದಾನ ಬಂದ ಪ್ರಯುಕ್ತ ನಾವು ಕುಡಲೆ ಎಚ್ಚೆತ್ತು ಈ ಮನವಿಯನ್ನು ಕೊಡುತ್ತಿದ್ದೆವೆ.
ಕೇಂದ್ರ ಸರಕಾರ ಗೆಜೆಟಿನಂತೆ (ಆದೇಶದಂತೆ) ನೈಜ ತಳವಾರ ಆದ ನಮಗೆ (ST) ಪ್ರಮಾಣ ಪತ ದೊರೆಕಿದೆ ಇನ್ನು ಮುಂದಾದರು ನಮ್ಮ ತಳವಾರ ಸಮಾಜ ಬಂದುಗಳಿಗೆ (ST) ಪ್ರಮಾಣ ಪತ್ರವನ್ನು ನೀಡಲು. ಯಾವುದೆ ರೀತಿಯ ತೊಂದರೆ ನೀಡಬಾರದು
ಇನ್ನೂ ಮುಂದೆ ತಮ್ಮ ಕಛೇರಿಯಿಂದ SC & STಕುಂದು ಕೋರತೆಯ ಸಭೆಗೆ ತಳವಾರ ಸಮಾಜವನ್ನು ಅವಹಾನಿಸಿರಿ. ಮತ್ತೊಂದು ಮಹತ್ವದ ವಿಷಯ ಏನೆಂದರೆ ಸಮಾಜ ಕಲ್ಯಾಣ ಸಚಿವಾಲಯದ Social Welfare Secretatrial Government Order No. SWD 225 BCD 2000 Dated 30 March 2002 ANNEXURE-1 CATEGORY -1 ರ ಪ್ರಕಾರ 88h ನಲ್ಲಿ ಬರುವ ತಳವಾರ ತಳವಾರ ಬೊಯಾ
ಇವರನ್ನು (ST) ಪರಿಶಿಷ್ಟ ಪಂಗಡಕ್ಕೆ ಸೇರಿಸಿರುತ್ತಾರೆ ಅಂತಾ ಗೆಜೆಟಿನ ಪ್ರತಿಯ ಅಧಿಕಾರಿಗಳಿಗೆ ನೀಡಿ ಸಮಾಜದ ವತಿಯಿಂದ ಸಲ್ಲಿಸುವ ಮನವಿ ಪತ್ರ ತಾಲೂಕ ಅಧ್ಯಕ್ಷ ಸುರೇಶ್ ಕೋಳಿ ಓದಿ ಹೇಳಿದರು.
ಕಾಗವಾಡ ತಹಸಿಲ್ದಾರ್ ಕಚೇರಿಯ ಗ್ರೇಡ್ 2 ತಹಸಿಲ್ದಾರ ಶ್ರೀಮತಿ ರಶ್ಮಿ ಜಕಾತೆ ಮನವಿ ಸ್ವೀಕರಿಸಿ ತಮ್ಮ ಬೇಡಿಕೆಗಳು ಬಗ್ಗೆ ತಹಶೀಲ್ದಾರರ, ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಈಡೇಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು. ಈ ವೇಳೆ ಉಪತಸಿಲ್ಲ ಅನ್ನಾ ಸಾಹೇಬ ಕೋರೆ. ಉಪಸ್ಥಿತರಿದ್ದರು.
ತಳವಾರ್ ಸಮಾಜದ ಉಗಾರ ಪಟ್ಟಣದ ಅಧ್ಯಕ್ಷ ಭಗವಂತ ತಳವಾರ, ಅಪ್ಪಾ ಸಾಹೇಬ ಸನದಿ, ಸಲಹಗಾರ ನ್ಯಾಯವಾದಿ ಸಚಿನ ಮಿರ್ಜಿ, ಉಮೇಶ ಕೋಳಿ, ಉಮೇಶ ಕೋಳಿ, ಎಂ. ಟಿ. ತಳವಾರ, ನಾಮದೇವ ಕೋಳಿ, ಪ್ರಕಾಶ್ ನಿರ್ವಹಣೆ, ಉಮೇಶ್ ಸನದಿ, ರಾಯಪ್ಪಾ ಅಶೋಕ ಕೋಳಿ ವಿಠ್ಠಲ ಗಸ್ತಿ,ಪರಸು ಗುಗಾಡೆ, ಲಕ್ಷ್ಮಣ ಕೋಳಿ ನರಸು ಇಂಗಳೆ, ಸುನಿಲ ಮಿರ್ಜೆ, ಸೇರದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಸುಕುಮಾರ ಬನ್ನೂರೆ

Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ