Breaking News

ಹೈಕಮಾಂಡ್​ ಕರೆದುಕೊಂಡು ಬನ್ನಿ ಎಂದರೆ ನಾನೇ ಯತ್ನಾಳ್​ ಅವರನ್ನು ಕರೆದುಕೊಂಡು ಬರುತ್ತೇನೆ : ರಾಜು ಕಾಗೆ

Spread the love

ಹುಬ್ಬಳ್ಳಿ: “ಬಿಜೆಪಿಯಿಂದ ಉಚ್ಚಾಟನೆ ಆಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಮ್ಮ ಪಕ್ಷಕ್ಕೆ ಬಂದ್ರೆ ಕರೆದುಕೊಳ್ಳುತ್ತೇವೆ” ಎಂದು ಕಾಂಗ್ರೆಸ್ ಶಾಸಕ ರಾಜು‌ ಕಾಗೆ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ನಮ್ಮ ಪಕ್ಷದ ಹೈಕಮಾಂಡ್ ಜೊತೆಗೆ ಚರ್ಚೆ ಮಾಡಿ ಕರೆದುಕೊಂಡು ಬನ್ನಿ ಅಂದ್ರೆ ಸ್ವಾಗತ ಮಾಡುತ್ತೇವೆ. ನಾನೇ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಕಾಂಗ್ರೆಸ್​ಗೆ ಕರೆದುಕೊಂಡು ಬರುತ್ತೇನೆ. ನನಗೆ ಜವಾಬ್ದಾರಿ ಕೊಟ್ಟರೆ ಕರೆದುಕೊಂಡು ಬರುತ್ತೇನೆ” ಎಂದರು.

ಬೆಲೆ ಏರಿಕೆಯಿಂದ ಅಷ್ಟೇನೂ ಹೊರೆ ಆಗೋದಿಲ್ಲ. ನಮಗೂ ಇತಿಮಿತಿ ಇದೆ. ಹೊಸ ಬಸ್ ನಿಲ್ದಾಣ ನಿರ್ಮಾಣ, ಹೊಸ ಬಸ್ ಖರೀದಿ ಮಾಡುತ್ತಿದ್ದೇವೆ. ಸದ್ಯದ ವ್ಯವಸ್ಥೆ ಸರಿಪಡಿಸಬೇಕು. ನೋ ಪ್ರಾಫಿಟ್, ನೋ ಲಾಸ್​ನಲ್ಲಿ ಸಂಸ್ಥೆ ನಡೆಯಬೇಕು. ಐದು ಗ್ಯಾರಂಟಿಗಳಿಂದ ಜನರಿಗೆ ಉಪಯೋಗ ಆಗುತ್ತಿದೆ. ನಮ್ಮ ಯೋಜನೆಗಳನ್ನು ಯಾರು ವಿರೋಧ ಮಾಡುತ್ತಿದ್ದರೋ ಅವರೇ ನಮ್ಮನ್ನು ಕಾಪಿ ಮಾಡುತ್ತಿದ್ದಾರೆ. ಸರ್ಕಾರದಲ್ಲಿ ಅಡೆತಡೆ ಸಹಜ. ಆದರೆ ಸಿದ್ದರಾಮಯ್ಯ ಪಾರದರ್ಶಕವಾಗಿ ಸರ್ಕಾರ ನಡೆಸುತ್ತಿದ್ದಾರೆ” ಎಂದರು.

“ಹನಿಟ್ರ್ಯಾಪ್ ವೈಯಕ್ತಿಕ, ಅದು ಸರ್ಕಾರದ ಯೋಜನೆ ಅಲ್ಲ. ಸದನದಲ್ಲಿ ರಾಜಣ್ಣ ಅವರ ಹೆಸರು ತೆಗೆದುಕೊಂಡಿದ್ದು ಯತ್ನಾಳ್, ಅದಕ್ಕೆ ರಾಜಣ್ಣ ಸದನದಲ್ಲಿ ಉತ್ತರ ಕೊಟ್ಟಿದ್ದಾರೆ” ಎಂದರು.


Spread the love

About Laxminews 24x7

Check Also

ನೈಋತ್ಯ ರೈಲ್ವೆ ಟಿಕೆಟ್ ಪರಿಶೀಲನೆ ಪ್ರಕರಣ, ದಂಡ ಸಂಗ್ರಹದಲ್ಲಿ ಹೆಚ್ಚಳ

Spread the loveಹುಬ್ಬಳ್ಳಿ: ನೈಋತ್ಯ ರೈಲ್ವೆ ತನ್ನ ವ್ಯಾಪ್ತಿಯಾದ್ಯಂತ ಟಿಕೆಟ್ ಪರಿಶೀಲನೆ ಮತ್ತು ನಿಯಮ ಜಾರಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ ಪರಿಣಾಮವಾಗಿ, ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ