Breaking News

ಧಾರವಾಡದಲ್ಲಿ ಪುನೀತ್ ರಾಜಕುಮಾರ್ ಜನ್ಮ ದಿನಕ್ಕೆ ಅನ್ನ ಸಂತರ್ಪಣೆ… ಹಸಿದ ಹೊಟ್ಟೆಗೆ ಊಟ ನೀಡಿ ಅಭಿಮಾನಿಗಳಿಂದ ಮಾದರಿಯ ಕಾರ್ಯ

Spread the love

ಧಾರವಾಡದಲ್ಲಿ ಪುನೀತ್ ರಾಜಕುಮಾರ್ ಜನ್ಮ ದಿನಕ್ಕೆ ಅನ್ನ ಸಂತರ್ಪಣೆ… ಹಸಿದ ಹೊಟ್ಟೆಗೆ ಊಟ ನೀಡಿ ಅಭಿಮಾನಿಗಳಿಂದ ಮಾದರಿಯ ಕಾರ್ಯ
ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ ಅವರ ಜನ್ಮ ದಿನವನ್ನು ಧಾರವಾಡದಲ್ಲಿ ಅವರ ಅಭಿಮಾನಿಗಳು ಅರ್ಥಪೂರ್ಣ ಹಾಗೂ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಿದರು. ಹಸಿದ ಹೊಟ್ಟೆಗೆ ಅನ್ನ ಸಂತರ್ಪಣೆ ಮಾಡುವ ಮೂಲಕ ಮಾದರಿಯ ಕಾರ್ಯ ಮಾಡಿ ಅಭಿಮಾನ ಮೇರೆದೀದ್ದಾರೆ.
ಧಾರವಾಡದ ಮಾಳಮಡ್ಡಿಯ ಆಟೊ ಸ್ಟ್ಯಾಂಡ್ ಬಳಿ ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅಭಿಮಾನಿಗಳು, ನಂತರ ಪಟಾಕಿ ಸಿಡಿಸಿ ಆಟೊ ಸಂಘದ ಪದಾಧಿಕಾರಿಗಳು ಹಸಿದವರಿಗೆ ಅನ್ನ ನೀಡುವ ಮೂಲಕ ದಿವಂಗತ ಪುನೀತ ರಾಜಕುಮಾರವರ ಅರ್ಥಪೂರ್ಣ ಹುಟ್ಟು ಹಬ್ಬ ಆಚರಣೆ ಮಾಡಿದರು. ಪುನೀತ್ ರಾಜಕುಮಾರ ಅವರ ಅಭಿಮಾನಿಗಳು, ಆಟೊ ಸಂಘದ ಸದಸ್ಯರ ಜೊತೆ ಜಯ ಕರ್ನಾಟಕ ಸಂಘಟನೆಯವರೂ ಪುನೀತ್ ರಾಜಕುಮಾರ್ ಅವರ ಜನ್ಮ ದಿನೋತ್ಸವದಲ್ಲಿ ಪಾಲ್ಗೊಂಡರು.
ಜಯ ಕರ್ನಾಟಕ ಸಂಘಟನೆಯವರು ಆಟೊ ಸಂಘದ ಸದಸ್ಯರಿಗೆ ಉಚಿತವಾಗಿ ಆಟೊ ಬಾಗಿಲುಗಳನ್ನು ಇದೇ ವೇಳೆ ನೀಡಿದ್ದು, ಒಟ್ಟಾರೆ ಪುನೀತ್ ರಾಜಕುಮಾರ್ ಅವರ ಜನ್ಮ ದಿನವನ್ನು ಜಯಕರ್ನಾಟಕ ಸಂಘಟನೆಯವರು, ಪುನೀತ್ ಅವರ ಅಭಿಮಾನಿಗಳು ಹಾಗೂ ಆಟೊ ಸಂಘದ ಸದಸ್ಯರು ಅರ್ಥಪೂರ್ಣವಾಗಿ ಆಚರಿಸಿದರು.

Spread the love

About Laxminews 24x7

Check Also

ಕಬ್ಬು ಬೆಳೆಗಾರರ ಜೊತೆ ಸಚಿವರ ಸಂಧಾನ ಸಭೆ ವಿಫಲ: ಮಿನಿಸ್ಟರ್​​ ಕಾರಿಗೆ ರೈತರ ಮುತ್ತಿಗೆ

Spread the loveಚಿಕ್ಕೋಡಿ, ಬೆಳಗಾವಿ: ಕಳೆದ ಏಳು ದಿನಗಳಿಂದ ನಡೆದಿರುವ ಕಬ್ಬು ಬೆಳೆಗಾರರ ಹೋರಾಟ ಕೊನೆಗೊಳಿಸಲು ಸರ್ಕಾರದ ಪರವಾಗಿ ಕಾನೂನು ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ