ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಇಲಕಲ್ ಹೆಸ್ಕಾಂ ಕಚೇರಿಯಲ್ಲಿ ಸಿಬ್ಬಂದಿ ಇರುವುದೇಇಲ್ಲವಂತೆ ಈ ಕುರಿತು ವಿಡಿಯೋ ವೈರಲ್ ಆಗಿದೆ
ಪ್ರತಿನಿತ್ಯ ತಮ್ಮ ಕೆಲಸಗಳಿಗಾಗಿ ರೈತರು ಸೇರಿದಂತೆ ನೂರಾರು ಜನರು ಕಚೇರಿಗೆ ಬರುತ್ತಾರೆ ಆದರೆ ಇಲಕಲ್ ಹೇಸ್ಕಾಂ ಕಚೇರಿಯಲ್ಲಿ ಸಿಬ್ಬಂದಿಗಳು ಸಿಗುವುದು ದುರ್ಲಭವಂತೆ. ಅಧಿಕಾರಿಗಳು ಕಚೇರಿಗೆ ಚಕ್ಕರ್ ಹೊಡೆದಿದ್ದಾರಂತೆ ಶನಿವಾರ ಮಧ್ಯಾಹ್ನ 3 ಗಂಟೆಗೆ ಸ್ಥಳೀಯರು ಭೇಟಿ ನೀಡಿದಾಗ ಇಡೀ ಕಚೇರಿ ಖಾಲಿ ಖಾಲಿ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು ಸಾಕಷ್ಟು ಚರ್ಚೆ ಆಗುತ್ತಿದೆ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷತನವನ್ನು ಸಾರ್ವಜನಿಕರು ಖಂಡಿಸಿ ಆಕ್ರೋಶ ಹೊರಹಾಕಿದ್ದಾರೆ