ಬೆಳಗಾವಿ: ಎನಿವೈರಮೆಂಟಲ್ ಪಾರ್ಟ್ ಆಂಡ್ ಟ್ರೇನಿಂಗ್ ಏರಿಯಾ ಬೆಳಗಾವಿಯ ವತಿಯಿಂದ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಇನ್ಫೆಂಟ್ರಿ ಗೋಲ್ಡ್ ಚಾಂಪಿಯನ್’ಶಿಪ್ ವಿಜೇತರಾಗಿ ಮಿಹೀರ್ ಪೋತದಾರ ಹೊರಹೊಮ್ಮಿದ್ದಾರೆ.
ಎನಿವೈರಮೆಂಟಲ್ ಪಾರ್ಟ್ ಆಂಡ್ ಟ್ರೇನಿಂಗ್ ಏರಿಯಾ ಬೆಳಗಾವಿಯ ವತಿಯಿಂದ ಆಯೋಜಿಸಲಾಗಿದ್ದ, ಇನ್ಫೆಂಟ್ರಿ ಗೋಲ್ಫ್ ಕಪ್’ನ್ನು ಆಯೋಜಿಸಲಾಗಿತ್ತು. ಬೆಳಗಾವಿ ಸೇರಿದಂತೆ ಬೆಂಗಳೂರು, ಹುಬ್ಬಳ್ಳಿ, ಮಹಾರಾಷ್ಟ್ರದ ಕೊಲ್ಹಾಪುರ, ಗೋವಾ ಸೇರಿದಂತೆ ವಿವಿಧೆಡೆಯಿಂದ ಸುಮಾರು 149 ಸ್ಪರ್ಧಾಳುಗಳು ಇದರಲ್ಲಿ ಭಾಗವಹಿಸಿದ್ದರು. ಈ ಸ್ಪರ್ಧೆಯೂ 5 ವಿಭಾಗಗಳಲ್ಲಿ ನಡೆಯಿತು.
ಇದರಲ್ಲಿ ಭಾರತೀಯ ಸೇನೆಯ ಮೋಹನ್ ನಾಯ್ಕ್ ಅವರು ಜಂಟಿ ವಿಜೇತರಾಗಿದ್ದಾರೆ. ಇನ್ನು ಇನ್ಫೇಂಟ್ರಿ ಮಿಹೀರ್ ಪೋತದಾರ ಟೂರ್ನಾಮೆಂಟಿನ ವಿಜೇತರಾಗಿದ್ದಾರೆ ಎಂದು ಕರ್ನಲ್ ಸಂತೋಷ್ ಅವರು ಈ ಕುರಿತು ಇನ್ ನ್ಯೂಸ್’ಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು. ಈ ವೇಳೆ ಎನಿವೈರಮೆಂಟಲ್ ಪಾರ್ಟ್ ಆಂಡ್ ಟ್ರೇನಿಂಗ್ ಏರಿಯಾ ಬೆಳಗಾವಿಯ ಸದಸ್ಯರು ಭಾಗಿಯಾಗಿದ್ಧರು.