Breaking News

ಬೆಳಗಾವಿ: ೧೬-೩-೨೪ ಲಿಂಗಾಯತ ಸ೦ಘಟನೆ ವಚನ ಪಿತಾಮಹ ಡಾ.ಪ.ಗು.ಹಳಕಟ್ಟಿ ಭವನ ಬೆಳಗಾವಿ ಶರಣರ ಕಾಯಕ ದಾಸೋಹ ಸಂಸ್ಕೃತಿ ಲೋಕಕ್ಕೆ ಮಾದರಿ- ಸಾಹಿತಿ,ಬಸವರಾಜ ಕುಪ್ಪಸ ಗೌಡ್ರ

Spread the love

ಬೆಳಗಾವಿ: ೧೬-೩-೨೪ ಲಿಂಗಾಯತ ಸ೦ಘಟನೆ ವಚನ ಪಿತಾಮಹ ಡಾ.ಪ.ಗು.ಹಳಕಟ್ಟಿ ಭವನ ಬೆಳಗಾವಿ
ಶರಣರ ಕಾಯಕ ದಾಸೋಹ ಸಂಸ್ಕೃತಿ ಲೋಕಕ್ಕೆ ಮಾದರಿ- ಸಾಹಿತಿ,ಬಸವರಾಜ ಕುಪ್ಪಸ ಗೌಡ್ರ

ಶರಣರ ಕಾಯಕ, ದಾಸೋಹ, ಸಂಸ್ಕೃತಿ ಲೋಕಕ್ಕೆ ಮಾದರಿ

 

ಉಪನ್ಯಾಸಕ, ಸಾಹಿತಿ ಬಸವರಾಜ ಕುಪ್ಪಸಗೌಡ್ರ , ಪ್ರಾರಂಭದಲಿೢ ಸುರೇಶ ನರಗುಂದ ಪ್ರಾಥ೯ನೆ ನಡೆಸಿಕೊಟ್ಟರು
ಶರಣ ಬಿಬ್ಬಿ ಬಾಚಯ್ಯ ನವರ ಕುರಿತು ಉಪನ್ಯಾಸ ನೀಡಿದ ಸಾಹಿತಿ ಬಸವರಾಜ ಕುಪ್ಪಸಗೌಡ್ರ,
ಕಾಯಕ, ದಾಸೋಹ ಪ್ರಸಾದದ ಮಹತ್ವವನ್ನು 12ನೇ ಶತಮಾನದ ಬಸವಾದಿ ಶರಣರು ಲೋಕಕ್ಕೆ ಸಾರಿದ್ದಾರೆ. ದೇವರು ಕೊಟ್ಟ ಕಾಯವನ್ನು ಸತ್ಕಾರ್ಯಗಳ ಮೂಲಕ ಸದ್ವಿನಿಯೋಗ ಮಾಡಿಕೊಂಡು ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು.

ಶರಣರ ವಚನ ಸಾಹಿತ್ಯ ಸರ್ವಕಾಲಿಕ ಸತ್ಯ ಸಂದೇಶವಾಗಿದೆ. ಎಲ್ಲ ಶರಣರಲ್ಲಿ ಅಮೃತಮಯ ಮೌಲ್ಯಗಳಿದ್ದು,ದಿವ್ಯ ಶಕ್ತಿಯಾಗಿದ್ದರು.ಶರಣರ ಮಿಕ್ಕುಳಿದ ಪ್ರಸಾದದ ಸಂಗ್ರಹದ ಕಾಯಕದಲ್ಲಿ ತೊಡಗಿದ್ದ ಶರಣ ಬಿಬ್ಬಿ ಬಾಚಯ್ಯ ದಾಸೋಹ ಅರ್ಪಣೆಯ ಜೊತೆಗೆ ಪ್ರಸಾದವನ್ನು ಹಾಳು ಮಾಡಬಾರದೆಂಬ ಮಹತ್ವದ ಸಂದೇಶವನ್ನು ನೀಡಿದ್ದಾರೆ ಎಂದು ಹೇಳಿದರು

ಈರಣ್ಣ ದೇಯನ್ನವರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಕಾರ್ಯದರ್ಶಿ ಎಂ ವೈ ಮೆಣಸಿನಕಾಯಿ ಪರಿಚಯಿಸಿದರು. ಓಂಕಾರ್ ಚವಲಗಿ ದಾಸೋಹ ಸೇವೆ ಮಾಡಿದರು ಬಿ.ಪಿ.ಜೇವಣಿ ಅಕ್ಕಮಹಾದೇವಿ ತೆಗ್ಗಿ, ಜಯಶ್ರೀ ಚವಲಗಿ,ಸುರೇಶ ನರಗುಂದ, ಸುವರ್ಣ ಗುಡಸ, ಶ್ರೀದೇವಿ ನರಗುಂದ, ಸುನೀಲ ಸಾಣಿ ಕೊಪ್ಪ, ಸಿದ್ದಪ್ಪ ಸಾರಾಪುರಿ,ಸೂಮಶೇಖರ ಕಟ್ಟಿ,ಬಸವರಾಜ ಬಿಜ್ಜರಗಿ,ಶೇಖರ ವಾಲಿಇಟಗಿ, ಮ೦ಗಳಾ ಕಾಗತಿಕರ, ದೀಪಾ ಪಾಟೀಲ,ಚ೦ಪಾವತಿ ತ೦ಗಡೆ, ನ೦ದಾ ಬಗಲಿ,ಬಾಬಣ್ಣ ತಿಗಡಿ, ಬಸವರಾಜ ಮತ್ತಿಕಟ್ಟಿ,ಲಲಿತಾ ವಾಲಿಇಟಗಿ,ಶಿವಾನಂದ ನಾಯಕ, ಜ್ಯೋತಿ ಬಾದಾಮಿ, ಸುಜಾತ ಮತ್ತಿಕಟ್ಟಿ, ಲಕ್ಷ್ಮಿಕಾಂತ ಗುರವ, ಮತ್ತಿತರರು ಉಪಸ್ಥಿತಿದ್ಧರು ಸ೦ಗಮೇಶ ಅರಳಿ ನಿರೂಪಿಸಿದರು.


Spread the love

About Laxminews 24x7

Check Also

ರಾಮತೀರ್ಥ ನಗರದಲ್ಲಿ ಸುರೇಶ ಯಾದವ ಫೌಂಡೇಶನ್ ದಿಂದ ಹೋಳಿ ಆಚರಣೆ

Spread the love ರಾಮತೀರ್ಥ ನಗರದಲ್ಲಿ ಸುರೇಶ ಯಾದವ ಫೌಂಡೇಶನ್ ದಿಂದ ಹೋಳಿ ಆಚರಣೆ ಬೆಳಗಾವಿಯ ರಾಮತೀರ್ಥ ನಗರದ ಸುರೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ