Breaking News

ಸಿದ್ದರಾಮಯ್ಯ ಸಗಣಿಎತ್ತಿದ್ದರಿಂದ ಏನೂ ಆಗೋದಿಲ್ಲಗೋವನ್ನು ಆರಾಧನೆ ಮಾಡಬೇಕು:ಕಟೀಲ್

Spread the love

ಮಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಸಗಣಿ ಎತ್ತಿದ್ದೇನೆ ಅಂತಾ ಹೇಳ್ತಾರೆ. ಸಗಣಿ ಎತ್ತಿದ್ದರಿಂದ ಏನೂ ಆಗೋದಿಲ್ಲ. ಗೋವನ್ನು ಆರಾಧನೆ ಮಾಡಬೇಕು. ಸಗಣಿ ಎತ್ತಿ ನಾಟಕ ಮಾಡೋದ್ರಿಂದ ಪ್ರಯೋಜನ ಇಲ್ಲ. ಕಾಂಗ್ರೆಸ್ ರೈತರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಹಿನ್ನೆಲೆಯಲ್ಲಿ ಕಟೀಲ್ ಮಂಗಳೂರಿನ ಬಿಜೆಪಿ ಕಚೇರಿ ಮುಂಭಾಗದಲ್ಲಿ ಗೂಪೂಜೆ ಮಾಡಿದ್ದಾರೆ. ಈ ವೇಳೆ ಮಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ಗೋಮಾತೆಗೆ ವಿಶೇಷ ಸ್ಥಾನವಿದೆ. ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡನೆ ಮಾಡಿದೆ. ದೇಶದಲ್ಲಿ ಗೋ ಸಂಸ್ಕೃತಿ ಉಳಿಯೋದಕ್ಕೆ ಈ ಮಸೂದೆ ಬಂದಿದೆ. ಇದಕ್ಕಾಗಿ ಯಡಿಯೂರಪ್ಪ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.ಕಾಂಗ್ರೆಸ್ ಈ ಹಿಂದೆ ಮಸೂದೆ ತೆಗೆಯುವಾಗ ಚರ್ಚೆ ಮಾಡಿತ್ತಾ? ಈಗ ಚರ್ಚೆ ಬೇಕು ಅನ್ನೋದು ಕಾಂಗ್ರೆಸ್ಸಿನ ತುಷ್ಠೀಕರಣ ನೀತಿಯಾಗಿದೆ. ರೈತರ ಹೆಸರು ಹೇಳಿಕೊಂಡು ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಗೋ ಹತ್ಯೆ ನಿಷೇಧ ರೈತರಿಗೆ ಪೂರಕವಾದ ಅಂಶವೇ ಆಗಿದೆ. ಕಾಂಗ್ರೆಸ್ ಸುಮ್ಮನೆ ತುಷ್ಟೀಕರಣ ಮಾಡುತ್ತಿದೆ. ಕಾಂಗ್ರೆಸ್ ಗೋಹತ್ಯೆಕೋರರ ಪರವಾಗಿದೆ. ಈ ಹಿಂದೆ ತಲ್ವಾರ್ ಹಿಡಿದು ಗೋ ಕಳ್ಳತನಮಾಡಿದವರ ಬಂಧನ ಮಾಡಿಲ್ಲ. ಸಿದ್ದರಾಮಯ್ಯ ಇದರ ಪರವಾಗಿದ್ದಾರೆ ಅಂತ ನಂಬಿಕೆಯಿಲ್ಲ ಎಂದು ಹೇಳಿದರು.


Spread the love

About Laxminews 24x7

Check Also

ರಾಜ್ಯ ಕಾಂಗ್ರೆಸ್ ನಾಯಕರ ಸಿಎಂ ಕುರ್ಚಿ ಕಿತ್ತಾಟದಿಂದ ಅಭಿವೃದ್ಧಿಗೆ ಎಳ್ಳುನೀರು:ದುರ್ಯೋಧನ ಐಹೊಳೆ

Spread the loveಚಿಕ್ಕೋಡಿ: ರಾಜ್ಯ ಕಾಂಗ್ರೆಸ್ ನಾಯಕರ ಸಿಎಂ ಕುರ್ಚಿ ಕಿತ್ತಾಟದಿಂದ ಅಭಿವೃದ್ಧಿಗೆ ಎಳ್ಳುನೀರು ಬಿಟ್ಟಂತಾಗಿದೆ. ನಾಳೆ ನಡೆಯುವ ಬೆಳಗಾವಿ ಚಳಿಗಾಲದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ