ಅವಧಿಗು ಮುನ್ನವೇ ಕಾಲುವೆ ಮುಖಾಂತರ ರೈತ ಜಮೀನಿಗೆ ನೀರು ಹರಿಸಿದ ಸಚಿವ ಶ್ರೀಮಂತ ಪಾಟೀಲ.
ತಾಲೂಕಿನ ಮಂಗಸೂಳಿ ಗ್ರಾಮದ ಸಮೀಪ ಇರುವ ಜಾಕ್ ವೆಲ್ ನಿಂದ ಕಾಲುವೆ ಮುಖಾಂತರ 15 ರಿಂದ 20ಹಳ್ಳಿಗಳ ರೈತರ ಸಾವಿರಾರು ಎಕರೆ ಜಮೀನಿಗೆ ನೀರೂಣಿಸುವ ಕಾರ್ಯಕ್ಕೆ ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಸಚಿವ ಶ್ರೀಮಂತ ಪಾಟೀಲ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಚಿವರು ಈ ವರ್ಷ ಮಹಾರಾಷ್ಟ್ರದಲ್ಲಿ ಮಾನ್ಸೂನ್ ಮಳೆ ಅವಧಿಗೂ ಮುನ್ನ ಧಾರಾಕಾರ ಸುರಿಯುತಿದ್ದರಿಂದ ಕರ್ನಾಟಕದ ಕೃಷ್ಣಾನದಿ ದಡದ ಗ್ರಾಮಗಳು ಪ್ರವಾಹ ಎದುರಿಸುವ ಸಾಧ್ಯತೆ ಇದೆ.ಹಾಗೂ ಕರ್ನಾಟಕದಲ್ಲಿ ಮಳೆ ಕೈಕೊಟ್ಟಿದ್ದರಿಂದ ಒಣಬೇಸಾಯ ಮಾಡುವ ಈ ಭಾಗದ ರೈತರಿಗೆ ಐನಾಪೂರ ಲಿಪ್ಟ ಹಾಗೂ ಮಂಗಸೂಳಿ ಲಿಪ್ಟ ಮುಖಾಂತರ ಕಾಲುವೆ ಮೂಲಕ ಸಾವಿರಾರು ಎಕರೆ ರೈತರ ಜಮೀನುಗಳಿಗೆ ಕಾಲುವೆ ಮೂಲಕ ನೀರು ಹರಿಸಲಾಗುತ್ತಿದೆ.ಈ ಬಾರಿ ಬರಗಾಲವಿರುವ ಸಂಭವಿರುವದರಿಂದ ರೈತರಿಗೆ ಅನೂಕೂಲವಾಗುವ ದೃಷ್ಟಿಯಿಂದ ಈ ಯೋಜನೆಯನ್ನು ಕೈಗೊಳ್ಳಲಾಗಿದೆ.ಇದರಿಂದ ಅನೇಕ ರೈತರಿಗೆ ಅನೂಕೂಲವಾಗಲಿದೆ ಎಂದರು
ಈ ವೇಳೆ ಸಹಾಯಕ ಕಾರ್ಯಪಾಲಕ ಅಭಿಯಂತರಾದ ಕೆ.ರವಿ,ಕಿರಿಯ ಇಂಜಿನಿಯರ್ ಪ್ರಶಾಂತ ಪೊತದಾರ,ಸಹಾಯಕ ಇಂಜಿನಿಯರ್ ಸಿ.ಡಿ.ಕಿಣಿಂಗೆ,ಸಾಗರ ಪವಾರ ಹಾಗೂ ಗ್ರಾಮಗ ಮುಖಂಡರು,ರೈತರು ಭಾಗಿಯಾಗಿದ್ದರು.
ಕಾಗವಾಡ ತಾಲ್ಲೂಕಿನಲ್ಲಿ ಮಂಗಸೂಳಿ ಗ್ರಾಮದ ಮಲ್ಲಯ್ಯಾ ದೇವಸ್ಥಾನ ಹತ್ತಿರ 150 ಸಸಿ ನೆಡುವ ಕಾರ್ಯಕ್ರಮಕ್ಕೆ ಇಂದು ಜೂನ್ 20-06-2020 ರಂದು ಜವಳಿ ಮತ್ತು ಅಲ್ಪ ಸಂಖ್ಯಾಂತರ ಅಭಿವ್ರದ್ದಿ ಸಚಿವ ಶ್ರೀಮಂತ ಪಾಟೀಲ ಚಾಲನೆ ನೀಡಿದರು
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಸಸಿ ನೆಡುವುದು ಮಾತ್ರ ಆಗಬಾರದು. ನೆಟ್ಟ ಸಸಿಯ ಪಾಲನೆ ಪೋಷಣೆ ಆಗಬೇಕು. ಅವು ಬೆಳೆದು ಹೆಮ್ಮರವಾಗುವಂತೆ ಅರಣ್ಯ ಇಲಾಖೆ ಕಾಳಜಿವಹಿಸಬೇಕು ಸಸಿಗಳಿಗೆ ಸರಿಯಾದ ಸಮಯಕ್ಕೆ ನೀರಿನ ವ್ಯವಸ್ಥೆ ಮಾಡಬೇಕು ಅದಕ್ಕೆ ಏನೇ ಸಹಾಯ ಬೇಕಾದರೂ ಮಾಡಲು ಸಿದ್ದ ಎಂದರು.
ಈ ವೇಳೆಯಲ್ಲಿ ಕಾಗವಾಡ ಉಪವಲಯ ಅರಣ್ಯಾಧಿಕಾರಿ ಪ್ರಶಾಂತ ಗಂಗಧರ, ತಾಲ್ಲೂಕ ಪಂಚಾಯತಿ ಕಾರ್ಯನಿರ್ವಾಹಕ ಅದಿಕಾರಿ ಈರಣಗೌಡ ಏಗಣಗೌಡರ, ಮಂಗಸೂಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಲ್ಲಯ್ಯಾ ಹಿರೇಮಠ ಇತರರು ಹಾಜರಿದ್ದರು.