ಬೆಳಗಾವಿ: ಗೋವಾವೇಸ್ ಪ್ರದೇಶದಲ್ಲಿನ ಬ್ಲಾಕ್’ಸ್ಪಾಟ್’ಗಳನ್ನು ನಗರಸೇವಕ ನೀತಿನ್ ಜಾಧವ್ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳ ನೇತೃತ್ವದಲ್ಲಿ ತೆರುವುಗೊಳಿಸಲಾಗಿದ್ದು, ಸಿಸಿಟ್ಹಿವಿಯನ್ನು ಅಳವಡಿಸಲಾಗಿದೆ. ಇಲ್ಲಿ ಯಾರಾದರೂ ಕಸವನ್ನು ಎಸೆದರೇ, ಸಾವಿರಾರು ರೂಪಾಯಿ ದಂಡ ವಿಧಿಸಿ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಲಾಗಿದೆ.
ಗೋವಾವೇಸ್ ಕಾರ್ಪೋರೇಷನ್ ಕಾಂಪ್ಲೇಕ್ಸಿನಲ್ಲಿದ್ದ ಡಸ್ಟ್’ಬೀನ್’ನನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿತ್ತು. ಅದನ್ನು ತೆರುವುಗೊಳಿಸಿ ಈ ಪ್ರದೇಶವನ್ನು ಸ್ವಚ್ಛಗೊಳಿಸಲಾಗಿದೆ. ಆದ್ದರಿಂದ ಇಲ್ಲಿನ ಜನರು ಡಸ್ಟ್’ಬೀನ್’ನಲ್ಲಿ ಕಸ ಎಸೆಯದೇ, ತ್ಯಾಜ್ಯ ವಿಲೇವಾರಿ ವಾಹನಗಳು ಬಂದಾಗ ಒಣ ಮತ್ತು ಹಸಿ ಕಸವನ್ನು ಬೇರ್ಪಡಿಸಿ ನೀಡಬೇಕು.
ಇಷ್ಟು ಮೀರಿ ಯಾರಾದರೂ ಬಂದು ಇಲ್ಲಿ ಕಸವನ್ನು ಎಸೆದರೇ, ಇಲ್ಲಿ ಅಳವಡಿಸಿರುವ ಸಿಸಿಟ್ಹಿವಿಯಲ್ಲಿ ಸೆರೆಯಾದ ದೃಶ್ಯವನ್ನು ಪರಿಶೀಲಿಸಿ, ಸಾವಿರಾರು ರೂಪಾಯಿ ದಂಡವಿಧಿಸಿ ಕಾರ್ಯಾಚರಣೆ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದರು.
ಇನ್ನು ಮಹಾನಗರ ಪಾಲಿಕೆಯ ಅಧಿಕಾರಿಗಳು ಮಾತನಾಡಿ, ಗೋವಾವೇಸ್ ಪ್ರದೇಶದಲ್ಲಿನ ಬ್ಲಾಕ್’ಸ್ಪಾಟಗಳನ್ನು ತೆರುವುಗೊಳಿಸಲಾಗಿದೆ. ಜನರು ಇಲ್ಲಿ ಕಸವನ್ನು ಎಸೆಯಬಾರದು. ಇಲ್ಲಿ ಕಸವನ್ನು ಎಸೆದರೇ ದಂಡ ವಿಧಿಸಲಾಗುವುದು. ಒಣ ಮತ್ತು ಹಸಿ ಕಸವನ್ನು ವಿಂಗಡಿಸಿ, ತ್ಯಾಜ್ಯವಿಲೇವಾರಿ ವಾಹನಗಳು ಬಂದಾಗ ನೀಡಬೇಕೆಂದು ಸಲಹೆಯನ್ನು ನೀಡಿದರು. ಈ ವೇಳೆ ಸ್ಥಳೀಯರು ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.