Breaking News

ಯುವಕನೋರ್ವ ವಿಶೇಷ ಚೇತನ ಯುವತಿಯ ಕೈ ಹಿಡಿಯುವ ಮೂಲಕ ಮಾದರಿ

Spread the love

ಧಾರವಾಡ: ಯುವಕನೋರ್ವ ವಿಶೇಷ ಚೇತನ ಯುವತಿಯ ಕೈ ಹಿಡಿಯುವ ಮೂಲಕ ಮಾದರಿಯಾಗಿದ್ದಾರೆ.

ನಗರದ ನಿವಾಸಿಯಾದ ವಿನಾಯಕ್ ಶಿಂಧೆ ಮತ್ತು ಮಿನಾಕ್ಷಿ ಕ್ಷೀರಸಾಗರ ಜೋಡಿ ಇಂದು ಹಸೆಮಣೆ ಎರಿದೆ. ಮೀನಾಕ್ಷಿ ಹುಟ್ಟಿದಾಗಿನಿಂದ ವಿಶೇಷ ಚೇತನೆ. ಇದು ಗೊತ್ತಿದ್ದರೂ ಯುವಕ ಮೀನಾಕ್ಷಿಯನ್ನು ವರಿಸಿಕೊಳ್ಳಲು ಒಪ್ಪಿದ್ದು, ನಗರದ ಸೈದಾಪೂರದ ನಿವಾಸಿಯಾದ ಮೀನಾಕ್ಷಿ ಜೊತೆ ಕಮಲಾಪುರದ ನಿವಾಸಿ ವಿನಾಯಕ ವಿವಾಹವಾಗಿದ್ದಾರೆ.

ವಿನಾಯಕ್ ಮೊದಲಿನಿಂದಲೂ ವಿಶೇಷ ಚೇತನ ಹುಡುಗಿ ಕೈ ಹಿಡಿಯಬೇಕೆಂಬ ಸಂಕಲ್ಪ ಹೊಂದಿದ್ದರು. ಮೀನಾಕ್ಷಿ ವಿಶೇಷ ಚೇತನ ಯುವತಿ ಎಂಬುದನ್ನು ಅರಿತು ಪೋಷಕರ ಸಮ್ಮುಖದಲ್ಲಿ ಮೀನಾಕ್ಷಿಯವರನ್ನು ನೋಡಿ ಬಂದಿದ್ದರು. ಎಲ್ಲರೂ ಒಪ್ಪಿಗೆ ಸೂಚಿಸಿದ್ದರಿಂದ ಧಾರವಾಡ ಅಕ್ಕನ ಬಳಗ ಕಲ್ಯಾಣ ಮಂಟಪದಲ್ಲಿ ಇಂದು ಮದುವೆ ನಡೆಯಿತು.

ಈ ವಿವಾಹದಿಂದ ವರ ಎಷ್ಟು ಸಂತೋಷವಾಗಿದ್ದಾನೋ ಗೊತ್ತಿಲ್ಲ. ಆದರೆ ವಧು ಮಾತ್ರ ಸಂತೋಷವಾಗಿದ್ದಾಳೆ. ತನ್ನ ಈ ಸಮಸ್ಯೆಯಿಂದ ಯಾರಾದರೂ ಬಾಳ ಸಂಗಾತಿ ಸಿಗುತ್ತಾನೋ ಇಲ್ಲವೋ ಎಂದುಕೊಂಡಿದ್ದ ಮೀನಾಕ್ಷಿಗೆ ಇವತ್ತು ಅದ್ಧೂರಿ ವಿವಾಹವಾಯಿತು. ಎರಡು ಕುಟುಂಬದ ಸದಸ್ಯರ ಜೊತೆ ಸ್ನೇಹಿತರು ಸಾಕ್ಷಿಯಾದರು.


Spread the love

About Laxminews 24x7

Check Also

ಧಾರವಾಡದ ಹಿರಿಯ ಪತ್ರಿಕಾ ಫೋಟೋಗ್ರಾಫರ್ ಆರ್ ಕೆ ( ರಾಮಚಂದ್ರ ಕುಲಕರ್ಣಿ) ಇನ್ನಿಲ್ಲ

Spread the loveಧಾರವಾಡ: ಆರ್ ಕೆ ಖ್ಯಾತಿಯ ಹಿರಿಯ ಪತ್ರಿಕಾ ಪೋಟೋಗ್ರಾಫರಾಗಿ ಎಲ್ಲರೊಂದಿಗೆ ಸ್ನೇಹದಿಂದ ಇರುತ್ತಿದ್ದ ರಾಮಚಂದ್ರ ಕುಲಕರ್ಣಿ ಇಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ