ವಿಶ್ರಾಂತಿಯಲ್ಲಿದ್ದ ಸಚಿವೆ ಹೆಬ್ಬಾಳ್ಕರ್ ಜನರಿಂದ ಅಹವಾಲು ಸ್ವೀಕಾರ
ಸಂಕ್ರಾಂತಿಯ ಹಬ್ಬದಂದು ಕಿತ್ತೂರು ತಾಲೂಕಿನ ಅಂಬಡಗಟ್ಟಿಯಲ್ಲಿ ರಸ್ತೆ ಅಪಘಾತವಾದ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶುಕ್ರವಾರ ಕುವೆಂಪು ನಗರದ ನಿವಾಸದಲ್ಲಿ ಸಾರ್ವಜನಿಕರ ಆಹವಾಲನ್ನು ಸ್ವೀಕರಿಸಿದರು.
ಗ್ರಾಮೀಣ ಮತಕ್ಷೇತ್ರದ ಜನರು ವಿವಿಧ ಸಮಸ್ಯೆಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮುಂದೆ ಅಳಲು ತೋಡಿಕೊಂಡರು. ಸ್ಥಳದಲ್ಲಿಯೇ ಕೆಲ ಜನರ ಸಮಸ್ಯೆ ಬಗೆ ಹರಿಸಿದ ಸಚಿವೆ ಲಕ್ಷ್ಮೀ ಸಂಭಂಧಿಸಿದ ಅಧಿಕಾರಿಗಳ ಜೊತೆಗೆ ದೂರವಾಣಿ ಕರೆ ಮಾಡಿ ಜನರ ಸಮಸ್ಯೆ ಬಗೆ ಹರಿಸುವಂತೆ ತಾಕೀತು ಮಾಡಿದರು.