ಹುಕ್ಕೇರಿ : ನಮ್ಮ ದೇಶದಲ್ಲಿ ಹಿಂದ್ವಿ ಸಾಮ್ರಜ್ಯ ಸ್ಥಾಪನೆಯಾಗಬೇಕು ಆಗ ಮಾತ್ರ ಛತ್ರಪತಿ ಶಿವಾಜಿ ಮಹಾರಾಜರ ಆತ್ಮಕ್ಕೆ ಶಾಂತಿ ಲಭಿಸುತ್ತದೆ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು. ಅವರು ಇಂದು ಹುಕ್ಕೇರಿ ನಗರದಲ್ಲಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪಟ್ಟಣದ ಅಡವಿ ಸಿದ್ಧೇಶ್ವರ ಮಠದ ಹತ್ತಿರ ನೂತನವಾಗಿ ಪ್ರತಿಷ್ಟಾಪಿಸಿದ ಶಿವಾಜಿ ಮಹಾರಾಜರ ಅಶ್ವಾರೂಢ ಪ್ರತಿಮೆಯನ್ನು ನಿಡಸೋಶಿ ಮಠದ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳ ಮತ್ತು ಕ್ಯಾರಗುಡ್ಡದ ಅಭಿನವ ಮಂಜುನಾಥ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಶಾಸಕ ನಿಖಿಲ್ ಕತ್ತಿ ಲೋಕಾರ್ಪಣೆ ಮಾಡಿದರು.
ಇದಕ್ಕೂ ಮೊದಲು ಕೋರ್ಟ ಸರ್ಕಲ್ ಬಳಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ಮತ್ತು ಭವಾನಿ ದತ್ತಪೀಠದ ಮರಾಠ ಜಗದ್ಗುರು ಮಂಜುನಾಥ ಭಾರತಿ ಮಹಾಸ್ವಾಮಿಗಳು ಶಿವಾಜಿ ಪ್ರತಿಮೆಗೆ ಪೂಜೆ ಸಲ್ಲಿಸಿ ಬರಮಾಡಿಕೊಂಡು ಮಾದ್ಯಮಗಳೊಂದಿಗೆ ಮಾತನಾಡುತ್ತಾ ಇಂದು ಹುಕ್ಕೇರಿ ನಗರದಲ್ಲಿ ಹಿಂದೂ ಸಾಮ್ರಾಟ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಟಾಪನೆ ಯಾಗುತ್ತಿರುವದು ಅತಿವ ಸಂತೋಷದಾಯಕ ,ಶಿವಾಜಿ ಮಹಾರಾಜರು ದೇಶ ಭಕ್ತಿ ಎಲ್ಲರೂ ಮೈಗೂಡಿಸಿ ಕೋಳ್ಳ ಬೇಕು , ಹಿಂದೂಸ್ಥಾನದಲ್ಲಿ ದೇಶ ಭಕ್ತಿ ಜಾಗ್ರತ ವಾಗಿದೆ ಎಂದರು
ನಂತರ ವಾದ್ಯ ಮೇಳ ಮತ್ತು ಮಹಿಳೆಯರ ಕುಂಭ ಮೇಳ ಗಳೊಂದಿಗೆ ಪ್ರತಿಮೆ ಯನ್ನು ಮೇರವಣೆಗೆ ಮೂಲಕ ತರಲಾಯಿತು. ಬೆಂಗಳೂರು ಗೋ ಸಾಯಿ ಮಹಾಸಂಸ್ಥಾನದ ಜಗದ್ಗುರು ಮಾತನಾಡಿ 398 ವರ್ಷಗಳ ಹಿಂದೆ ಮಾನವ ಕುಲಕ್ಕೆ ಕೋಟ್ಟ ನ್ಯಾಯ, ನಿಯಮ, ಅವರು ನಡೆದ ದಾರಿ ಇಡಿ ಭಾರತ ದೇಶ ವಲ್ಲಾ ವಿಶ್ವದ ಮಾನವ ಕುಲಕ್ಕೆ ಆಚರಣೆಯಾಗಿದೆ ಆದ್ದರಿಂದ ಛತ್ರಪತಿ ಶಿವಾಜಿ ಮಹಾರಾಜರು ವಿಶ್ವದ ನಾಯಕರಾಗಿದ್ದಾರೆ ಎಂದರು
ನಂತರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಂಸದ ರಮೇಶ ಕತ್ತಿ ಮತ್ತು ಶಾಸಕ ನಿಖಿಲ್ ಕತ್ತಿ ಆಶ್ವರೂಢ ಶಿವಾಜಿ ಮಹಾರಾಜರ ಬೃಹತ್ ಪ್ರತಿಮೇಗೆ ಮಾಲಾರ್ಪಣೆ ಮಾಡಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ರಮೇಶ ಕತ್ತಿ ಶಿವಾಜಿ ಮಹಾರಾಜರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಅವರ ಆದರ್ಶ ವಿಚಾರಗಳನ್ನು ಜಾರಿಗೆ ತರುವ ಮುಖಾಂತರ ಹಿಂದ್ವಿ ಸಾಮ್ರಾಜ್ಯವನ್ನು ನಮ್ಮ ದೇಶದಲ್ಲಿ ,ರಾಜ್ಯದಲ್ಲಿ ,ಜಿಲ್ಕೆಯಲ್ಲಿ ಸ್ಥಾಪಿಸಲು ಕಾರ್ಯ ಪ್ರವ್ರತ್ತರಾಗ ಬೇಕು ಎಂದು ಸಲಹೆ ನೀಡಿದರು.
ವೇದಿಕೆ ಮೇಲೆ ಶ್ಯಾಮ ಸುಂದರ ಗಾಯಕವಾಡ, ಸಂಕೇಶ್ವರ ಪುರಸಭೆ ಅದ್ಯಕ್ಷೆ ಸೀಮಾ ಹತನೂರೆ, ಅಮರ ನಲವಡೆ, ಮಹಾವೀರ ನಿಲಜಗಿ, ಬಂಡೂ ಹತನೂರೆ, ಅಶೋಕ ಪಟ್ಟಣಶೆಟ್ಟಿ, ಕಿರಣಸಿಂಗ ರಜಪೂತ ಮತ್ತು ಸ್ವಾಗತ ಸಮಿತಿ ಅದ್ಯಕ್ಷ ಪ್ರಸಾದ ಖಾಡೆ, ರಮೇಶ ತೇರಣಿ, ಡಾ, ಸುರೇಶ ಉಪಾಸೆ, ಸಿದ್ದೇಶ ಬೆನಾಡಿಕರ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಸೇವಾ ಸಂಘ ಹುಕ್ಕೇರಿ ಹಾಗೂ ಸಮಸ್ತ ಮರಾಠಾ ಸಮಾಜದ ಮುಖಂಡರು ,ಸಾರ್ವಜನಿಕರು ಹೇಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.