Breaking News

ಚಾಲಕ ಇಳಿದು ಹೋಗುತ್ತಿದ್ದಂತೆ ಆತನ ಹಿಂದೆಯೇ ಚಲಿಸಿ ಅಂಗಡಿಗೆ ನುಗ್ಗಿದ ಡೀಸೆಲ್ ಟ್ಯಾಂಕರ್!

Spread the love

ಕಲಬುರಗಿ, ಫೆಬ್ರವರಿ 14: ಕಲಬುರಗಿ ಜಿಲ್ಲೆ ಶಹಬಾದ್ ತಾಲೂಕಿನ ಭಂಕೂರು ಗ್ರಾಮದಲ್ಲಿ ಚಾಲಕನ ನಿರ್ಲಕ್ಷ್ಯದಿಂದ ಡಿಸೆಲ್ ಟ್ಯಾಂಕರ್ ಅಂಗಡಿಯೊಂದಕ್ಕೆ ನುಗ್ಗಿದೆ.

ಟ್ಯಾಂಕರ್‌ನ ಹ್ಯಾಂಡ್‌ಬ್ರೇಕ್ ಹಾಕದೇ ನಿಲ್ಲಿಸಿದ್ದ ಚಾಲಕ ಕಿರಾಣಿ ಅಂಗಡಿಗೆ ಹೋಗಿದ್ದ. ಈ ವೇಳೆ ಡ್ರೈವರ್ ಹಿಂದೆಯೇ ಡೀಸೆಲ್ ಟ್ಯಾಂಕರ್ ಕಿರಾಣ ಅಂಗಡಿಗೆ ನುಗ್ಗಿದೆ.

ವಿಜಪ್ಪಗೌಡ ಎಂಬವರಿಗೆ ಸೇರಿದ ಕಿರಾಣಿ ಅಂಗಡಿ ಇದಾಗಿದ್ದು, ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ. ಕಿರಾಣ ಅಂಗಡಿ ಸಂಪೂರ್ಣ ಜಖಂಗೊಂಡಿದೆ. ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ