ಧಾರವಾಡ: ಆರ್ ಕೆ ಖ್ಯಾತಿಯ ಹಿರಿಯ ಪತ್ರಿಕಾ ಪೋಟೋಗ್ರಾಫರಾಗಿ ಎಲ್ಲರೊಂದಿಗೆ ಸ್ನೇಹದಿಂದ ಇರುತ್ತಿದ್ದ ರಾಮಚಂದ್ರ ಕುಲಕರ್ಣಿ ಇಂದು ಬೆಳಗಿನ ಜಾವ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಇಂದು 12 ಗಂಟೆಗೆ ಯಾಲಕ್ಕಿಶೆಟ್ಟರ್ ಕಾಲನಿಂಯಿಂದ ಅಂತಿಮ ಯಾತ್ರೆ ನಡೆಯಲಿದೆ.
ಆರೋಗ್ಯ ಸಮಸ್ಯೆಯಿಂದ ಇತ್ತೀಚೆಗೆ ಅಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಬೆಳಗಿನ ಜಾವ ನಿಧನರಾಗಿದ್ದಾರೆ. ಅಪಾರ ಸ್ನೇಹ ಬಳಗವನ್ನು ಹೊಂದಿದ್ದ ರಾಮಚಂದ್ರ ಕುಲಕರ್ಣಿ ಅವರ ನಿಧನ ಎಲ್ಲರಿಗೂ ನೋವುಂಟು ಮಾಡಿದೆ.
ಆರ್ ಕೆ ಛಾಯಾ ಫೌಂಡೇಶನ್ ವತಿಯಿಂದ ನೂರಾರು ಬಡ ವಿದ್ಯಾರ್ಥಿಳ ಶಿಕ್ಷಣಕ್ಕೆ ನೆರವು ನೀಡುತ್ತಾ ಬಡ ಮಕ್ಕಳ ಶಿಕ್ಷಣ ಅಭಿವೃದ್ಧಿಗಾಗಿ ಆರ್ ಕೆ ಅವರು ಶ್ರಮುಸುತ್ತಿದ್ದರು. ಎಲ್ಲರೊಂದಿಗೆ ನಗು ಮುಖದೊಂದಿಗೆ ಮಾತು ಆರಂಭಿಸುತ್ತಿದ್ದರು. ಯಾರೇ ಕಿರಿಯ ಪತ್ರಕರ್ತರು ವೃತಿ ಆರಂಭಿಸುತ್ತಿದ್ದಾರೆ ಅಂತಾ ಕೇಳಿದ್ರೆ ಅವರನ್ನು ಆತ್ಮೀಯವಾಗಿ ಮಾತಾಡಿಸಿ ಪರಿಚಯ ಮಾಡಿಕೊಂಡು ಸ್ನೇಹಮಯಿಯಾಗಿ ನಡೆದುಕೊಳ್ಳುತ್ತಿದ್ದರು. ತಮ್ಮ ಅತ್ಯುತ್ತಮ ಛಾಯ ಚಿತ್ರ ಸೆರೆ ಹಿಡಿತದಿಂಲ್ಲೇ ಅನೇಕ ಪ್ರಶಸ್ತಿಗಳ ಅರ್ ಕೆ ಅವರಿಗೆ ಲಭಿಸಿತ್ತು. ಅವರ ಅಕಾಲಿಕ ನಿಧನಕ್ಕೆ ಮಾಧ್ಯಮ ಬಳಗ ಕಂಬನಿ ಮುಡಿಯುತ್ತಿದ್ದಾರೆ.
ಇಂದು ಬುಧವಾರ ಅರ್ ಕೆ ಅವರ ಅಂತ್ಯಕ್ರಿಯೆಯ ಅಂತಿಮ ಯಾತ್ರೆಯು ಧಾರವಾಡ ಶೆಟ್ಟರ ಕಾಲನಿ ಶಂಕರಮಠದ ನಿವಾಸದಿಂದ 12 ಗಂಟೆಗೆ ಹೊರಡಲಿದ್ದು, ಆರ್ ಕೆ ಖ್ಯಾತಿಯ ಹಿರಿಯ ಪತ್ರಿಕಾ ಫೋಟೋಗ್ರಾಫರ್ ರಾಮಚಂದ್ರ ಕುಲಕರ್ಣಿ ಇನ್ನು ನೆನಪು ಮಾತ್ರರಾಗಿದ್ದಾರೆ.