ನವದೆಹಲಿ: ವಿಶ್ವದ ಅತೀ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಎತ್ತರ ಮತ್ತಷ್ಟು ಹೆಚ್ಚಿದೆ ಎಂದು ನೇಪಾಳ ಹಾಗೂ ಚೀನಾ ಹೇಳಿವೆ.ಹೊಸ ಅಧ್ಯಯನದ ಪ್ರಕಾರ ಮೌಂಟ್ ಎವರೆಸ್ಟ್ ಎತ್ತರ 8,848.86 ಮೀಟರ್ ಎಂದು ನೇಪಾಳ ಮತ್ತು ಚೀನಾ ಜಂಟಿಯಾಗಿ ಘೋಷಣೆ ಮಾಡಿವೆ. ಈ ಮೂಲಕ ಮೌಂಟ್ ಎವರೆಸ್ಟ್ ಮತ್ತಷ್ಟು ಎತ್ತರ ಬೆಳೆದಿದೆ. 1954ಕ್ಕೆ ಹೋಲಿಸಿದರೆ ಮೌಂಟ್ ಎವರೆಸ್ಟ್ ಎತ್ತರ 86 ಸೆಂಟಿಮೀಟರ್ ಹೆಚ್ಚಿದೆ ಎಂದು ತಿಳಿಸಿದೆ.
2015ರಲ್ಲಿ ಸಂಭವಿಸಿದ ಭೂಕಂಪ ಸೇರಿದಂತೆ ಹಲವು ಕಾರಣಗಳಿಂದಾಗಿ ಪರ್ವತದ ಎತ್ತರ ಹೆಚ್ಚಿರಬಹುದು ಎನ್ನಲಾಗಿದ್ದು, ನೇಪಾಳ ಸರ್ಕಾರ ನಿರ್ಧರಿಸಿತ್ತು. ಇದೀಗ ಎರಡೂ ದೇಶಗಳು ಮೌಂಟ್ ಎವರೆಸ್ಟ್ ಎತ್ತರ ಹೆಚ್ಚಿದ ಕುರಿತು ಘೋಷಿಸಿವೆ. 1954ರಲ್ಲ ಭಾರತದ ನಡೆಸಿದ ಸಮೀಕ್ಷೆ ಪ್ರಕಾರ ಮೌಂಟ್ ಎವರೆರಸ್ಟ್ ಎತ್ತರ 8,848 ಮೀ. ಇತ್ತು. ಬಳಿಕ 1975 ಹಾಗೂ 2005ರಲ್ಲಿ ಚೀನಾದ ಸರ್ವೇಯರ್‍ಗಳು ನಡೆಸಿದ 6 ಸುತ್ತಿನ ಸಮೀಕ್ಷೆ ಹಾಗೂ ಸಂಶೋಧನೆಯಲ್ಲಿ ಮೌಂಟ್ ಎವರೆಸ್ಟ್ ಎತ್ತರ 8,848.13 ಮೀಟರ್ ಹಾಗೂ 8,844.43 ಮೀ. ಎಂದು ದಾಖಲಿಸಲಾಗಿದೆ.
ಮೌಂಟ್ ಎವರೆಸ್ಟ್ ತುದಿಯ ಮೂಲಕ ಗಡಿ ರೇಖೆ ಸಾಗುವುದಕ್ಕೆ ಒಪ್ಪಿಗೆ ನೀಡಿ 1961ರಲ್ಲಿ ಚೀನಾ ಹಾಗೂ ನೇಪಾಳ ಗಡಿ ಸಮಸ್ಯೆಯನ್ನು ಇತ್ಯರ್ಥಗೊಳಡಿಸಿಕೊಂಡಿದ್ದವು. ಮೌಂಟ್ ಎವರೆಸ್ಟ್ ನಿಖರ ಎತ್ತರ ಪತ್ತೆಯಿಂದ ಹಿಮಾಲಯ ಹಾಗೂ ಕ್ವಿನ್‍ಘೈ-ಟಿಬೆಟ್ ಪ್ರಸ್ಥಭೂಮಿಯಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ಅಧ್ಯಯನ ನಡೆಸಲು ಸಹಕಾರಿಯಾಗಲಿದೆ ಎಂದು ಚೈನೀಶ್ ಅಕಾಡೆಮಿ ಆಫ್ ಸೈನ್ಸ್ ನ ವಿಜ್ಞನಿ ಗಾವ್ ಡೆಂಗೈ ತಿಳಿಸಿದ್ದಾರೆ.