Breaking News

ನೀವು ಸೈಬರ್ ಅಪರಾಧದ ಬಲಿಪಶುಗಳೇ” ಡಯಲ್ 1930

Spread the love

ಬೆಳಗಾವಿ: ಬೆಳಗಾವಿ ನಗರದಲ್ಲಿ ಸೈಬರ್ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಅವುಗಳನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಮುಂದಾಗಿದೆ. ಅದರ ಭಾಗವಾಗಿ 1930 ಸಹಾಯವಾಣಿಗೆ ಇಂದು ಚಾಲನೆ ನೀಡಲಾಯಿತು. ಬೆಳಗಾವಿ ನಗರದ ಹೃದಯಭಾಗ ರಾಣಿ ಚನ್ನಮ್ಮ ವೃತ್ತದಲ್ಲಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ 1930 ಸಹಾಯವಾಣಿಗೆ ಚಾಲನೆ ನೀಡಿದರು.

ಚನ್ನಮ್ಮ ಪ್ರತಿಮೆ ಸುತ್ತಲೂ ಜಾಗೃತಿ ಫಲಕ ಅಳವಡಿಸಲಾಗಿದೆ. ಅದೇ ರೀತಿ ಬೃಹದಾಕಾರದ ಫ್ಲೆಕ್ಸ್​ನಲ್ಲಿ “ನೀವು ಸೈಬರ್ ಅಪರಾಧದ ಬಲಿಪಶುಗಳೇ” ಡಯಲ್ 1930 ಎಂಬ ಸಂದೇಶವನ್ನು ಸಾರಲಾಗುತ್ತಿದೆ.

ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, “ಮೊಬೈಲ್ ಬಳಕೆ ಹೆಚ್ಚಾಗಿದ್ದರಿಂದ ಸೈಬರ್ ಅಪರಾಧ ಪ್ರಕರಣಗಳು ಅಧಿಕವಾಗಿವೆ. ಅವುಗಳನ್ನು ಅಧ್ಯಯನ ಮಾಡಿದಾಗ ಜನರಿಗೆ ಜಾಗೃತಿ ಕೊರತೆ ಇರುವುದು ಕಂಡು ಬಂದಿದೆ. ಹಾಗಾಗಿ, ಜಾಗೃತಿ ಅಭಿಯಾನ ಶುರು ಮಾಡಿದ್ದೇವೆ. ನಗರದ ವಿವಿಧೆಡೆ 70 ಫ್ಲೆಕ್ಸ್​ಗಳನ್ನು ಅಳವಡಿಸಲಾಗಿದೆ. ಎರಡನೇಯ ಹಂತವಾಗಿ ಶಾಲಾ – ಕಾಲೇಜು ಮತ್ತು ಸರ್ಕಾರಿ ಕಚೇರಿಗಳಲ್ಲಿಯೂ ಜಾಗೃತಿ ಮೂಡಿಸಲಾಗುವುದು. ಸೈಬರ್ ಪ್ರಕರಣಗಳಲ್ಲಿ ವಂಚನೆಗೆ ಒಳಗಾದವರು ತಕ್ಷಣವೇ 1930 ನಂಬರ್​ಗೆ ಕರೆ ಮಾಡಿ” ಎಂದು ಕೋರಿದರು.

ಕಳೆದ ವರ್ಷ 4 ಡಿಜಿಟಲ್ ಅರೆಸ್ಟ್ ಪ್ರಕರಣಗಳು ದಾಖಲಾಗಿವೆ. ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ. ಇನ್ನುಳಿದ ಆರೋಪಿಗಳನ್ನು ಪತ್ತೆ ಹಚ್ಚಬೇಕಿದೆ. ಅಪರಿಚಿತ ಮೊಬೈಲ್ ನಂಬರ್ ಮೂಲಕ ಬರುವ ಎಪಿಕೆ ಫೈಲ್ ಕಳಿಸಿ ನಿಮಗೆ ಲೋನ್ ಸಿಗುತ್ತದೆ ಎಂದು ಆರೋಪಿಗಳು ವಂಚಿಸುತ್ತಿದ್ದಾರೆ. ಈ ಎಲ್ಲದರ ಕುರಿತು ಜನರು ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದರು.


Spread the love

About Laxminews 24x7

Check Also

ವೃದ್ಧಾಶ್ರಮವಾಗುತ್ತಿದೆ ಬೆಳಗಾವಿ ಬಿಮ್ಸ್; ಇಳಿ ವಯಸ್ಸಿನಲ್ಲಿ ಮಕ್ಕಳಿದ್ದರೂ ಅನಾಥವಾಗುತ್ತಿದ್ದಾರೆ ತಂದೆ-ತಾಯಿಯರು…!!!

Spread the love ಮಕ್ಕಳಿಲ್ಲ ಎನ್ನುವವರು ಮಕ್ಕಳಿದ್ದವರ ಪರಿ ಏನಾಗುತ್ತಿದೆ ನೋಡಿ…!!! ವೃದ್ಧಾಶ್ರಮವಾಗುತ್ತಿದೆ ಬೆಳಗಾವಿ ಬಿಮ್ಸ್; ಇಳಿ ವಯಸ್ಸಿನಲ್ಲಿ ಮಕ್ಕಳಿದ್ದರೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ