Breaking News

ಬೆಳಗಾವಿ ಕೆ.ಎಲ್.ಇ ಆಸ್ಪತ್ರೆ ಎದುರಿನ ಬೈಕ್ ಕದಿಯುತ್ತಿದ್ದ ಕಳ್ಳ ಅಂದರ್; ಒಟ್ಟು 4 ಬೈಕ್ ವಶ.

Spread the love

ಬೆಳಗಾವಿ:  ಎಪಿಎಂಸಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿನ ಕೆಎಲ್ಇ ಆಸ್ಪತ್ರೆಯ ಮುಂದುಗಡೆ ನಿಲಿಸಲಾಗಿರುವ ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದ ಕಳ್ಳನ ಪತ್ತೆ ಹಚ್ಚಿ ಆತನಿಂದ ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಎಪಿಎಮ್ ಸಿಯ ಪೋಲಿಸ್ ಇನ್ಸ್ಪೆಕ್ಟರ್ ಯು.ಎಸ್.ಅವಟಿ ಅವರು ತನ್ನ ತಂಡದೊಂದಿಗೆ ಕಾಕತಿಯ ಅಂಬೇಡ್ಕರಗಲ್ಲಿಯ ಮೋಹಮ್ಮದ ಶಾಯಿದ ಅಬ್ದುಲ್ ಹಮೀದ್ ಮುಲ್ಲಾ ಈತನನ್ನು ಪತ್ತೆ ಹಂಚಿ ತನಿಖೆ ನಡೆಸಿ ಕಳ್ಳತನ ಮಾಡಿದ ಎರಡು ಹಿರೋ ಹೊಂಡಾ ಸ್ಪೆಂಡರ್, ಒಂದು ಹೋಂಡಾ ಆಕ್ಟಿವಾ, ಒಂದು ಬಝಾಜ್ ಡಿಸ್ಕವರ ಹೀಗೆ ಒಟ್ಟು ನಾಲ್ಕು ದ್ವಿಚಕ್ರ ವಾಹನಗಳು ಸುಮಾರು ಅಂದಾಜು 1,12,000 ಮೌಲ್ಯದ ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ ಮುಂದಿನ ತನಿಖೆ ನಡೆಸುತ್ತಿದ್ದಾರೆ ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ತ್ರಿವೇಣಿ ನಾಟೀಕರ, ಎಸ್.ಆರ್.ಮುತ್ತತ್ತಿ,ಬಿ.ಕೆ.ಮಿಟಗಾರ, ಎಎಸ್ಐ ಬಸವರಾಜ ನರಗುಂದ, ಖಾದರ್ ಸಾಬ್ ಖಾನಮ್ಮನವರ, ಗೋವಿಂದಪ್ಪ ಪೂಜಾರ, ರಮೇಶ್ ಅಕ್ಕಿ, ಮಹಾದೇವ ಬಶೀದ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.


Spread the love

About Laxminews 24x7

Check Also

ಅಟೊ ರೀಕ್ಷಾದಲ್ಲಿ ಪ್ರೇಮಿಗಳ್ಳಿಬ್ಬರು ನೇಣಿಗೆ ಶರಣು

Spread the loveಅಟೊ ರೀಕ್ಷಾದಲ್ಲಿ ಪ್ರೇಮಿಗಳ್ಳಿಬ್ಬರು ನೇಣಿಗೆ ಶರಣು ಸುಮಾರು ದಿನಗಳಿಂದ ಪ್ರೀತಿಸುತ್ತಿದ್ದ ಇಬ್ಬರು ಪ್ರೇಮಿಗಳು ಅಟೊ ರೀಕ್ಷಾದಲ್ಲಿ ನೇಣಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ