Breaking News

ಭವಿಷ್ಯ ಹೇಳುತ್ತಿರುವ ಆರ್. ಅಶೋಕ ಬಳಿ ನಾನು ಕೂಡ ಭವಿಷ್ಯ ಕೇಳಲು ಹೋಗಿ ಬರ್ತೇನೆ: ಡಿ.ಕೆ. ಶಿವಕುಮಾರ್

Spread the love

ಬೆಂಗಳೂರು: ನನಗೂ ಜ್ಯೋತಿಷ್ಯ ಶಾಸ್ತ್ರದ ಚಟವಿದೆ. ಆರ್. ಅಶೋಕ ಬೋರ್ಡ ಹಾಕಿಕೊಂಡಿದ್ದಾರೆ. ಸ್ವಲ್ಪ ಸಮಯ ತೆಗೆದುಕೊಂಡು ತಾವೂ ಕೂಡ ಅವರ ಬಳಿ ಜ್ಯೋತಿಷ್ಯ ಕೇಳಿ ಬರುತ್ತೇನೆಂದು ಸಿಎಂ ಬದಲಾವಣೆ ಭವಿಷ್ಯ ನುಡಿದಿರುವ ವಿಪಕ್ಷ ನಾಯಕ ಆರ್. ಅಶೋಕ ಅವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಟಾಂಗ್ ನೀಡಿದರು.

ಸಿಎಂ ಬದಲಾವಣೆಗೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್. ಅಶೋಕ ನೀಡಿರುವ ಹೇಳಿಕೆ ಟಾಂಗ್ ನೀಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನನಗೂ ಜ್ಯೋತಿಷ್ಯ ಶಾಸ್ತ್ರದ ಚಟವಿದೆ. ಆರ್. ಅಶೋಕ ಬೋರ್ಡ ಹಾಕಿಕೊಂಡಿದ್ದಾರೆ. ಸ್ವಲ್ಪ ಸಮಯ ತೆಗೆದುಕೊಂಡು ತಾವೂ ಕೂಡ ಅವರ ಬಳಿ ಜ್ಯೋತಿಷ್ಯ ಕೇಳಲು ಹೋಗುವುದಾಗಿ ತಿಳಿಸಿದರು.

ಇನ್ನು ಜೆಡಿಎಸ್ ಶಾಸಕರ ಬಗ್ಗೆ ತಾವು ಮಾತನಾಡಿಲ್ಲ. ಬಹಳಷ್ಟು ಜನತಾ ದಳದ ಕಾರ್ಯಕರ್ತರು ತಮ್ಮ ಭವಿಷ್ಯವನ್ನು ನೋಡಿಕೊಳ್ಳುತ್ತಿದ್ದಾರೆ. ಹಲವಾರು ಜನರು ಕಾಂಗ್ರೆಸಗೆ ಸೇರ್ಪಡೆಯಾಗಲು ಯೋಚಿಸುತ್ತಿದ್ದಾರೆ. ಜ್ಯಾತ್ಯಾತೀತವಾಗಿ ಕೆಲಸ ಮಾಡಲು ಇಚ್ಛಿಸುವವರು ನಮ್ಮ ಪಕ್ಷಕ್ಕೆ ಸೇರಬಹುದು ಎಂದರು. ಯಾವುದೇ ಶಾಸಕರೂ ನಮ್ಮನ್ನು ಸಂಪರ್ಕಿಸಿಲ್ಲ. ಇದೆಲ್ಲ ಊಹಾಪೋಹ ಎಂದರು.


Spread the love

About Laxminews 24x7

Check Also

ತುರ್ತು ಪ್ರತಿಕ್ರಿಯೆ ಸಹಾಯಕ್ಕೆ 112 ಜೊತೆ 14416 ಸಂಯೋಜನೆ

Spread the loveಬೆಂಗಳೂರು: ಮಾನಸಿಕ ಆರೋಗ್ಯ ಸಂಕಷ್ಟ ಅನುಭವಿಸುತ್ತಿರುವ ವ್ಯಕ್ತಿಗಳಿಗೆ ಸಮಯೋಚಿತ ಸಹಾಯ ಒದಗಿಸಲು ಹಾಗೂ ಆತಹತ್ಯೆ ಅಪಾಯ ಸೇರಿದಂತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ