Breaking News

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅನಾರೋಗ್ಯದ ಮಧ್ಯೆಯೂ ನಿಲ್ಲದ ಯೋಜನೆಗಳ ಸರಣಿ

Spread the love

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಮೆರವಣಿಗೆ
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅನಾರೋಗ್ಯದ ಮಧ್ಯೆಯೂ ನಿಲ್ಲದ ಯೋಜನೆಗಳ ಸರಣಿ
ಬೆಳಗಾವಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರೂ ಆಗಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರ ಅನಾರೋಗ್ಯದ ಮಧ್ಯೆಯೂ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ಮುಂದುವರಿದಿವೆ.
ನಿತ್ಯ ಒಂದಿಲ್ಲೊಂದು ಅಭಿವೃದ್ಧಿ ಯೋಜನೆಗಳಿಗೆ ಸಚಿವರ ಸಹೋದರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಇಲ್ಲವೇ, ಸ್ಥಳೀಯ ಜನಪ್ರತಿನಿಧಿಗಳು ಪೂಜೆ ಸಲ್ಲಿಸಿ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಿದ್ದಾರೆ.
ಭಾನುವಾರ ಕ್ಷೇತ್ರದ ಹೊನ್ನಿಹಾಳ ಗ್ರಾಮದ ಎಸ್.ಸಿ.ಕಾಲೋನಿಯ ರಸ್ತೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸುಮಾರು 50 ಲಕ್ಷ ರೂ,ಗಳ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗೆ ಚನ್ನರಾಜ ಹಟ್ಟಿಹೊಳಿ ಭೂಮಿ‌ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪ್ರಕಾಶ ಕಡ್ಯಾಗೋಳ, ಶಿವಾನಂದ ಮಠದ, ಮಹಾದೇವ ತಳವಾರ, ಸುರೇಖಾ ಕಟಬುಗೋಳ, ಗುಂಡು ತಳವಾರ, ರಾಜು ತಳವಾರ, ಸುರೇಶ ಕಟಬುಗೋಳ, ನಿಲೇಶ್ ಚಂದಗಡ್ಕರ್, ಲಕ್ಷ್ಮಣ ಮಲ್ಲವ್ವಗೋಳ, ಭೀಮ ನರಗುಂದ್ಕರ್, ದಾದಾಪೀರ್ ಸಾಂಬ್ರೇಕರ್ ಉಪಸ್ಥಿತರಿದ್ದರು.
ಮಾವಿನಕಟ್ಟೆ
ನಂತರ, ಕ್ಷೇತ್ರದ ಮಾವಿನಕಟ್ಟಿ ಗ್ರಾಮದಿಂದ ಬಾಪುಸಾಹೇಬ್ ಜಾಧವ್ ತೋಟದವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚನ್ನರಾಜ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಸುಮಾರು 2 ಕೋಟಿ ರೂ. ಗಳ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು.
ಈ ಸಮಯದಲ್ಲಿ ಉಳವಪ್ಪ ಮಲ್ಲಣ್ಣವರ, ಚನ್ನಪ್ಪ ಹಿರೇಹೊಳಿ, ಮಹೇಶ ಮಲ್ಲಣ್ಣವರ, ರಾಜು ನೇಸರಗಿ, ಅಶೋಕ ಕೋಲಕಾರ, ಪ್ರವೀಣ ಕೋಲಕಾರ, ಪಾರೇಶ ಕೋಲಕಾರ, ರಾಜು ಅರಗಂಜಿ ಮುಂತಾದವರು ಉಪಸ್ಥಿತರಿದ್ದರು.
ಮಾರಿಹಾಳ
ಇದಾದ ನಂತರ, ಮಾರಿಹಾಳ ಗ್ರಾಮದ ಪತ್ರಿ ಬಸವೇಶ್ವರ ದೇವಸ್ಥಾನದಿಂದ ಹೊಲಗದ್ದೆಗಳಿಗೆ ತೆರಳುವ ಕುಮರಿ ರಸ್ತೆ ನಿರ್ಮಾಣದ ಕಾಮಗಾರಿಗೆ ಚನ್ನರಾಜ ಹಟ್ಟಿಹೊಳಿ ಅವರಿಂದ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು. ಸುಮಾರು 50 ಲಕ್ಷ ರೂ,ಗಳ ವೆಚ್ಚದಲ್ಲಿ ಈ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.
ಈ ವೇಳೆ ಗಿರಿಜಾ ಪಾಟೀಲ, ಬಸವರಾಜ ಮ್ಯಾಗೋಟಿ, ಶಂಕರ ಸೊಗಲಿ, ಪ್ರಕಾಶ ಯಲ್ಲಪ್ಪನವರ, ಈರಣ್ಣ ಹಿರವಣ್ಣವರ, ಬಸವರಾಜ ಹಿತ್ತಲಮನಿ, ಗುಡದಪ್ಪ ಗೊರವ್, ಯಲಗುಂಡ ಸೀತಿಮನಿ, ಬಸವಣ್ಣಿ ಬಾಲನಾಯ್ಕ್, ಮಲ್ಲಣ್ಣ ಹಿರವಣ್ಣವರ, ಬಸವಣ್ಣಿ ಬಾಲನಾಯ್ಕ್, ಬಾಳು ಕರವಿನಕೊಪ್ಪ, ಅಶೋಕ್ ಸಾಳುಂಕೆ, ವಿನೋದ್ ಚೌಹಾನ್ ಮುಂತಾದವರು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಶೇಡಬಾಳ ಪಟ್ಟಣದಲ್ಲಿ ಅಂಗವಿಕಲರಿಗೆ ತ್ರಿಚಕ್ರ ವಾಹಣ ವಿತರಣೆ.

Spread the loveಶೇಡಬಾಳ ಪಟ್ಟಣ ಪಂಚಾಯಿತಿಯಲ್ಲಿ ೨೦೨೧-೨೨ ಮತ್ತು ೨೦೨೨-೨೩ ಸಾಲಿನಲ್ಲಿ ಐದು ಅಂಗವಿಕಲರಿಗೆ ತ್ರೀಚಕ್ರವಾಹಣಗಳನ್ನು ವಿತರಿಸುವ ಕಾರ್ಯಕ್ರಮ ಕಾಗವಾಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ