Breaking News

ಬಿಮ್ಸನಲ್ಲಿ ಆತಂಕ ಸೃಷ್ಠಿಸಿದ ನಕಲಿ ವಿದ್ಯಾರ್ಥಿ ಓಡಾಟ…!!! ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…

Spread the love

ಪಿಜಿ ವಿದ್ಯಾರ್ಥಿ ಎಂದು ಹೇಳಿ ಬಿಮ್ಸ್ ಆಸ್ಪತ್ರೆಯಲ್ಲಿ ಯುವಕನೊಬ್ಬ ಹುಚ್ಚಾಟ ನಡೆಸಿದ್ದಾನೆ. ಈತನ ವಿರುದ್ಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೈದ್ಯಕೀಯ ವಿದ್ಯಾರ್ಥಿ ವೇಷ ಧರಿಸಿ ಬೀಮ್ಸ್ ಆಸ್ಪತ್ರೆಯ ಈತ, ಕ್ಲಾಸ್ ರೂಂ, ಹೆರಿಗೆ ವಾರ್ಡ್, ತುರ್ತು ಚಿಕಿತ್ಸಾ ವಿಭಾಗದಲ್ಲಿಯೂ ಓಡಾಟ ನಡೆಸಿದ್ದಾನೆ. ಬಿಮ್ಸ್ ನಲ್ಲಿ ಬಂದು ಕುಳಿತು ವಿದ್ಯಾರ್ಥಿಗಳಿಗೆ ಆತಂಕ ಸೃಷ್ಟಿಸಿದ ಘಟನೆ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬಿಮ್ಸ್ ನಲ್ಲಿ ನರ್ಸಿಂಗ್ ಸ್ಟಾಪ್, ‌ವಿದ್ಯಾರ್ಥಿಗಳ ಜೊತೆಗೆ ಅಸಭ್ಯ ವರ್ತಸಿದ್ದು, ಯುವಕನ ವರ್ತನೆಗೆ ಬೇಸತ್ತು ಬೀಮ್ಸ್ ನಿರ್ದೇಶಕರಿಗೆ ನರ್ಸಿಂಗ್ ಸ್ಟಾಫ್ ದೂರು ನೀಡಿದ್ದಾರೆ. ಬಿಮ್ಸ್ ಆಡಳಿತ ಮಂಡಳಿ ವಿಚಾರಣೆ ಬಳಿಕ ಆತ ನಕಲಿ ಪಿ‌ಜಿ ಸ್ಟೂಡೆಂಟ್ ಎಂಬುದು ದೃಢವಾಗಿದೆ. ಪಿಜಿ ಸ್ಟೂಡೆಂಟ್ ಎಂದು ಹುಚ್ಚಾಟ ಮೆರೆದವನು ಮಹಾರಾಷ್ಟ್ರ ಮೂಲದ ನವಲು ಪಾಟೀಲ್(28) ಎಂದು ತಿಳಿದು ಬಂದಿದೆ.
ಬಿಮ್ಸ್ ನಿರ್ದೇಶಕ ಡಾ. ಅಶೋಕಕುಮಾರ್ ಶೆಟ್ಟಿ ಸಮ್ಮುಖದಲ್ಲಿ ನವಲು ಪಾಟೀಲ್ ವಿಚಾರಣೆ ನಡೆಸಿ ಬಳಿಕ ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ನವಲು ವಿರುದ್ಧ ದೂರು ದಾಖಲಿಸಲಾಗಿದೆ.

Spread the love

About Laxminews 24x7

Check Also

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

Spread the loveಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಸಿ ನಡುವೆಯೂ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸತತ ಏರುಗತಿಯಲ್ಲಿ ಸಾಗುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ