ಚುನಾವಣಾ ಹೊಸ್ತಿನಲ್ಲಿರುವ ಬಿಹಾರಕ್ಕೆ ಕೇಂದ್ರ ಬಿಜೆಪಿ ಸರ್ಕಾರದಿಂದ ಬಂಪರ್ ಕೊಡುಗೆ, ಆದರೆ ಕರ್ನಾಟಕಕ್ಕೆ ಮತ್ತೆ ಚೊಂಬು! ಹೊಸ ಯೋಜನೆಗಳ ಮಳೆ ಅಲ್ಲಿ, ಇಲ್ಲಿ ಬರಡು ನೆಲ. ಜಿಡಿಪಿ ಹಂಚಿಕೆ ಸಮಾನವಿಲ್ಲ, ಅಭಿವೃದ್ಧಿಯೂ ಏಕಪಕ್ಷೀಯ!
2025ರ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕವನ್ನು ಮತ್ತೆ ನಿರ್ಲಕ್ಷಿಸಲಾಗಿದ್ದು, ಯಾವುದೇ ದೊಡ್ಡ ಅಭಿವೃದ್ಧಿ ಯೋಜನೆ ಘೋಷಣೆ ಆಗಿಲ್ಲ. ಪೂರಕ ಅನುದಾನವಿಲ್ಲ, ಮಹತ್ತರ ಯೋಜನೆಗಳೆಂದರೆ ಖಾಲಿ ಭರವಸೆ! ನಮ್ಮ ತೆರಿಗೆ ಹಣದಿಂದ ಇತರ ರಾಜ್ಯಗಳಿಗೆ ಕೋಟಿ ಕೋಟಿ ಅನುದಾನ, ಆದರೆ ಕರ್ನಾಟಕಕ್ಕೆ ಮಾತ್ರ ಕೈಲಾದಷ್ಟು ಕಡಿತ!
ಇದು ಏಕೆ? ನಮ್ಮ ರಾಜ್ಯದ ಹಕ್ಕು ಯಾರಿಗೆ?
ಆವರ್ತನೆಗೊಳ್ಳುವ ಅನ್ಯಾಯಕ್ಕೆ ವಿರೋಧಿಸಿ, ನಮ್ಮ ಹಕ್ಕಿಗಾಗಿ ಸದ್ದು ಮಾಡೋಣ! ನಮ್ಮ ಹಿತ, ನಮ್ಮ ಭವಿಷ್ಯ – ನಮ್ಮ ಕೈಯಲ್ಲಿ!