Breaking News

ಮೇಯರ್ ಉಪಮೇಯರ್ ಚುನಾವಣೆ: ಗೊಂದಕದ ಗೂಡು ಮಾಡಿ ಬಿಟ್ಟ ರಿಜಿನಲ್ ಕಮಿಷನರ್*

Spread the love

: ಚುನಾವಣೆ ಅಧಿಕಾರಿಯ ವಿರುದ್ಧ ಆಕ್ರೋಶ, ಪ್ರತಿಭಟನೆ, ಧಿಕ್ಕಾರ, ಜಿಲ್ಲಾಡಳಿತದ ಎದುರು ಸದಸ್ಯರ ಪರೇಡ್, ನಾಯಕರಿಂದ ಮನವಿ, ಆಡಳಿತ ಪಕ್ಷದ ಷಡ್ಯಂತ್ರ ಖಂಡಿಸಿ ಘೋಷಣೆ…ಹೀಗೆ ಹಲವು ಮಹತ್ವದ ಬೆಳವಣಿಗೆಗಳಿಗೆ ವಿಜಯಪುರ ಮಹಾನಗರ ಪಾಲಿಕೆ ಸಾಕ್ಷಿಯಾಯಿತು !
ಸೋಮವಾರ ಮಹಾನಗರ ಪಾಲಿಕೆಯ 22ನೇ ಅವಧಿಯ ಮೇಯರ್- ಉಪಮೇಯರ್ ಸ್ಥಾನಕ್ಕಾಗಿ ನಡೆದ ಚುನಾವಣೆ ಪ್ರಕ್ರಿಯೆ ಕುರಿತು ಚುನಾವಣೆ ಅಧಿಕಾರಿ ನಡೆದುಕೊಂಡ ರೀತಿ ಚುನಾವಣೆ ಆಯೋಗವನ್ನೇ ಸಂಶಯದಿಂದ ನೋಡುವಂತೆ ಮಾಡಿತು. ಚುನಾವಣೆ ಪ್ರಕ್ರಿಯೆ ನಡೆಸಲು ಅನುಮತಿ ನೀಡಿ ಫಲಿತಾಂಶ ಮಾತ್ರ ಘೋಷಿಸದಂತೆ ನ್ಯಾಯಾಲಯದ ಮಧ್ಯಂತರ ಆದೇಶವಿದ್ದು, ಚುನಾವಣೆ ಅಧಿಕಾರಿ ಇಡೀ ಪ್ರಕ್ರಿಯೆಯನ್ನೇ ಗೊಂದಲಮಯವಾಗಿಸಿ ನಿಗೂಢ ನಡೆ ಕಾಯ್ದುಕೊಂಡಿದ್ದು ಹಲವು ಅನುಮಾನಗಳಿಗೆ ಕಾರಣವಾಯಿತು. ಆಡಳಿತ ಪಕ್ಷದ ಅಧಿಕಾರ ದುರುಪಯೋಗವೋ….ಚುನಾವಣೆ ಅಧಿಕಾರಿಯ ವೈಫಲ್ಯವೋ… ಸುಲಲಿತವಾಗಿ ಮುಕ್ತಾಯಗೊಳ್ಳಬೇಕಿದ್ದ ಮಹಾನಗರ ಪಾಲಿಕೆ ಮೇಯ‌ರ್-ಉಪಮೇಯ‌ರ್ ಆಯ್ಕೆ ಪ್ರಕ್ರಿಯೆ ಗೊಂದಲ, ಅಸ್ಪಷ್ಟ ಹಾಗೂ ನಿಗೂಢವಾಗಿಯೇ ಉಳಿಯುವಂತಾಯಿತು. ಚುನಾವಣೆ ಅಧಿಕಾರಿ ವಿರುದ್ಧ ಬಿಜೆಪಿಯ ಸದಸ್ಯರು ತೀವ್ರ ಆಕ್ರೋಶ ಹೊರಹಾಕಿದ್ದಲ್ಲದೇ ಕೆಲಕಾಲ ಧರಣಿ ನಡೆಸಿದರು.
ಬಳಿಕ ಚುನಾವಣೆ ಪ್ರಕ್ರಿಯೆ ಗೊಂದಲಮಯವಾಗಿಸಲು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಕಾರಣರಾಗಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಇನ್ನೊಂದೆಡೆ ಚುನಾವಣೆ ಪ್ರಕ್ರಿಯೆಯಲ್ಲಿ ಲೋಪವಾಗಿದೆ ಎಂಬುದಾಗಿಯೂ, ಬಿಜೆಪಿ ಪಕ್ಷದವರು ಕಾಂಗ್ರೆಸ್ ಸದಸ್ಯರನ್ನು ಅಪಹರಿಸಿದ್ದಾರೆಂಬುದಾಗಿಯೂ, ಚುನಾವಣೆ ಮುಂದೂಡಲ್ಪಟ್ಟಿದೆ ಎಂಬುದಾಗಿಯೂ ತಿಳಿಸಿ ಸಚಿವ ಎಂ.ಬಿ. ಪಾಟೀಲರ ನೇತೃತ್ವದಲ್ಲಿ ಕಾಂಗ್ರೆಸ್‌ನ ಸದಸ್ಯರೆಲ್ಲರೂ ಹೊರನಡೆದರು
.
.: ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಇನ್ನೊಂದೆಡೆ ಚುನಾವಣೆ ಪ್ರಕ್ರಿಯೆಯಲ್ಲಿ ಲೋಪವಾಗಿದೆ ಎಂಬುದಾಗಿಯೂ, ಬಿಜೆಪಿ ಪಕ್ಷದವರು ಕಾಂಗ್ರೆಸ್ ಸದಸ್ಯರನ್ನು ಅಪಹರಿಸಿದ್ದಾರೆಂಬುದಾಗಿಯೂ, ಚುನಾವಣೆ ಮುಂದೂಡಲ್ಪಟ್ಟಿದೆ ಎಂಬುದಾಗಿಯೂ ತಿಳಿಸಿ ಸಚಿವ ಎಂ.ಬಿ. ಪಾಟೀಲರ ನೇತೃತ್ವದಲ್ಲಿ ಕಾಂಗ್ರೆಸ್‌ನ ಸದಸ್ಯರೆಲ್ಲರೂ ಹೊರನಡೆದರು.
ಇಷ್ಟೆಲ್ಲಾ ಬೆಳವಣಿಗೆಗಳಾದರೂ ಚುನಾವಣೆ ಅಧಿಕಾರಿ ಮಾತ್ರ ಯಾವುದೇ ಸ್ಪಷ್ಟತೆ ನೀಡದೇ ಇರುವುದು ಆಡಳಿತ ಪಕ್ಷದ ಕೈಗೊಂಬೆ ಎಂಬ ಬಿಜೆಪಿಗರ ಆರೋಪಕ್ಕೆ ಪುಷ್ಠಿ ನೀಡಿದಂತಾಯಿತು. ಬಿಜೆಪಿ ಸಂಸದ ರಮೇಶ ಜಿಗಜಿಣಗಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿಪ ಸದಸ್ಯರಾದ ಎನ್.ರವಿಕುಮಾರ, ಕೇಶವ ಪ್ರಸಾದ ಮುಂತಾದವರು ಚುನಾವಣೆ ಅಧಿಕಾರಿ ಹಾಗೂ ಆಡಳಿತ ಪಕ್ಷದ ವಿರುದ್ಧ ಹರಿಹಾಯ್ದರು.

Spread the love

About Laxminews 24x7

Check Also

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

Spread the loveಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಸಿ ನಡುವೆಯೂ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸತತ ಏರುಗತಿಯಲ್ಲಿ ಸಾಗುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ