Breaking News

ಬಿಜೆಪಿ ತಂದೆ ಮಕ್ಕಳ ಪಕ್ಷ ಆಗಿದೆ: ಕೆ ಎಸ್ ಈಶ್ವರಪ್ಪ.

Spread the love

ಬಿಜೆಪಿ ಪಕ್ಷದ ಈಗಿನ ಸ್ಥಿತಿ ನೋಡಿದ್ರೆ ದುಃಖ ಆಗುತ್ತೆ: ಕೆ ಎಸ್ ಈಶ್ವರಪ್ಪ.
ರಾಯಬಾಗ : ಬಿಜೆಪಿ ನಾನೇ ಕಟ್ಟಿ ಬೆಳೆಸಿದ್ದೇನೆ ಎಂಬ ಅಹಂಕಾರ ನನ್ನಲ್ಲಿ ಇಲ್ಲ. ನನ್ನಂತೆ ಸಾಕಷ್ಟು ಹಿರಿಯರು ತಪಸ್ಸು ಮಾಡಿ ಬಿಜೆಪಿ ಪಕ್ಷ ಕಟ್ಟಿದ್ದಾರೆ. ಈಗಿನ ಪರಿಸ್ಥಿತಿ ನೋಡಿದ್ರೆ ಅವರಿಗೆಲ್ಲ ಬೇಸರ ಇದೆ.
ನೋವು ಇದೆ, ಆ ನೋವು ಯಾರ ಹತ್ರ ಹೇಳಿಕೊಳ್ಳಬೇಕು ಎಂಬ ಗೊಂದಲ ಇದೆ. ಬಿಜೆಪಿ ನನ್ನ ತಾಯಿ, ಮೊದಲಿನಂತೆ ಪಕ್ಷದ ಸಿದ್ದಾಂತ ಪ್ರಕಾರ ಎಲ್ಲವೂ ಸರಿ ನಡೆದ್ರೆ ಪಕ್ಷಕ್ಕೆ ಬರುವೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಶ್ರೀ ಯಲ್ಲಾಲಿಂಗ ಮಹಾರಾಜರ ಬ್ರಹ್ಮಠದಲ್ಲಿ ನಡೆಯುತ್ತಿರುವ ಶ್ರೀ ಯಲ್ಲಾಲಿಂಗ ಮಹಾರಾಜರ 39ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಬಿಜೆಪಿ ಮನೆಯೊಂದು ಆರು ಬಾಗಿಲು ಕಾಂಗ್ರೆಸ್ ಹೇಳಿಕೆ ವಿಚಾರವಾಗಿ ಪ್ರಕ್ರಿಯಿಸಿದ ಈಶ್ವರಪ್ಪ ದೇಶದಲ್ಲಿ ಬಿಜೆಪಿ ಒಂದೇ ಇದೆ. ಅದೇ ಕಾಂಗ್ರೆಸ್ ನೂರಾರು ಕಾಂಗ್ರೆಸ್ ಇದೆ. ದೇಶದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಒಂದೇ ಬಾಗಿಲು ಇದೆಯಾ, ಅವರ ಪಕ್ಷದ ಬಾಗಿಲುಗಳ ಲೆಕ್ಕ ಹಾಕಲಿ. ಅಂತವರು ಬಿಜೆಪಿ ಬಗ್ಗೆ ಆಪಾದನೆ ಮಾಡುವ ಸ್ಥಿತಿ ಬಂದಿದ್ದಕ್ಕೆ ನನಗೂ ನೋವಿದೆ. ಇದು ಸರಿಯಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಇವತ್ತಲ್ಲ ನಾಳೆ ಬಿಜೆಪಿ ಪಕ್ಷ ಎಲ್ಲವೂ ಸರಿ ಹೋಗುತ್ತೆ ಎನ್ನುವ ವಿಶ್ವಾಸ ನನಗಿದೆ.
ನಾನು ಮೊದಲಿನಿಂದಲೂ ಹೇಳುತಿದ್ದೇನೆ ಬಿಜೆಪಿ ತಂದೆ ಮಕ್ಕಳ ಪಕ್ಷ ಆಗಿದೆ ಎಂದು. ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಆಗಿರುವುದು ಕೆಲವ ವಿರೋಧ ವಿಚಾರ.
ಅದು ಪಕ್ಷದ ಆಂತರಿಕ ವಿಚಾರ ಅವರೇ ತೀರ್ಮಾನ ಮಾಡಲಿ. ಕಾಂಗ್ರೆಸ್ ಪಕ್ಷದಲ್ಲಿ ಭ್ರಷ್ಟಾಚಾರ ಆರೋಪಗಳು ಹೆಚ್ಚು ಸದ್ದು ಮಾಡುತ್ತಿವೆ.

Spread the love

About Laxminews 24x7

Check Also

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

Spread the loveಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಸಿ ನಡುವೆಯೂ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸತತ ಏರುಗತಿಯಲ್ಲಿ ಸಾಗುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ