Breaking News

ಶಿಕ್ಷಕಿ ಹಾಗೂ ತುಂಗಭದ್ರಾ ನದಿಯಲ್ಲಿ ಶವಕ್ಕಾಗಿ ಹುಡುಕಾಟ

Spread the love

ದಾವಣಗೆರೆ: ಫೈನಾನ್ಸ್ ಸಾಲಗಾರರ ಕಾಟಕ್ಕೆ ಬೇಸತ್ತು ಶಿಕ್ಷಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಪ್ರಕರಣದಲ್ಲಿ ಶಿಕ್ಷಕಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಘಟನೆ ನಡೆದು ಮೂರನೇ ದಿನಕ್ಕೆ ಸರ್ಕಾರಿ ಶಾಲೆಯ ಶಿಕ್ಷಕಿ ಪುಷ್ಪಲತಾ (46) ಅವರ ಮೃತದೇಹ ತುಂಗಭದ್ರಾ ನದಿಯಲ್ಲಿ ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣ ರಾಘವೇಂದ್ರ ಮಠದ ಬಳಿ ಜನವರಿ 26 ರಂದು ತುಂಗಭದ್ರಾ ನದಿಗೆ ಶಿಕ್ಷಕಿ ಪುಷ್ಪಲತಾ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅಲ್ಲದೆ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಶವಕ್ಕಾಗಿ ಹುಡುಕಾಟ ನಡೆದಿತ್ತು. ಈ ಘಟನೆ ನಡೆದು ಮೂರನೇ ದಿನಕ್ಕೆ ಶವ ಪತ್ತೆಯಾಗಿದೆ.

ನಾಪತ್ತೆ ಪ್ರಕರಣ ದಾಖಲಿಸಿದ್ದ ಪತಿ ; ಶಿಕ್ಷಕಿಯ ಪತಿ ಹಾಲೇಶ್ ಅವರು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.‌ ನಿನ್ನೆ ದಿನ ಈಜು ಪರಿಣಿತರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶವಕ್ಕಾಗಿ ಶೋಧ ನಡೆಸಿದ್ದರೂ ಮೃತದೇಹ ಸಿಕ್ಕಿರಲಿಲ್ಲ. ರಾಘವೇಂದ್ರ ಮಠದಿಂದ ಒಂದು ಕಿಲೋ ಮೀಟರ್​ ದೂರದಲ್ಲಿ ಜಾಕ್​ವೆಲ್ ಬಳಿ ತೇಲುತ್ತಿದ್ದ ಶವ‌ ಕಂಡು ಸ್ಥಳೀಯರು ಹೊನ್ನಾಳಿ ಪೊಲೀಸರಿಗೆ ಮಾಹಿತಿ‌ ನೀಡಿದ್ದರು.

ರಿಪಬ್ಲಿಕ್ ಡೇ ಮುಗಿಸಿಕೊಂಡು ಬಂದು ನದಿಗೆ ಹಾರಿದ್ದ ಶಿಕ್ಷಕಿ : ಗಣರಾಜ್ಯೋತ್ಸವ ದಿನಾಚರಣೆ ಮುಗಿಸಿಕೊಂಡು ಮನೆಗೆ ಬಾರದೆ ರಾಘವೇಂದ್ರ ಮಠದ ಬಳಿಯ ತುಂಗಭದ್ರಾ ನದಿಗೆ ಪತ್ನಿ ಹಾರಿರುವ ಬಗ್ಗೆ ಪತಿ ಹಾಲೇಶ್ ಶಂಕೆ ವ್ಯಕ್ತಪಡಿಸಿದರು.

“ಮನೆ ಕಟ್ಟಲು ಶಿವಮೊಗ್ಗದ ಖಾಸಗಿ ಫೈನಾನ್ಸ್​ನಿಂದ ಸಾಲ ಪಡೆದಿದ್ದೆವು. ಒಂದು ಕಂತು ಬಾಕಿ ಇರುವುದಕ್ಕೆ ಫೈನಾನ್ಸ್ ಸಿಬ್ಬಂದಿ ಮನೆ ಬಾಗಿಲಿಗೆ ಬರುತ್ತಿದ್ದರು. ಅಲ್ಲದೆ ಶಾಲೆ ಬಳಿ ತೆರಳಿ ಸಾಲದ ಕಂತು​ ಕೇಳುತ್ತಿದ್ದರು. ಇದರಿಂದ ಸೂಕ್ಷ್ಮ ಮನಸ್ಸಿನವಳಾಗಿದ್ದ ಪುಷ್ಪಲತಾ ಸಾಕಷ್ಟು ನೊಂದಿದ್ದಳು. ಅದು ಸಾಲದು ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ಹಾಕಿದ್ದ ಫೈನಾನ್ಸ್ ಕಂಪನಿಯವರು ಶಿಕ್ಷಕಿಯಾಗಿದ್ದವರನ್ನು ಸ್ಟೇಷನ್​ಗೆ ಕರೆಸಿದ್ರು ಎಂದು ಬಹಳ ನೊಂದಿದ್ದರು. ತುಂಗಭದ್ರಾ ನದಿಯ ದಡದ ರಾಘವೇಂದ್ರ ಮಠದ ಬಳಿ ಅವರ ಬ್ಯಾಗ್ ಹಾಗೂ ಮೊಬೈಲ್ ಪತ್ತೆ ಆಗಿತ್ತು. ಮನೆಯನ್ನು ಮಾರಿ ಸಾಲ ಕಟ್ಟಿ ಕೈತೊಳೆದುಕೊಳ್ಳಬೇಕು ಎಂದುಕೊಂಡಿದ್ದೆ” ಎಂದು ಹಾಲೇಶ್ ಅಳಲು ತೋಡಿಕೊಂಡರು.


Spread the love

About Laxminews 24x7

Check Also

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

Spread the loveಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಸಿ ನಡುವೆಯೂ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸತತ ಏರುಗತಿಯಲ್ಲಿ ಸಾಗುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ