Breaking News

ಇ.ಡಿ. ನೋಟಿಸ್ ರಾಜಕೀಯ ಪ್ರೇರಿತವಾಗಿದೆ ಎಂದ ಸಿಎಂ

Spread the love

ಬೆಂಗಳೂರು: ಇ.ಡಿ. ನೋಟಿಸ್ ರಾಜಕೀಯ ಪ್ರೇರಿತವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಇಡಿ ನೋಟಿಸ್ ರಾಜಕೀಯ ಪ್ರೇರಿತವೇ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ಇದು ರಾಜಕೀಯ ಪ್ರೇರಿತ ಅಲ್ಲದೆ ಇನ್ನೇನು?. ಮುಡಾ ಕೇಸೇ ರಾಜಕೀಯ ಪ್ರೇರಿತ ಎಂದು ಆರೋಪಿಸಿದರು.

ಸಿಬಿಐಗೆ ತನಿಖೆ ಕೊಡೋ ಆತಂಕ ಇದೆಯಾ? ಎಂಬ ಬಗ್ಗೆ ಪ್ರತಿಕ್ರಿಯಿಸುತ್ತಾ, ನ್ಯಾಯಾಧೀಶರು ಏನು ಮಾಡ್ತಾರೆ ಗೊತ್ತಿಲ್ಲ. ನ್ಯಾಯಾಧೀಶರು ಆದೇಶವನ್ನ ಕಾಯ್ದಿರಿಸಿದ್ದಾರೆ. ನನಗೆ ಯಾಕೆ ಆತಂಕ ಆಗುತ್ತದೆ? ನನಗೆ ನ್ಯಾಯ ಸಿಗುತ್ತೆ ಅಂತ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಪತ್ನಿಗೆ ಇ.ಡಿ. ನೋಟಿಸ್ ಕೊಟ್ಟಿರುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಇಡಿಯವರು ನೋಟಿಸ್ ಕೊಟ್ಟಿದ್ರು. ಅದಕ್ಕೆ ಹೈಕೋರ್ಟ್ ತಡೆ ನೀಡಿದೆ. ಯಾಕೆ ಇಷ್ಟು ಆತುರ ಅಂತ ನ್ಯಾಯಾಧೀಶರು ಕೇಳಿದ್ದಾರೆ. ತನಿಖೆ ನಡೆಯುತ್ತಿದೆ. ಸಿಬಿಐಗೆ ಕೊಡಬೇಕಾ, ಬೇಡ್ವಾ ಚರ್ಚೆ ಆಗ್ತಿದೆ. ಅದರ ಬಗ್ಗೆ ಆದೇಶ ಕಾಯ್ದಿರಿಸಿದೆ. ಈ ಹಂತದಲ್ಲಿ ನೀವು ಆತುರ ಮಾಡೋದು ಸರಿಯಲ್ಲ ಅಂತ ಕೋರ್ಟ್ ಹೇಳಿದೆ. ಹೀಗಾಗಿ ಕೋರ್ಟ್ ಸ್ಟೇ ಕೊಟ್ಟಿದೆ ಎಂದರು.


Spread the love

About Laxminews 24x7

Check Also

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

Spread the loveಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಸಿ ನಡುವೆಯೂ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸತತ ಏರುಗತಿಯಲ್ಲಿ ಸಾಗುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ