Breaking News

ಒನ್ ನೇಶನ್-ಒನ್ ಎಲೆಕ್ಷನ್ ಜಾರಿಯಾದರೆ, 1 ವರ್ಷ ಹೆಚ್ಚುವರಿ ಸಿಗುತ್ತದೆ : ಸತೀಶ್ ಜಾರಕಿಹೊಳಿ

Spread the love

ಬೆಳಗಾವಿ : ಈ ಅವಧಿಯಲ್ಲಿ ನಮಗೆಲ್ಲ ಒಂದು ವರ್ಷ ಜಾಸ್ತಿ ಅವಕಾಶ ಸಿಗುತ್ತದೆ. ಒನ್ ನೇಶನ್-ಒನ್ ಎಲೆಕ್ಷನ್ ಜಾರಿಗೆ ಬಂದರೆ ಆರು ವರ್ಷ ನಾವು ಶಾಸಕರಾಗಿ ಇರಬಹುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಅವಧಿ ಪೂರ್ವ ಚುನಾವಣೆ ಬರುತ್ತದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ, ಕೇಂದ್ರ ಸರ್ಕಾರ ಒನ್ ನೇಶನ್-ಒನ್ ಎಲೆಕ್ಷನ್ ಜಾರಿಗೆ ತಂದರೆ ಹೆಚ್ಚುವರಿಯಾಗಿ ಒಂದು ವರ್ಷ ಶಾಸಕರಾಗಿ ಇರಬಹುದು ಎಂದರು.

ನಾವು ಬೆಂಬಲ ಕೊಡಲಿ, ಬಿಡಲಿ. ಕೇಂದ್ರದಲ್ಲಿ ಅವರಿಗೆ ಬಹುಮತ ಇದೆ. ಹಾಗಾಗಿ, ಅವರು ಮಾಡುತ್ತಾರೆ. ಅದರಿಂದ ಆರು ವರ್ಷ ನಾವು ಶಾಸಕರಾಗಿ ಇರುತ್ತೇವೆ ಎಂದು ತಿರುಗೇಟು ಕೊಟ್ಟರು.

ಮೈಕ್ರೋ ಫೈನಾನ್ಸ್ ವಿಚಾರದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿರುವ ಬಗ್ಗೆ ಪ್ರಾಥಮಿಕವಾಗಿ ನಮ್ಮ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಒಂದು ವರದಿ ನೀಡುವಂತೆ ತಿಳಿಸಿದ್ದೇವೆ. ಈ ವಾರದಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರ ಜೊತೆಗೆ ಸಭೆ ಮಾಡುತ್ತೇವೆ. ಹೆಚ್ಚಿನ ಹಣದ ವಹಿವಾಟು ಆಗಿರುವ ಹಿನ್ನೆಲೆಯಲ್ಲಿ ಪ್ರಕರಣ ಸಿಒಡಿಗೆ ಕೊಡಬೇಕಾಗುತ್ತದೆ. ಈಗಾಗಲೇ ಐದಾರು ಪ್ರಕರಣಗಳು ದಾಖಲಾಗಿವೆ. ಪೊಲೀಸರಿಂದ ವರದಿ ಬಂದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ಮುಖ್ಯವಾಗಿ ದಡ್ಡಿ ಸೇರಿ ಮೂರು ಜನರನ್ನು ಗುರುತಿಸಲಾಗಿದೆ. ಕಾನೂನಾತ್ಮಕವಾಗಿ ಪರಿಶೀಲಿಸಬೇಕಾಗುತ್ತದೆ. ಹೆಚ್ಚು ಪ್ರಕರಣಗಳು ನಮ್ಮ ಯಮಕನಮರಡಿ ಕ್ಷೇತ್ರದಲ್ಲಿ ಆಗಿವೆ. ಅದೇ ರೀತಿ ಗೋಕಾಕ್​, ಬೆಳಗಾವಿ, ಹುಕ್ಕೇರಿ, ಸವದತ್ತಿ, ಬೈಲಹೊಂಗಲ, ಖಾನಾಪುರ ತಾಲೂಕುಗಳಲ್ಲಿ ಕಂಡು ಬಂದಿವೆ.‌ ಈ ಕುರಿತು ಸಂಬಂಧಿಸಿದವರು ಪೊಲೀಸ್ ಠಾಣೆಗೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುತ್ತದೆ. ಸಾಲಗಾರರಿಗೆ ತೊಂದರೆ ಕೊಟ್ಟರೆ ಕೇಸ್ ದಾಖಲಿಸುತ್ತೇವೆ ಎಂದು ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಸೂಚನೆ ಕೊಟ್ಟಿದ್ದಾರೆ ಎಂದರು.


Spread the love

About Laxminews 24x7

Check Also

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

Spread the loveಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಸಿ ನಡುವೆಯೂ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸತತ ಏರುಗತಿಯಲ್ಲಿ ಸಾಗುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ