ವಿಜಯಪುರ: ರಾಜ್ಯ ಬಿಜೆಪಿ ಮನೆಯೊಂದು ಮೂರು ಬಾಗಿಲು ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ಅತ್ತ ವಿಜಯೇಂದ್ರ ಹಾಗೂ ಶಾಸಕ ಯತ್ನಾಳ ನಡುವಿನ ಭಿನ್ನಮತ ಗೊಂದಲ ಸೃಷ್ಟಿಸಿದೆ. ಇನ್ನೂ ಆಪ್ತ ಸ್ನೇಹಿತರಾಗಿದ್ದ ಮಾಜಿ ಸಚಿವ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ನಡುವಿನ ಭಿನ್ನಮತ ರಾಜ್ಯ ಬಿಜೆಪಿಗೆ ಸಂಕಷ್ಟ ತಂದೊಡ್ಡಿದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ವಿಜಯೇಂದ್ರ ನಡುವಿನ ಭಿನ್ನಮತದ ಕುರಿತು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಆದಷ್ಟು ಬೇಗನೆ ಗೊಂದಲ ಪರಿಹರಿಸಿ ಎಂದು ಒತ್ತಾಯಿಸಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ..ವಿಜಯೇಂದ್ರ ಹಾಗೂ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಡುವಿನ ಭಿನ್ನಮತ ರಾಜ್ಯ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸಿದೆ. ಪ್ರತಿನಿತ್ಯ ವಿಜಯೇಂದ್ರ ವಿರುದ್ಧ ಶಾಸಕ ಯತ್ನಾಳ ಮಾತಿನ ಚಾಟಿ ಬೀಸುತ್ತಲೇ ಇದ್ದಾರೆ. ಇದು ಬಿಜೆಪಿಗೆ ಬಿಸಿತುಪ್ಪವಾಗಿದೆ. ಇತ್ತಿಚೆಗೆ ಬಿ.ವೈ.ವಿಜಯೇಂದ್ರ ಮಾಜಿ ಶಾಸಕರುಗಳ ಸಭೆಯನ್ನು ಕರೆದಿದ್ದರು. ಈ ಸಭೆಯಲ್ಲಿ ವಿಜಯಪುರ ನಗರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಭಾಗವಹಿಸಿದ್ದರು. ಆ ಸಭೆಯಲ್ಲಿ ಪಕ್ಷದ ಸಂಘಟನೆ ಹಾಗೂ ಪಕ್ಷದ ಬಲವರ್ಧನೆ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ ನೀಡಿದ್ದಾರೆ. ಇನ್ನೂ ನಗರದಲ್ಲಿ ಮಾದ್ಯಮಗಳ ಜೊತೆಗೆ ಮಾತನಾಡಿ ಇನ್ನೂ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಮಾತಾಡಿದ್ದಾರೆ. ಪಕ್ಷದ ಚೌಕಟ್ಟಿನಲ್ಲಿ ಮಾತಾಡ ಬೇಕಾದ ವಿಷಯ ಸಾರ್ವಜನಿಕವಾಗಿ ಮಾತಾಡುವುದು ಸರಿ ಅಲ್ಲ. ಇದರಿಂದ ಕಾರ್ಯಕರ್ತರಿಗೆ ಬೇಜಾರಾಗುತ್ತದೆ. ಹೈಕಮಾಂಡ ಎರಡು ಬಣ್ಣದವರಿಗೆ ಕರೆಯಿಸಿ ಬೇಗ ನಿರ್ದಾರ ಮಾಡಬೇಕು ಎಂದು ಒತ್ತಾಯಿಸಿದರು.
ಇನ್ನೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ವಿಜಯೇಂದ್ರ ಇವರಿಬ್ಬರನ್ನೂ ಕೂಡಿಸಿ ಅಥವಾ ಇಬ್ಬರಲ್ಲಿ ಒಬ್ಬರನ್ನು ತೆಗೆಯಿರಿ ,ಎನಾದ್ರೂ ಮಾಡಿ ಒಟ್ಟಿನಲ್ಲಿ ಪಕ್ಷದ ಜಗಳವನ್ನು ಬೇಗ ಬಗೆಹರಿಸಬೇಕು. ಜಗಳವನ್ನು ಬಗ್ಗೆಹರಿಸದ ಹೈಕಮಾಂಡ ಬಗ್ಗೆ ಕಾರ್ಯಕರ್ತರಿಗೂ ಬೇಜಾರಿದೆ ಎಂದರು. ಇನ್ನೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಎಷ್ಟು ಪಕ್ಷ ಕಟ್ಟಿದ್ದಾರೆ ಗೊತ್ತಿದೆ. ನನ್ನ ಅವಧಿಯಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ಐದು ಭಾಜಪಾ ಶಾಸಕರು ಚುನಾಯಿತರಾಗಿದ್ದರು. ಅದಾದ ಮೇಲೆ ಜಿಲ್ಲೆಯಲ್ಲಿ ಅಷ್ಟು ಶಾಸಕರು ಅಯ್ಕೆಯಾಗಿಲ್ಲಾ. ನನ್ನ ಅವಧಿಯಲ್ಲಿ ಅತಿ ಹೆಚ್ಚು ಇಪ್ಪತ್ತು ಜಿಲ್ಲಾ ಪಂಚಾಯತ ಸದಸ್ಯರು ಚುನಾಯಿತರಾಗಿದ್ದಾರೆ. ಶಾಸಕ ಯತ್ನಾಳ ಈ ಹಿಂದೆ ಪಕ್ಷದಲ್ಲಿ ಯಾರ ಯಾರನ್ನು ತುಳಿದ್ದಿದ್ದಾರೆ ಎನ್ನುವ ಬಗ್ಗೆ ಹಾಗೂ ಗೌಡ್ರು ಎಷ್ಟು ಪಕ್ಷ ಕಟ್ಟಿದ್ದಾರೆ ಎಂಬುದರ ಬಗ್ಗೆ ಆದಷ್ಟು ಬೇಗ ಸುದ್ದಿಗೋಷ್ಟಿ ಕರೆದು ಎಲ್ಲವನ್ನು ಸವಿವರವಾಗಿ ಬಹಿರಂಗ ಪಡಿಸುವೆ ಎಂದು ವಾಗ್ದಾಳಿ ನಡೆಸಿದರು.
ಒಟ್ನಲ್ಲಿ ರಾಜ್ಯ ಬಿಜೆಪಿ ಭಿನ್ನಮತ ಕುರಿತು ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಒಂದು ನಿರ್ಧಾರಕ್ಕೆ ಬರಲಿ ಎನ್ನುವ ಸಂದೇಶದ ಜೊತೆಗೆ ಶಾಸಕ ಯತ್ನಾಳ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಕಾರ್ಯಕರ್ತರ ಪರ ಧ್ವನಿ ಎತ್ತಿದ್ದಾರೆ.