Breaking News

ಸಿಎಂ ಹುದ್ದೆಗಾಗಿ ಅಭಿಮಾನಿಗಳ ಪೂಜೆ ಹಳೆಯದಲ್ಲ‌ :ಸತೀಶ್ ಜಾರಕಿಹೊಳಿ

Spread the love

ಚಿಕ್ಕೋಡಿ(ಬೆಳಗಾವಿ): “ವರಿಷ್ಠರ ತೀರ್ಮಾನದ ಹಿನ್ನೆಲೆ ಪಕ್ಷದಲ್ಲಿ ಎಲ್ಲವೂ ಶಾಂತವಾಗಿದೆ, ಹೈಕಮಾಂಡ್​ ಆದೇಶದ ಮುಂದೆ ನಾನು ಕುಣಿದಾಡಲು ಸಾಧ್ಯವಿಲ್ಲ ಈಗ ಪಕ್ಷ ಸಂಘಟನೆಯಷ್ಟೇ ನನ್ನ ಗುರಿ” ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಬುಧವಾರ ಅಥಣಿ ಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, “ಈಗ ನಮ್ಮ ಎದುರು ಯಾವುದೇ ಹುದ್ದೆಯ ಬದಲಾವಣೆ ಪ್ರಸ್ತಾಪ ಇಲ್ಲ. ನಾನು ವರಿಷ್ಠರ ನಿರ್ಧಾರಕ್ಕೆ ಬದ್ಧನಾಗಿ ಕೆಲಸ ಮಾಡುತ್ತೇನೆ ಎಂದರು. 2028 ರಲ್ಲಿ ಕಾಂಗ್ರೆಸ್​ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ತರುವುದೇ ನನ್ನ ಮುಂದಿನ ಗುರಿಯಾಗಿದೆ. ಈ ನಿಟ್ಟಿನಲ್ಲಿ ಈಗಿನಿಂದಲೇ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ” ಎಂದು ತಿಳಿಸಿದರು.

“ಸಿಎಂ ಹುದ್ದೆಗಾಗಿ ಅಭಿಮಾನಿಗಳ ಪೂಜೆ ಹಳೆಯದಲ್ಲ‌. ಮೊದಲಿನಿಂದಲೂ ಪೂಜೆ ಮಾಡುವುದು ಅವರ ಅಭಿಮಾನ ಮುಖ್ಯಮಂತ್ರಿ ಆಗಲು ಇನ್ನೂ ಕಾಲಾವಕಾಶ ಇದೆ, ಆದರೆ ತಾಳ್ಮೆಯಿಂದ ಕಾಯಬೇಕು” ಎಂದು ಅಭಿಮಾನಿಗಳ ಪೂಜೆಗೆ ಪ್ರತಿಕ್ರಿಯೆ ನೀಡಿದರು.


Spread the love

About Laxminews 24x7

Check Also

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

Spread the loveಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಸಿ ನಡುವೆಯೂ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸತತ ಏರುಗತಿಯಲ್ಲಿ ಸಾಗುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ