Breaking News

ಶಿಕಾರಿಪುರದಿಂದ ಒಬ್ಬಂಟಿಯಾಗಿ ಪ್ರವಾಸ ಶುರುಮಾಡುತ್ತೇನೆ ಎಂದು ವಿಜಯೇಂದ್ರಗೆ ಸವಾಲೆಸೆದ ರಮೇಶ್ ಜಾರಕಿಹೊಳಿ

Spread the love

ಬೆಳಗಾವಿ: ಜಿಲ್ಲೆಯ ಅಂಕಲಗಿ ಗ್ರಾಮದಲ್ಲಿ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತಾಡಿದ ಶಾಸಕ ರಮೇಶ್ ಜಾರಕಿಹೊಳಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಸವಾಲೆಸೆದರು.

ಬಸನಗೌಡ ಪಾಟೀಲ್ ಮತ್ತು ಜಾರಕಿಹೊಳಿ ವಿಜಯೇಂದ್ರ ವಿರುದ್ಧ ಬೆಂಕಿಯುಗುಳುತ್ತಿದ್ದಾರೆ. ಓಡಾಡುವುದು ಕಷ್ಟವಾಗುತ್ತೆ ಅಂತ ವಿಜಯೇಂದ್ರ ಜಾರಕಿಹೊಳಿಗೆ ಹೇಳಿದ್ದು ಇಬ್ಬರಿಗೂ ಸಹ್ಯವಾಗುತ್ತಿಲ್ಲ.

ತಾನು ಶಿಕಾರಿಪುರಕ್ಕೆ ಹೋಗಿ ವಿಜಯೇಂದ್ರ ಮನೆ ಮುಂದಿನಿಂದಲೇ ರಾಜ್ಯ ಪ್ರವಾಸ ಶುರುಮಾಡುತ್ತೇನೆ, ತಾನೊಬ್ಬನೇ ಅಲ್ಲಿಗೆ ಹೋಗುತ್ತೇನೆ, ದಿನಾಂಕವನ್ನು ವಿಜಯೇಂದ್ರನೇ ನಿಗದಿ ಮಾಡಲಿ ಎಂದು ಜಾರಕಿಹೊಳಿ ಸವಾಲೆಸೆದರು. ಪಕ್ಷದ ಅಧ್ಯಕ್ಷ ಸ್ಥಾನದ ಬಗ್ಗೆ ತನಗೆ ಗೌವವಿದೆಯೇ ಹೊರತು ವಿಜಯೇಂದ್ರ ಬಗ್ಗೆ ಇಲ್ಲ ಎಂದು ಗೋಕಾಕ ಶಾಸಕ ಹೇಳಿದರು.


Spread the love

About Laxminews 24x7

Check Also

ಮಾ.3ಕ್ಕೆ ರಕ್ತಚಂದ್ರಗ್ರಹಣ – ಕರ್ನಾಟಕದಲ್ಲಿ 25 ನಿಮಿಷ ಗ್ರಹಣ ಗೋಚರ

Spread the loveಬೆಂಗಳೂರು: ಮಾ.3ರಂದು ಕೇತುಗ್ರಸ್ತ ರಕ್ತಚಂದ್ರಗಹಣ  ಸಂಭವಿಸಲಿದೆ. ಹೋಳಿ ಹಬ್ಬದಂದೇ ಬಾನಂಗಳದಲ್ಲಿ ಕೆಂಬಣ್ಣದ ಚಂದಿರನ ವಿಸ್ಮಯ ಗೋಚರವಾಗಲಿದೆ. ಪಾಲ್ಗುಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ