Breaking News

ಪ್ರೀತಿಯ ಹುಚ್ಚಾಟಕ್ಕೆ ಬಿದ್ದು ಪ್ರಾಣ ಕಳೆದುಕೊಂಡ ಯುವಕ

Spread the love

ಮೈಸೂರು, (ಜನವರಿ 17): ಪ್ರೇಯಸಿ ದೂರವಾಗಿದ್ದಕ್ಕೆ ಲವರ್ ಬಾಯ್​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೆಲ್ಫಿ ವಿಡಿಯೋ ಮಾಡಿ ತನ್ನ ದುಃಖವನ್ನು ಹಂಚಿಕೊಂಡು ಪ್ರಾಣಬಿಟ್ಟಿದ್ದಾನೆ. ಈ ಘಟನೆ ಮೈಸೂರಿನ ಮೇಗಳಾಪುರದಲ್ಲಿ ನಡೆದಿದೆ. ಅಂದ್ಹಾಗೆ ಈತನ ಹೆಸರು ವಿನಯ್. ಮೈಸೂರು ತಾಲ್ಲೂಕು ಯಲಚೇನಹಳ್ಳಿ ಗ್ರಾಮದ ನಿವಾಸಿ. ವಿನಯ್ ಬಾಲ್ಯದಿಂದ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದ. ಆಕೆಯೂ ವಿನಯ್‌ನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಲವ್ ಲೋಕದಲ್ಲಿ ಮುಳುಗಿ ಹೋಗಿದ್ರು. ಇಬ್ಬರ ಸುತ್ತಾಟ ಓಡಾಟ ಜೋರಾಗಿತ್ತು. ಆದ್ರೆ, ಹುಡುಗಿ ಕುಟುಂಬದವರು ಬೇರೆ ಹುಡುಗನ ಜೊತೆ ಮದುವೆ ಮಾಡಿಕೊಟ್ಟಿದ್ದರು. ಆದರೂ ಸಹ ಇಬ್ಬರ ಪ್ರೀತಿ, ಪ್ರಣಯ ಮುಂದುವರಿದಿತ್ತು. ಅದು ಕುಟುಂಬಸ್ಥರಿಗೂ ಗೊತ್ತಾಗಿ ಅಂತಿಮವಾಗಿ ವಿನಯ್​ನಿಂದ ದೂರವಾಗಿದ್ದಾಳೆ. ಇದರಿಂದ ಮನನೊಂದು ವಿನಯ್​ ಪ್ರಾಣ ಕಳೆದುಕೊಂಡಿದ್ದಾನೆ.ಯುವತಿ ಪೋಷಕರು ಈತನ ಪ್ರೀತಿಗೆ ಅಡ್ಡಿಯಾದರೂ. ಅಷ್ಟೇ ಅಲ್ಲ ಯುವತಿಯನ್ನು ಬೇರೆ ಯುವಕನಿಗೆ ಕೊಟ್ಟು ಮದುವೆ ಮಾಡಿದ್ರು. ಯುವತಿ ಬೇರೆ‌ ಹುಡುಗನ ಜೊತೆ ಮದುವೆಯಾದ ಮೇಲೆ‌ ಎಲ್ಲಾ ಸರಿಯಾಗುತ್ತೇ ಅಂದುಕೊಂಡಿದ್ದರು. ಆದ್ರೆ ಆಗಿದ್ದೇ ಬೇರೆ. ಬೇರೆಯವನನ್ನು ಮದುವೆಯಾದರೂ ವಿನಯ್, ಆಕೆಯನ್ನು ಪ್ರೀತಿಸುವುದನ್ನು ಮಾತ್ರ ನಿಲ್ಲಿಸಿಲ್ಲ. ಯುವತಿ ಸಹ ತಾನು ಬೇರೆಯವನನ್ನು ಮದುವೆಯಾದರೂ ವಿನಯ್ ಜೊತೆ ಸಂಪರ್ಕ ಹೊಂದಿದ್ದಳು. ಇಬ್ಬರು ಹಾಯಾಗಿ ಸುತ್ತಾಡಿಕೊಂಡಿದ್ದರು.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ