ಗದಗ, (ಜನವರಿ 16): ಹತ್ತಾರು ಕನಸು ಕಂಡಿದ್ದ 9ನೇ ತರಗತಿ ವಿದ್ಯಾರ್ಥಿನಿ ನೇಣಿಗೆ ಶರಣಾಗಿರುವ ಘಟನೆ ಗದಗ ಜಿಲ್ಲೆ ಗಜೇಂದ್ರಗಡದ ಬಣಗಾರ ಕಾಲೋನಿಯಲ್ಲಿ ನಡೆದಿದೆ.
ಅಪ್ರಾಪ್ತ ಬಾಲಕರ ಕಿರುಕುಳಕ್ಕೆ 9ನೇ ತರಗಿತಿ ಖುಷಿ ಪ್ರಾಣ ಕಳೆದುಕೊಂಡಿದ್ದಾಳೆ. ಖುಷಿ.. ಖುಷಿ ಖುಷಿಯಿಂದಾನೆ ದಿನಾಲು ಶಾಲೆಗೆ ಹೋಗುತ್ತಿದ್ದಳು. ಆದ್ರೆ, ಅಪ್ರಾಪ್ತ ಬಾಲಕರು ಖುಷಿಗೆ ಮಾರಕವಾಗಿದ್ದಾರೆ. ಹೌದು… ಅಪ್ರಾಪ್ತ ಬಾಲಕರ ಕಿರುಕುಳಕ್ಕೆ ಬೇಸತ್ತು ಖುಷಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಮುದ್ದಿನ ಮಗಳ ಸಾವು ಕಂಡು ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.ಬಣಕಾರ ಓಣಿಯ ನಿವಾಸಿ 15 ವರ್ಷದ ಖುಷಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ದಿನಾಲು ಖುಷಿ ಖುಷಿಯಿಂದ ಅಮ್ಮ ಅಪ್ಪ ಶಾಲೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗುತ್ತಿದ್ದಳು. ಅಮ್ಮ ನಾನು ಚನ್ನಾಗಿ ಓದಿ ಜೀವನದಲ್ಲಿ ಸಾಧನೆ ಮಾಡುತ್ತೇನ ಅಂತಿದ್ಲು. ಆದ್ರೆ ಖುಷಿ ಬಾಳಲ್ಲಿ ವಿಧಿಯಾಟವೇ ಬೇರೆಯಾಗಿತ್ತು.
ಇಬ್ಬರು ಬಾಲಕರು ಕಿರುಕುಳಕ್ಕೆ ಬೇಸತ್ತ ಖುಷಿ ಮನೆಯಲ್ಲಿ ಯಾರು ಇಲ್ಲದನ್ನು ನೋಡಿ ನೇಣು ಹಾಕಿಕೊಂಡಿದ್ದಾಳೆ.ಓದುತ್ತಿದ್ದ ಶಾಲೆಯಲ್ಲಿ ಇಬ್ಬರು ಅಪ್ರಾಪ್ತ ಬಾಲಕರು ದಿನ ನಿತ್ಯ ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದರೆಂದು ಖುಷಿಯ ಹೆತ್ತವರು ಆರೋಪಿಸಿದ್ದು, ಮುದ್ದಾಗಿ ಸಾಕಿದ್ದ ಮಗಳ ಕಳೆದುಕೊಂಡ ಕುಟುಂಬಸ್ಥರು ಮಗಳ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ..
Laxmi News 24×7