Breaking News

ಕಾರು, ಬೈಕ್ರಿಜಿಸ್ಟ್ರೇಷನ್ ದರ ಏರಿಕೆ

Spread the love

ಬೆಂಗಳೂರು, : ಹೊಸ ಕಾರು, ಬೈಕ್ ಖರೀದಿ ಮಾಡುವವರಿಗೆ ಶಾಕ್ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಫೆಬ್ರವರಿಯಿಂದ ಹೊಸ ಕಾರು, ಬೈಕ್ ಖರೀದಿಯ ನೋಂದಣಿ ಶುಲ್ಕ (ರಿಜಿಸ್ಟ್ರೇಷನ್) ತಲಾ 1000 ರೂ. ಹಾಗೂ 500 ರೂ. ಹೆಚ್ಚಳ ಮಾಡಲು ನಿರ್ಧರಿಸಿದೆ.

ಈಗಾಗಲೇ ಬೆಳಗಾವಿಯ ಅಧಿವೇಶನದಲ್ಲಿ ರಿಜಿಸ್ಟ್ರೇಷನ್ ಶುಲ್ಕ ಹೆಚ್ಚಳದ ಮಸೂದೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಫೆಬ್ರವರಿಯಿಂದ ಪರಿಷ್ಕೃತ ದರ ಜಾರಿ ಆಗಲಿದೆ.ದರ ಹೆಚ್ಚಳದಿಂದ ಬಂದ ಹಣವನ್ನು ಯೆಲ್ಲೋ ಬೋರ್ಡ್ ಚಾಲಕರ ಅಭಿವೃದ್ಧಿಗೆ ಬಳಕೆ ಮಾಡುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಆದರೆ, ಇದಕ್ಕೆ ವಾಹನ ಮಾಲೀಕರು ಮಾತ್ರ ಗರಂ ಆಗಿದ್ದಾರೆ.

ಈ ಹಣವನ್ನು ಚಾಲಕರ ಅಭಿವೃದ್ಧಿಗೆ ಬಳಸುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ ನಮ್ಮಿಂದ ಕಿತ್ತು ಅವರಿಗೆ ನೀಡುವುದು ಸರಿಯಲ್ಲ. ಸರ್ಕಾರವೇ ಅವರ ಕಲ್ಯಾಣಕ್ಕೆ ಹಣ ನೀಡಲಿ ಎಂದಿದ್ದಾರೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ