Breaking News

ಸೈಫ್ ಅಲಿ ಖಾನ್​ಗೆ ಚಾಕು ಇರಿತ: ಶಂಕಿತ ವ್ಯಕ್ತಿಯ ಫೋಟೋ ಬಹಿರಂಗ

Spread the love

ಬಾಲಿವುಡ್ ನಟ ಸೈಫ್ ಅಲಿ ಖಾನ್​ ಅವರ ಮನೆಗೆ ನುಗ್ಗಿ, ಚಾಕು ಇರಿದ ಪ್ರಕರಣದಲ್ಲಿ ಇಬ್ಬರು ಶಂಕಿತ ವ್ಯಕ್ತಿಗಳನ್ನು ಮುಂಬೈ ಪೊಲೀಸರು ಗುರುತಿಸಿದ್ದಾರೆ. ಆ ಪೈಕಿ ಓರ್ವ ಶಂಕಿತನ ಫೋಟೋ ಕೂಡ ಲಭ್ಯವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗಿದೆ. ಸೈಫ್ ಕುಟುಂಬ ವಾಸವಾಗಿರುವ ಅಪಾರ್ಟ್​ಮೆಂಟ್​ನ ಮೆಟ್ಟಿಲುಗಳನ್ನು ಹತ್ತಿ ಬರುವಾಗ ಸಿಸಿಟಿವಿಯಲ್ಲಿ ಶಂಕಿತನ ವಿಡಿಯೋ ಸೆರೆಯಾಗಿದೆ. ಪ್ರಕರಣದ ಬಗ್ಗೆ ಮುಂಬೈ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.ಸೈಫ್ ಅಲಿ ಖಾನ್​ಗೆ ಚಾಕು ಇರಿತ: ಶಂಕಿತ ವ್ಯಕ್ತಿಯ ಫೋಟೋ ಬಹಿರಂಗ

ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿದ್ದ ವ್ಯಕ್ತಿಯ ಫೋಟೋವನ್ನು ಮುಂಬೈ ಪೊಲೀಸರು ಬಹಿರಂಗಪಡಿಸಿದ್ದಾರೆ. ಗುರುವಾರ ನಸುಕಿನ 2.33 ಗಂಟೆ ಸುಮಾರಿಗೆ ದುಷ್ಕರ್ಮಿಗಳು ಅಪಾರ್ಟ್​ಮೆಂಟ್​ಗೆ ನುಗ್ಗಿದ್ದರು. ಶಂಕಿತ ವ್ಯಕ್ತಿಯು ಟಿ-ಶರ್ಟ್​ ಮತ್ತು ಜೀನ್ಸ್ ಧರಿಸಿದ್ದಾನೆ. ಆತ ಯಾರು? ಆತನ ಉದ್ದೇಶ ಏನಾಗಿತ್ತು ಎಂಬಿತ್ಯಾದಿ ವಿಚಾರಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ದರೋಡೆಕೋರರು ನುಗ್ಗಿದ್ದನ್ನು ಮೊದಲು ನೋಡಿದ್ದು ಸೈಫ್​ ಮನೆಯ ಕೆಲಸದವರು. ಕೂಡಲೇ ಅವರು ಸೈಫ್​ ಅಲಿ ಖಾನ್​ ಅವರನ್ನು ಎಚ್ಚರಿಸಿದರು. ಈ ವೇಳೆ ಆಕ್ರಮಣ ಮಾಡಿದ ದರೋಡೆಕೋರನು ಸೈಫ್ ಅಲಿ ಖಾನ್​ಗೆ 6 ಬಾರಿ ಚಾಕುವಿನಿಂದ ತಿವಿದಿದ್ದಾನೆ. ಬೆನ್ನು, ಕುತ್ತಿಗೆ, ಕೈ ಮುಂತಾದ ಭಾಗಗಳಿಗೆ ಗಾಯಗೊಳಿಸಿದ್ದಾನೆ. ಕೂಡಲೇ ಸೈಫ್ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.


Spread the love

About Laxminews 24x7

Check Also

ಬಾಗಲಕೋಟೆ: ನಿಯಂತ್ರಣ ತಪ್ಪಿ ಎಥಿನಾಲ್ ಲಾರಿ ಪಲ್ಟಿ; ಅಧಿಕಾರಿಗಳ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ!

Spread the loveಬಾಗಲಕೋಟೆ: ನಿಯಂತ್ರಣ ತಪ್ಪಿ ಎಥಿನಾಲ್ ಲಾರಿ ಪಲ್ಟಿ; ಅಧಿಕಾರಿಗಳ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ! ಬಾಗಲಕೋಟೆ ಜಿಲ್ಲೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ