ಯುವಕರು ತಮ್ಮ ಹುಚ್ಚಾಟಗಳಿಗಾಗಿ, ಲೈಕ್ಸ್ ವೀವ್ಸ್‌ಗಳಿಗಾಗಿ ಡೇಂಜರಸ್ ಸ್ಟಂಟ್‌ಗಳನ್ನು ಮಾಡುತ್ತಿರುತ್ತಾರೆ. ಇದಕ್ಕೆ ಸಂಬಂಧಿಸಿದ ಸಾಕಷ್ಟು ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಇದೀಗ ಅಂತಹದ್ದೇ ಎದೆ ಝಲ್ ಎನ್ನಿಸುವ ದೃಶ್ಯವೊಂದು ವೈರಲ್ ಆಗಿದ್ದು, ಯುವಕನೊಬ್ಬ ಚಲಿಸುತ್ತಿರುವ ಆಟೋದ ಟಾಪ್ ಮೇಲೆ ಮಲಗಿ ಪ್ರಯಾಣಿಸಿದ್ದಾನೆ. ಈತನ ಹುಚ್ಚಾಟಕ್ಕೆ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.
ಕೆಲ ಬಿಸಿ ರಕ್ತದ ಯುವಕರು ಇವೆಲ್ಲಾ ಪ್ರಾಣಕ್ಕೆ ಅಪಾಯ ತಂದೊಡ್ಡುತ್ತವೆ ಎಂದು ಗೊತ್ತಿದ್ದರೂ ಕೂಡಾ ರಸ್ತೆಗಿಳಿದು ಬೈಕ್, ಕಾರ್‌ಗಳಲ್ಲಿ ಡೇಂಜರಸ್ ಸ್ಟಂಟ್‌ಗಳನ್ನು ಮಾಡುತ್ತಿರುತ್ತಾರೆ.
ಅದರಲ್ಲೂ ಕೆಲವರಂತೂ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಹುಚ್ಚಾಟವನ್ನು ಮೆರೆಯುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕ ಕೂಡಾ ಕಸರತ್ತು ಮಾಡಿದ್ದಾನೆ. ಹೌದು ಆತ ಚಲಿಸುತ್ತಿರುವ ಆಟೋದ ಮೇಲೆ ಮಲಗಿ ಪ್ರಯಾಣಿಸಿದ್ದು, ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಈತನ ಹುಚ್ಚಾಟವನ್ನು ಕಂಡು ನೆಟ್ಟಿಗರಂತೂ ಬೆಚ್ಚಿ ಬಿದ್ದಿದ್ದಾರೆ.ಯುವಕನೊಬ್ಬ ಆಟೋದೊಳಗೆ ಕುಳಿತು ಪ್ರಯಾಣಿಸುವ ಬದಲು ಸೂಪರ್ ಮ್ಯಾನ್‌ನಂತೆ ಆಟೋ ರಿಕ್ಷಾದ ಟಾಪ್ ಮೇಲೆ ಮಲಗಿ ಪ್ರಯಾಣಿಸಿದ್ದಾನೆ. ಈ ಘಟನೆ ಎರಡು ವರ್ಷಗಳ ಹಿಂದೆ ಬಿಹಾರದಲ್ಲಿ ನಡೆದಿದ್ದು, ಈ ಕುರಿತ ವಿಡಿಯೋವೊಂದು ಇದೀಗ ಮತ್ತೊಮ್ಮೆ ವೈರಲ್ ಆಗಿದೆ.
Laxmi News 24×7