ದಲಿತ ನಾಯಕರ ಸಭೆಯ ಕುರಿತು ಸುರ್ಜೆವಾಲಾ ಜೊತೆ ಮಾತನಾಡಿಲ್ಲ- ಗೃಹ ಸಚಿವ ಜಿ.ಪರಮೇಶ್ವರ
ಬೆಂಗಳೂರಿನಲ್ಲಿ ಸಿ.ಎಲ್.ಪಿ ಸಭೆ
ದಲಿತ ನಾಯಕರ ಸಭೆಯ ಕುರಿತು ಮಾತನಾಡಿಲ್ಲ
ಸಿ.ಎಲ್.ಪಿ ಸಭೆಗೆ ಗೈರಾಗಿಲ್ಲ
ಗೃಹ ಸಚಿವ ಜಿ. ಪರಮೇಶ್ವರ ಮಾಹಿತಿಸಿ.ಎಲ್.ಪಿ ಸಭೆಯಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ ಅವರೊಂದಿಗೆ ದಲಿತ ನಾಯಕರ ಸಭೆಯ ಕುರಿತು ಮಾತನಾಡಿಲ್ಲವೆಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
ಇಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಭವನ ನಿರ್ಮಿಸುವ ವಿಚಾರದಲ್ಲಿ ಸಚಿವ ಸತೀಶ ಜಾರಕಿಹೊಳಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ವಿವಾದ ನಡೆದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಬೆಳಗಾವಿಯಲ್ಲಿ ಕಾಂಗ್ರೆಸ್ ಭವನವನ್ನು ನಿರ್ಮಿಸಿ ಈಗಾಗಲೇ ಉದ್ಘಾಟಿಸಲಾಗಿದೆ. ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಯಾರ್ಯಾರು ಹೆಚ್ಚು ಸಹಾಯ ಮಾಡಿದ್ದಾರೆ ಎಂಬ ಬಗ್ಗೆ ಮಾತ್ರ ಚರ್ಚೆಯಾಗಿದೆ ಹೊರತು ಬೇರೆ ಬೇರೆ ಯಾವುದೇ ಮಾತುಗಳು ಬಂದಿಲ್ಲ ಎಂದರು.
ಸಿ.ಎಲ್.ಪಿ ಸಭೆಗೆ ತಾವು ಹಾಗೂ ರಾಜಣ್ಣ ಗೈರಾಗಿರುವ ಆರೋಪವನ್ನು ಅವರು ತಳ್ಳಿ ಹಾಕಿದರು. ಸಿ.ಎಲ್.ಪಿ ಸಭೆಗೆ ತಾವಿಬ್ಬರೂ ಉಪಸ್ಥಿತರಿದ್ಧೇವು. ತುಮಕೂರಿನಲ್ಲಿ ಸಿರಿಧಾನ್ಯದ ಉತ್ಸವಕ್ಕೆ ಹೋಗಬೇಕಾಗಿದ್ದರಿಂದ ಬೆಳಗ್ಗಿನ ಕಾರ್ಯಕ್ರಮಕ್ಕೆ ಉಪಸ್ಥಿತರಿರಲೂ ಸಾಧ್ಯವಾಗಲಿಲ್ಲ ಎಂದರು.ಅಲ್ಲದೇ ದಲಿತ ನಾಯಕರ ಸಭೆಯ ಕುರಿತು ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ಅವರೊಂದಿಗೆ ಸಿ.ಎಲ್.ಪಿ ಸಭೆಯಲ್ಲಿ ಚರ್ಚೆಯಾಗಿಲ್ಲ. ದಲಿತರ ನಾಯಕ ಸಭೆಯ ಕುರಿತು ಅವರಿಗೆ ಮಾಹಿತಿಯನ್ನು ನೀಡಲಾಗುವುದು ಎಂದರು.
Laxmi News 24×7