Breaking News

ಎತ್ತಿನಗಾಡಿ ಓಡಿಸುತ್ತಿದ್ದಾಗ ಅವಘಡ

Spread the love

ಚಾಮರಾಜನಗರ: ಎತ್ತಿನಗಾಡಿ ಓಡಿಸುವಾಗ ಆಯತಪ್ಪಿ ಕೆಳಕ್ಕೆ ಬಿದ್ದ ವ್ಯಕ್ತಿಯ ಮೇಲೆ ಚಕ್ರ ಹರಿದು ಆತ ಮೃತಪಟ್ಟ ಘಟನೆ ತಾಲೂಕಿನ ಕಮರವಾಡಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆಯಿತು.

ಕಮರವಾಡಿ ಗ್ರಾಮದ ಬಸವ (45) ಮೃತರು. ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಮೂಗೂರು ಜಾತ್ರೆಗೆ ಕಮರವಾಡಿ ಗ್ರಾಮದಿಂದಲೂ ಬಂಡಿಗಳು ಬಂದಿದ್ದವು. ಪೂಜೆ ಮುಗಿಸಿಕೊಂಡು ಗ್ರಾಮಕ್ಕೆ ಮರಳುತ್ತಿದ್ದಾಗ ಅವಘಡ ಸಂಭವಿಸಿದೆ.

bullock-cart

ಬಂಡಿಯ ನೊಗ ಕಳಚಿಕೊಂಡ ಕಾರಣ ಬಸವ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ಬಂಡಿಯ ಚಕ್ರ ಅವರ ಮೈಮೇಲೆ ಹರಿದಿದೆ.

ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ದೃಶ್ಯ ಅಲ್ಲಿನ ಯುವಕರ ಮೊಬೈಲ್​ನಲ್ಲಿ ಸೆರೆಯಾಗಿದೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ