Breaking News

ರಾತ್ರಿ ತಿರುಗುವ ಪುಂಡರಿಗೆ ಧಾರವಾಡ ಪೊಲೀಸರಿಂದ ಖಡಕ್ ಎಚ್ಚರಿಕೆ

Spread the love

ರಾತ್ರಿ ತಿರುಗುವ ಪುಂಡರಿಗೆ ಧಾರವಾಡ ಪೊಲೀಸರಿಂದ ಖಡಕ್ ಎಚ್ಚರಿಕೆ ‌

ರಾತ್ರಿ ತಿರುಗುವ ಪುಂಡರಿಗೆ ಚಳಿ ಬಿಡಿಸಿದ ಪೊಲೀಸರು
ಬೈಕ್ ಪೆಟ್ರೋಲಿಂಗ್ ಮೂಲಕ ಎಚ್ಚರಿಕೆ
112 ತುರ್ತು ಸಹಾಯವಾಣಿಯ ಕುರಿತು ಮಾಹಿತಿ
ಸಾರ್ವಜನಿಕರಿಂದ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ

– ಧಾರವಾಡ ಉಪನಗರ ಠಾಣೆಯ ವ್ಯಾಪ್ತಿಯಲ್ಲಿ ಸೋಮವಾರ ತಡ ರಾತ್ರಿ ಪೊಲೀಸರು ಏರಿಯಾ ಪೊಲೀಸ್ ಬೈಕ್ ಪೆಟ್ರೋಲಿಂಗ್ ನಡೆಸಿ, ಪುಂಡರಿಗೆ ಖಡಕ್ ಎಚ್ಚರಿಕೆ ನೀಡುವುದರ ಜತೆಗೆ ವಿವಿಧ ಸ್ಥಳಗಳಲ್ಲಿ‌ ಸಾರ್ವಜನಿಕರನ್ನು ಭೇಟಿ ಮಾಡಿ ಕಾನೂನು ತಿಳುವಳಿಕೆ ನೀಡಿ 112 ತುರ್ತು ಸಹಾಯವಾಣಿಯ ಕುರಿತು ಜಾಗೃತಿ ಮೂಡಿಸಿದರು. ‌

ವೈ- ನಗರದ ಉಪನಗರ ಪೊಲೀಸ್ ಠಾಣೆಯಿಂದ ತಡ ರಾತ್ರಿ ಏರಿಯಾ ಪೊಲೀಸ್ ಬೈಕ್ ಪೆಟ್ರೋಲಿಂಗ್ ಆರಂಭಿಸಿದ ಪೊಲೀಸರು, ಪ್ರಮುಖ ರಸ್ತೆ ಹಾಗೂ ವೃತಗಳಲ್ಲಿ‌ ಸಂಚಾರಿ ನಡೆಸಿದರು. ಬಳಿಕ ಧಾರವಾಡ ಸವದತ್ತಿ ರಸ್ತೆಯ ಮದಿಹಾಳದ ಮುರುಘಾಮಠಕ್ಕೆ ಭೇಟಿ ನೀಡಿ ಮಠದಲ್ಲಿನ ಮಕ್ಕಳಿಗೆ ಕಾನೂನು ತಿಳುವಳಿಕೆ ನೀಡಿ 112 ಸಹಾಯವಾಣಿಯ ಕುರಿತು ಜಾಗೃತಿ ಮೂಡಿಸಿದರು. ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.‌.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ