Breaking News

ಆಧಾರವಿಲ್ಲದ ಆರೋಪ ಮಾಡುವುದನ್ನು ಬಿಟ್ಟು… ರಾಜ್ಯದ ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು ನೀಡಿ…-ಗೃಹ ಸಚಿವ ಜಿ.ಪರಮೇಶ್ವರ

Spread the love

ಶೇ.60% ಸಚಿವ ಕುಮಾರಸ್ವಾಮಿಗಳ ಆರೋಪ
ಆಧಾರವಿಲ್ಲದ ಆರೋಪ ಮಾಡುವುದನ್ನು ಬಿಟ್ಟು…
ರಾಜ್ಯದ ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು ನೀಡಿ…
ಗೃಹ ಸಚಿವ ಜಿ.ಪರಮೇಶ್ವರ ಹೇಳಿಕೆ

ಕೇಂದ್ರದ ಬೃಹತ್ ಕೈಗಾರಿಕೆಗಳ ಸಚಿವ ಕುಮಾರಸ್ವಾಮಿಗಳು ರಾಜ್ಯದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು ನೀಡುವುದನ್ನು ಬಿಟ್ಟು ಆಧಾರವಿಲ್ಲದ ಆರೋಪಗಳನ್ನು ಮಾಡುವುದು ಸರಿಯಲ್ಲ. ಅವರ ಬಳಿ ದಾಖಲೆಗಳಿದ್ದರೇ ನಮಗೆ ನೀಡಲಿ, ತನಿಖೆ ನಡೆಸಲು ನೆರವಾಗುತ್ತದೆಂದು ಗೃಹ ಸಚಿವ ಜಿ. ಪರಮೇಶ್ವರ ತಿರುಗೇಟು ನೀಡಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕೇಂದ್ರ ಸಚಿವ ಕುಮಾರಸ್ವಾಮಿಯವರ ಶೇ. 60 ರಷ್ಟು ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ನೀಡಿ, ಪರಿಶೀಲಿಸಿ ಕ್ರಮ ಕೈಗೊಳ್ಳೋಣ, ಸುಮ್ಮನೇ ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ ಎಂದರು. ಇನ್ನು ಭದ್ರಾವತಿ ಸ್ಟೀಲ್ಸ್ ಸೊರಗುತ್ತಿದ್ದು, ಕಾರ್ಖಾನೆ ಮುಚ್ಚುವ ಹಂತದಲ್ಲಿದೆ. ಅದಕ್ಕೆ ಉಳಿಸಿ, ಸಾವಿರಾರು ಜನರಿಗೆ ಕೆಲಸ ನೀಡುವ ಕೆಲಸ ಮಾಡಬೇಕು. ಕರ್ನಾಟಕದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಒತ್ತು ಕೊಡುವ ಬಿಟ್ಟು, ಸುಮ್ಮನೆ ರಾಜಕೀಯ ಆರೋಪ ಮಾಡುವುದು ಸರಿಯಲ್ಲ ಎಂದರು.

ಇನ್ನು ಸಚಿವ ಸತೀಶ ಜಾರಕಿಹೊಳಿ ಅವರ ಔತಣ ಕೂಟದ ಕುರಿತು ಮಾತನಾಡಿದ ಅವರು ಅಲ್ಲಿ ಹೊಸ ವರ್ಷದ ಡಿನ್ನರ್ ನಡೆದಿದೆ. ಯಾವುದೇ ರೀತಿಯ ರಾಜಕೀಯ ಚರ್ಚೆಯಾಗಿಲ್ಲ. ಸುಮ್ಮನೆ ಬೇರೆ ಬೇರೆ ಅರ್ಥ ಕಲ್ಪಿಸುವುದು ಸರಿಯಲ್ಲ. ಇನ್ನು ಎಸ್ಸಿ.ಎಸ್.ಸಿ ಸಮಾವೇಶ ಆಯೋಜಿಸಿ ಅಭಿನಂದನೆಗಳನ್ನು ಸಲ್ಲಿಸುವ ಯೋಚನೆಯಲ್ಲಿದ್ದೇವೆ ಎಂದು ತಿಳಿಸಿದರು. ಬೈಟ್

ಇನ್ನು ಹೊಸ ಎಚ್.ಎಂ.ಪಿ.ವಿ ವೈರಸ್ ಕುರಿತು ಸರ್ಕಾರ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಇದು ಅಷ್ಟೋಂದು ಆತಂಕಕಾರಿಯಲ್ಲ ಎಂದಿದ್ದಾರೆ. ಆರೋಗ್ಯ ಇಲಾಖೆ ಕೆಲ ಸೂಚನೆಗಳನ್ನು ನೀಡಿದ್ದು, ಜನರು ಕೂಡ ಮುಂಜಾಗೃತೆ ಕೈಗೊಳ್ಳುವುದು ಉತ್ತಮ ಎಂದರು.


Spread the love

About Laxminews 24x7

Check Also

ಕೊಟಗುಂಡಹುಣಸಿಯಲ್ಲಿ ನಿವ ಅದೇಷ್ಟೋ ಜನ ನಿವೃತ್ತಿಯಾದ ನಂತರ ತಾವಾಯ್ತು, ತಮ್ಮ ಕುಟುಂಬ ಆಯಿತು ಅಂತಾ ಕಾಲ ಕಳೆಯುವವರೇ ಹೆಚ್ಚು.

Spread the loveಕೊಟಗುಂಡಹುಣಸಿಯಲ್ಲಿ ನಿವ ಅದೇಷ್ಟೋ ಜನ ನಿವೃತ್ತಿಯಾದ ನಂತರ ತಾವಾಯ್ತು, ತಮ್ಮ ಕುಟುಂಬ ಆಯಿತು ಅಂತಾ ಕಾಲ ಕಳೆಯುವವರೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ