ಚಿಕ್ಕೋಡಿ:ಬಬಲಾದಿಯ ಸದಾಶಿವ ಅಜ್ಜನವರು ಮುಂದೆ ಆಗುವುದನ್ನು ಹೇಳಿದ್ದಾರೆ. ಹಿಂದೆ ಆಗಿ ಹೋಗಿದ್ದನ್ನು ಬರೆದಿಟ್ಟಿದ್ದಾರೆ. ಅವರ ಕಾರ್ಯಸಿದ್ದಿಗಾಗಿ ಮದ್ಯವನ್ನು ಸೇವಿಸುತ್ತಿದ್ದರು. ಆದರೆ ಯಾರು ಕೂಡಾ ಮದ್ಯವನ್ನು ಸೇವಿಸಬಾರದೆಂದು ಮೂಲಮಹಾ ಸಂಸ್ಥಾನ ಮಠದ ಬಬಲಾದಿಯ ಒಡೆಯರಾದಂತಹ ಶ್ರೀಗುರು ಸಿದ್ದರಾಮಯ್ಯ ಅಜ್ಜನವರು ಹೇಳಿದರು.
ಅವರು ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮದಲ್ಲಿ ರುದ್ರ ಭೂಮಿಯ ಉದ್ಘಾಟನೆ ಹಾಗೂ ಬಿಲ್ವಪತ್ರೆ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಲಕ್ಷ್ಮೀದೇವಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.ಸದ್ಯದ ಪ್ರಪಂಚದಲ್ಲಿ ಒಂದು ಕುಟುಂಬಕ್ಕೆ ಒಳಿತಾಗುತ್ತಿದ್ದಾರೆ ಆ ಕುಟುಂಬಕ್ಕೆ ಮಾಟ,ಮಂತ್ರ ಮಾಡುವರ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ನಿಂಬೆಕಾಯಿ, ಚೀಟಿ,ಮಾಟ ಮಂತ್ರ ಯಾರು ಮಾಡುತ್ತಾರೋ ಅವರಿಗೆ ಬಬಲಾದಿ ಸದಾಶಿವ ಅಜ್ಜವನವರು ಅವರ ಕುಟುಂಬವನ್ನೇ ಸರ್ವನಾಶ ಮಾಡುತ್ತಾರೆ. ದಾನ,ಧರ್ಮ, ಪರೋಪಕಾರ, ತಂದೆ,ತಾಯಿಯ ಸೇವೆ ಮಾಡುವವರಿಗೆ ಈ ಭೂಮಿಯ ಮೇಲೆ ಉಳಿಗಾಲವಿದೆ ಎಂದರು.
ಬಬಲಾದಿ ಸದಾಶಿವ ಅಜ್ಜನವರು ಹೇಳಿದಂತೆ ಅಧಿಕಾರ,ಯವೌನ, ಹಣದ ಸೊಕ್ಕು ಒಳ್ಳೆಯದಲ್ಲ. ಇದರಿಂದಾಗಿ ಅವರ ಅಜ್ಞಾನಕ್ಕೆ ಕಾರಣವಾಗುತ್ತದೆ ಎಂದರು. ಮಕ್ಕಳ ಭವಿಷ್ಯ ಒಳಿತಾಗಬೇಕೆಂದರೆ ಅವರ ಕೈಗಳಿಗೆ ಮೊಬೈಲ್ ಕೊಡುವುದನ್ನು ಬಿಡಬೇಕು.
ಯಡೂರವಾಡಿ ಗ್ರಾಮದ ಜನರು ಭಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಭಕ್ತಿಯನ್ನು ಹೆಚ್ಚಿಸಿಕೊಂಡಿದ್ದಲ್ಲಿ ತಾಯಿ ಲಕ್ಷ್ಮೀದೇವಿ, ಬಬಲಾದಿ ಸದಾಶಿವ ಅಜ್ಜನವರ ಆಶೀರ್ವಾದದಿಂದ ನಿಮ್ಮ ಗ್ರಾಮದಲ್ಲಿ ಯಾವುದೇ ರೋಗರುಜಿನಗಳು,ಬೆಳೆಗಳಿಗೆ ರೋಗಗಳು ತಾಗಲಾರದಂತೆ ನೋಡಿಕೊಳ್ಳುತ್ತಾರೆ ಎಂದರು. ಮುಂದಿನ ದಿನಮಾನಗಳಲ್ಲಿ ವಿಚಿತ್ರವಾದ ರೋಗಗಳು ಬರುತ್ತವೆ. ವೈದ್ಯರಿಗೆ ಸವಾಲಾಗಿದೆ.ಜನರು ಬಹಳಷ್ಟು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ನಮ್ಮ ಆಹಾರಗಳು ಪರಿಶುದ್ಧವಾಗಿರಬೇಕು. ಅದಲ್ಲದೆ ಈ ಗ್ರಾಮದಲ್ಲಿ ರುದ್ರ ಭೂಮಿಗೆ ಭೂಮಿಯನ್ನು ನೀಡಿದಂತಹ ಯಳವಂತೆ ಕುಟುಂಬಸ್ಥರಿಗೆ ಬಬಲಾದಿ ಸದಾಶಿವ ಅಜ್ಜನವರ ಆಶೀರ್ವಾದ ಇರುತ್ತದೆ ಎಂದರು.
ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ, ಎಂಎಲ್‌ಸಿ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಪ್ರಯತ್ನದಿಂದ ರುದ್ರ ಭೂಮಿ ಮಂಜುರಾಗಿದೆ. ಇನ್ನೂ ಭೂಮಿಯನ್ನು ನೀಡಿದಂತಹ ಕಿಟು ಶಿವಲಿಂಗ ಯಳವಂತೆ, ಶಂಕರ್ ಅಪ್ಪು ಯಳವಂತೆ ಅವರಿಗೆ ಶ್ರೀಗುರು ಸಿದ್ದ ರಾಮ ಅಜ್ಜನವರು ಸತ್ಕರಿಸಿದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಬಾಳು ಮಾರುತಿ ಧನಗರ,ಸದಸ್ಯರಾದ ಅಜೀತ ಕಿಲ್ಲೆದಾರ,ಕಾಕಾಸಾಹೇಬ ಘಾಟಗೆ,ಮಚ್ಚೇಂದ್ರ ಜೂಗುಳೆ,ಕಿಟು ಯಳವಂತೆ, ಸಂಜು ಪಿರಾಜೆ,ದೀಪಕ ಮಾನೆ,ಸದಾಶಿವ ಸಾವಳೆ,ದತ್ತಾ ಪವಾರ ಹಾಗೂ ಊರಿನ ಎಲ್ಲ ಯುವಕ ಮಂಡಳದ ಸದಸ್ಯರು ಉಪಸ್ಥಿತರಿದ್ದರು.ಕಾರ್ಯಕ್ರಮದ ಬಳಿಕ ಗ್ರಾಮಸ್ಥರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
Laxmi News 24×7