ವಿಜಯಪುರ: ವ್ಯಕ್ತಿಯೊರ್ವ ಚೇರ್ ಮೇಲೆ ಕುಳಿತ ಸ್ಥಳದಲ್ಲೇ ಹೃದಯಾಘಾತದಿಂದ ಸಾವನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಲ್ಲಿ ಬೆಳ್ಳಂ ಬೆಳಿಗ್ಗೆ ಸಂಭವಿಸಿದೆ. ಮೃತ ದುರ್ದೈವಿಯನ್ನು ಸಾಹೇಬಗೌಡ ಹೆರಾಣವರ (72) ಎಂದು ಗುರುತಿಸಲಾಗಿದೆ. ಇನ್ನೂ ಮೃತ ವ್ಯಕ್ತಿ ಬಸವನ ಬಾಗೇವಾಡಿ ಪಟ್ಟಣದ ಮಿನಿ ವಿಧಾನ ಸೌಧದ ಮುಂದೆ ಚಿಕ್ಕ ಅಂಗಡಿ ಹಾಕಿಕೊಂಡಿದ್ದರು.
ತಹಶೀಲ್ದಾರ ಕಚೇರಿಗೆ ಕೆಲಸದ ನಿಮಿತ್ಯ ಆಗಮಿಸಿದ ಸಾರ್ವಜನಿಕರಿಗೆ ಅರ್ಜಿ ಫಾರ್ಮ್ ತುಂಬವ ಕಾಯಕ ಮಾಡಿ ಕೊಂಡಿದ್ದರು ಎನ್ನಲಾಗಿದೆ. ಎಂದಿನಂತೆ ಇಂದು ಬೆಳಗಿನ ಜಾವ ಬಂದು ಅಂಗಡಿ ತಗೆದು ಕುರ್ಚಿ ಮೇಲೆ ಕುಳಿತು ಕೆಲಸ ಆರಂಭಿಸುತ್ತಿದ್ದಂತೆ ಹೃದಯಾಘಾತವಾಗಿ ಸಾವನಪ್ಪಿರುವುದಾಗಿ ಶಂಕೆ ವ್ಯಕ್ತಪಡಿಸಲಾಗಿದೆ. ಇನ್ನೂ ಸ್ಥಳದಲ್ಲೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬಸವನ ಬಾಗೇವಾಡಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.