ಬೆಂಗಳೂರು, ಡಿ.5- ಸೋಮವಾರದಿಂದ ಚಳಿಗಾಲದ ಅಧಿವೇಶನ ಪ್ರಾರಂಭವಾಗಲಿದ್ದು,ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಕಾವೇರಿದ ಮಾತಿನ ಚಕಮಕಿ ಹಾಗೂ ಆರೋಪ ಪ್ರತ್ಯರೋಪಕ್ಕೆ ವೇದಿಕೆಯಾಗಲಿದ್ದು, ಹೀಗಾಗಿ ಎಲ್ಲರಲ್ಲೂ ಭಾರೀ ಕುತೂಹಲ ಮೂಡಿಸಿದೆ.
ಸದನದ ಕಲಾಪ ವೇಳೆ ಪ್ರಶ್ನೋತ್ತರ ಅವಧಿ, 10 ಮಸೂದೆಗಳ ಮಂಡನೆಯಾಗಲಿವೆ.ಈ ಸಂದರ್ಭದಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ಕೊನೆಯ ಎರಡು ದಿನ ಚರ್ಚೆ ನಡೆಸಲಾಗುವುದು.
ಕೋವಿಡ್ ಕಾರಣದಿಂದಾಗಿ ಮುಂಗಾರು ಅಧಿವೇಶನ ಪೂರ್ಣ ಪ್ರಮಾಣದಲ್ಲಿ ನಡೆಯಲು ಸಾಧ್ಯವಾಗಿರಲಿಲ್ಲ. ಸಾಕಷ್ಟು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡು ಮುಂಗಾರು ಅಧಿವೇಶನ ನಡೆಸಲಾಗಿತ್ತು. ಹೀಗಿದ್ದರೂ ಶಾಸಕರು, ಅಧಿಕಾರಿಗಳು ಕೋವಿಡ್ಗೆ ತುತ್ತಾಗಿದ್ದರು. ಈ ನಿಟ್ಟಿನಲ್ಲಿ ಚಳಿಗಾಲದ ಅಧಿವೇಶನಕ್ಕೂ ಸಾಕಷ್ಟು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಈ ಬಾರಿಯ ಅಧಿವೇಶನದಲ್ಲಿ ಪ್ರಮುಖವಾಗಿ ಲವ್ ಜಿಹಾದ್ ಹಾಗೂ ಗೋ ಹತ್ಯೆ ನಿಷೇಧ ಕಾಯ್ದೆಗಳು ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಕೋಲಾಹಲಾ ಸೃಷ್ಟಿಸುವ ಸಾಧ್ಯತೆಯಿದೆ. ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಮಂಡನೆ ಮಾಡಲಿದ್ದು, ಅದಕ್ಕೆ ಬೇಕಾದ ಎಲ್ಲ ಪೂರ್ವ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ.2010ರಲ್ಲಿ ಕರ್ನಾಟಕ ಗೋ ಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆಯ 1964 ಬದಲಾಗಿ, ¾¾ಕರ್ನಾಟಕ ಜಾನುವಾರು ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ 2010ನ್ನು ಮಂಡನೆಯಾಗುವ ನಿರೀಕ್ಷೆ ಇದೆ.
Laxmi News 24×7