Breaking News

ಸಂಬಳ ಸಿಗದೇ ಸುಸೈಡ್ ಮಾಡಿಕೊಂಡ ಶಿಕ್ಷಕ..

Spread the love

ಚಿಕ್ಕಬಳ್ಳಾಪುರ, ಡಿ.5-ಕೊರೊನಾದಿಂದಾಗಿ ವೇತನವಿಲ್ಲದೆ ಜೀವನ ನಿರ್ವಹಣೆಗೆ ಆರ್ಥಿಕ ಸಂಕಷ್ಟಕ್ಕೆ ನಲುಗಿದ ಖಾಸಗಿ ಶಾಲಾ ಶಿಕ್ಷಕರೊಬ್ಬರು ಆತ್ಮಹತ್ಯೆಗೆ ಶರಣಾಗಿರುವುದು ಶಿಕ್ಷಕ ವೃಂದದಲ್ಲಿ ಆಘಾತ ಉಂಟುಮಾಡಿದೆ.ಮಂಚೇನಹಳ್ಳಿಯ ಕನಗಾನಕೊಪ್ಪದ ಕೃಷ್ಣಪ್ಪ ಎಂಬುವವರ ಏಕೈಕ ಪುತ್ರ ಚಂದ್ರಶೇಖರ್ (35) ಆತ್ಮಹತ್ಯೆಗೆ ಶರಣಾದ ದುರ್ದೈವಿ.

ಎಂಎ ಇಂಗ್ಲಿಷ್ ಪದವಿ ವ್ಯಾಸಂಗ ಮಾಡಿದ್ದ ಚಂದ್ರಶೇಖರ್ ಅವರು ಮಂಚೇನಹಳ್ಳಿಯ ಖಾಸಗಿ ಶಾಲೆಯಲ್ಲಿ ಶಿಕ್ಷಕ ವೃತ್ತಿ ಮಾಡುತ್ತಿದ್ದರು. ಜತೆಗೆ ಟ್ಯುಟೋರಿಯಲ್ ನಡೆಸುತ್ತ ಜೀವನಕ್ಕೆ ಆಸರೆಯಾಗಿ ಮಾಡಿಕೊಂಡು ನೆಮ್ಮದಿ ಬದುಕು ಸಾಗಿಸುತ್ತಿದ್ದರು.

ಈ ನಡುವೆ ಕೊರೊನಾ ಹೊಡೆತ ನೀಡಿದೆ. ಕೆಲಸ ನಿರ್ವಹಿಸುತ್ತಿದ್ದ ಶಿಕ್ಷಣ ಸಂಸ್ಥೆ ಬಾಗಿಲು ಮುಚ್ಚಿದ್ದು, ಮತ್ತೊಂದೆಡೆ ಟ್ಯುಟೋರಿಯಲ್ ಸಹ ನಡೆಯುತ್ತಿರಲಿಲ್ಲ. ಇದರಿಂದ ಭಾರೀ ಹೊಡೆತ ಬಿದ್ದು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರು.

ಒಂದೆಡೆ ಹಲವು ವರ್ಷಗಳಿಂದ ಕಾರ್ಯನಿರ್ವಹಿಸಿದರೂ ಅನುದಾನಿತ ಶಿಕ್ಷಕನಾಗಿ ಅನುಮೋದನೆ ದೊರಕಿಸಿಕೊಡದ ಶಿಕ್ಷಣ ಸೆಂ್ಥಯ ಆಡಳಿತ ಮಂಡಳಿ ವಿರುದ್ಧ ಸಹೋದ್ಯೋಗಿಗಳೊಂದಿಗೆ ಹಾಗೂ ಸ್ನೇಹಿತರೊಂದಿಗೆ ಅಳಲು ತೋಡಿಕೊಂಡಿದ್ದರು.


Spread the love

About Laxminews 24x7

Check Also

ಸ್ನೇಹಿತರೊಂದಿಗೆ ಪಾನಿಪುರಿ ತಿನ್ನಲು ಹೋದವನ ಮೇಲೆ ಹಲ್ಲೆ ; ಚಿಕಿತ್ಸೆ ಫಲಿಸದೇ ಸಾವು

Spread the loveಬೆಂಗಳೂರು : ಪಾನಿಪುರಿ ತಿನ್ನಲು ಹೋದಾಗ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ನಂದಿನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ