Breaking News

ಬೆಳಗಾವಿಯಲ್ಲಿ ಮಾತೋಶ್ರೀ ಅಹಿಲ್ಯಾಬಾಯಿ ಹೋಳ್ಕರ್ ಅವರ ತ್ರಿಶತಾಬ್ದಿ ಆಚರಣೆ

Spread the love

ಬೆಳಗಾವಿಯಲ್ಲಿ ಮಾತೋಶ್ರೀ ಅಹಿಲ್ಯಾಬಾಯಿ ಹೋಳ್ಕರ್ ಅವರ ತ್ರಿಶತಾಬ್ದಿ ಆಚರಣೆ

ಮಾತೋಶ್ರೀ ಅಹಿಲ್ಯಾಬಾಯಿ ಹೋಳ್ಕರ್ ಅವರ ತ್ರಿಶತಾಬ್ದಿ ಆಚರಣೆ
ಬೆಳಗಾವಿಯಲ್ಲಿ ಕಾರ್ಯಕ್ರಮದ ಆಯೋಜನೆ
ಅಹಿಲ್ಯಾಬಾಯಿ ಹೋಳ್ಕರ್ ಕಿರುನಾಟಕ ಪ್ರದರ್ಶನ
ಸಾಧಕರನ್ನು ಗೌರವಿಸಿದ ಗಣ್ಯರು

“ಉನ್ನತಿ ಟ್ರಸ್ಟ್ ಬೆಳಗಾವಿ, ರಾಷ್ಟ್ರ ಸೇವಿಕಾ ಸಮಿತಿ ಬೆಳಗಾವಿ, ಮತ್ತು ಸಾಮಾಜಿಕ ಸಾಮರಸ್ಯ ವೇದಿಕೆ ಬೆಳಗಾವಿಯ ಸಂಯುಕ್ತಾಶ್ರಯದಲ್ಲಿ ಮಾತೋಶ್ರೀ ಅಹಿಲ್ಯಾಬಾಯಿ ಹೋಳ್ಕರ್ ರವರ ತ್ರಿಶತಾಬ್ದಿ ಆಚರಣೆಯನ್ನು ಮಾಡಲಾಯಿತು.

ಕಾರ್ಯಮಕ್ಕೆ ಮುಖ್ಯ ಅಥಿತಿಯಾಗಿ ಸಂಶೋಧಕ, ಲೇಖಕರು ಆದ ಶ್ರೀ ಶಂಕರ ಎಂ ಬುಚಡಿ ಅವರು ಉಪಸ್ಥಿತರಿದ್ದರು.ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಅಖಿಲ ಭಾರತ ರಾಷ್ಟ್ರ ಸೇವಿಕಾ ಸಮಿತಿಯ ಪ್ರಚಾರ ಮತ್ತು ಪ್ರಸಾರ ಪ್ರಮುಖರಾದ ಸುನೀಲಾ ಹರಿ ಸೋವಣಿ ಪುಣೆ ರವರು ಉಪಸ್ಥಿತರಿದ್ದರು. ಕಾರ್ಯಕ್ರಮವು ಶಿವಲಿಂಗಕ್ಕೆಬಿಲ್ವರ್ಚನೆ ಮಾಡಿ ಮಾತೋಶ್ರೀ ಅಹಿಲ್ಯಬಾಯಿ ಹೋಳ್ಕರ್ ಮತ್ತು ಭಾರತ ಮಾತಾ ಭಾವ ಚಿತ್ರಗಳಿಗೆ ಪ್ರಮುಖರಿಂದ ಪುಷ್ಪರ್ಚನ ಮಾಡುವದರೊಂದಿಗೆ ಪ್ರಾರಂಭ ಮಾಡಲಾಯಿತು..

ಶಂಕರ ಎಂ ಬುಚಡಿ ಅವರು ತಮ್ಮ ಮನದಾಳದ ಮಾತುಗಳನ್ನಾಡಿದರು. ಅಲ್ಕಾತಾಯಿ ಇನಾಮಾದರ್ ರವರು ಪ್ರಸ್ಥಾವಿಕವಾಗಿ ಮಾತನಾಡಿದರು. ನಂತರ ಬೆಳಗಾವಿ ಮಹಾಪೌರರಾದ ಸವಿತಾ ಕಾಂಬಳೆಯವರನ್ನು ಮತ್ತು ಶಂಕರ ಗುರೂಜಿ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ನಂದೀಶ್ ಕೋರಿ, ಉಜ್ವಲಾ ಬಡವನ್ನಾಚೆ ಶ್ರೀಶೈಲ ಮಠಪತಿ, ಲಕ್ಷ್ಮೀ ಮಿರ್ಜಿ ಇನ್ನುಳಿದವರು ಭಾಗಿಯಾಗಿದ್ಧರು. ಉನ್ನತಿ ಟ್ರಸ್ಟಿನ ಮಾತೆಯರು ಮತ್ತು ಸಹೋದರಿಯರಿಂದ ಲೋಕಮಾತಾ ಅಹಿಲ್ಯಾ ಬಾಯಿ ಅವರ ಜೀವನ ಚರಿತ್ರೆ ಕುರಿತು ಅದ್ಭುತವಾದ ಕಿರುನಾಟಕ ಪ್ರದರ್ಶನ ಮಾಡಿದರು..


Spread the love

About Laxminews 24x7

Check Also

ಫೆ.9ರಿಂದ ಮೆಟ್ರೋ ದರ ಏರಿಕೆಗೆ ಸರ್ಕಾರ ಒಪ್ಪಿಗೆ?

Spread the loveಬೆಂಗಳೂರು: ಮೆಟ್ರೋ  ಪ್ರಯಾಣಿಕರಿಗೆ ಮತ್ತೊಮ್ಮೆ ಶಾಕ್ ಎದುರಾಗಿದೆ. ಫೆಬ್ರವರಿ 9ರಿಂದ ಮತ್ತೆ ಮೆಟ್ರೋ ದರ ಏರಿಕೆಯಾಗುವ ಸಾಧ್ಯತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ