Breaking News

ಬಾಣಂತಿಯರಿಗೆ ನೀಡಲಾಗಿದ್ದ ಐವಿ ದ್ರಾವಣ ಬಳಕೆಗೆ ಯೋಗ್ಯವಲ್ಲ, ವರದಿ

Spread the love

ರಾಯಚೂರು, ಡಿಸೆಂಬರ್​ 28: ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ (Sindhanur Hospital) ನಾಲ್ವರು ಬಾಣಂತಿಯರ ಸಾವಿಗೆ ಕಾರಣವಾಗಿದೆ ಎನ್ನಲಾಗಿರುವ IV ರಿಂಗರ್ ಲ್ಯಾಕ್ಟೇಟ್ ದ್ರಾವಣವನ್ನು ಪರೀಕ್ಷೆಗೆ ಒಳಪಡಿಸಿದ್ದು, ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. IV ರಿಂಗರ್ ಲ್ಯಾಕ್ಟೇಟ್ ದ್ರಾವಣದಲ್ಲಿನ ಎಂಡೋ ಟಾಕ್ಸಿನ್ ಎಂಬ ಅಂಶ ಬಳಕೆಗೆ ಯೋಗ್ಯವಲ್ಲ (ನೆಗೆಟಿವ್) ಅಂತ ಬೆಂಗಳೂರು ಮತ್ತು ಹೈದರಾಬಾದ್​ನ ಲ್ಯಾಬ್​ಗಳ ವರದಿಯಲ್ಲಿ ಬಹಿರಂಗಗೊಂಡಿದೆ.

ಸಿಂಧನೂರು: ಬಾಣಂತಿಯರಿಗೆ ನೀಡಲಾಗಿದ್ದ ಐವಿ ದ್ರಾವಣ ಬಳಕೆಗೆ ಯೋಗ್ಯವಲ್ಲ, ವರದಿ

ರಾಯಚೂರು ಜಿಲ್ಲಾಡಳಿತ ಒಟ್ಟು ಮೂರು ಲ್ಯಾಬ್​ಗಳಿಗೆ ತಲಾ 6 IV ರಿಂಗರ್ ಲ್ಯಾಕ್ಟೇಟ್ ದ್ರಾವಣ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿತ್ತು. ಬೆಂಗಳೂರಿನ ವೈದ್ಯಕೀಯ ಕಾಲೇಜು ನೀಡಿದ ವರದಿಯಲ್ಲಿ 6 ಸ್ಯಾಂಪಲ್ ಪೈಕಿ 4 ಸ್ಯಾಂಪಲ್​ಗಳು ಉಪಯೋಗಕ್ಕೆ ಯೋಗ್ಯವಲ್ಲ, ಎರಡು ಉಪಯೋಗಕ್ಕೆ ಯೋಗ್ಯವಾಗಿವೆ ಎಂದು ಹೇಳಿದೆ. ಇನ್ನು, ಹೈದರಾಬಾದ್​ನ ವಿಂಪ್ಟಾ ಲ್ಯಾಬ್ ವರದಿಯಲ್ಲಿ 6 ಸ್ಯಾಂಪಲ್ ಪೈಕಿ, ನಾಲ್ಕು ಉಪಯೋಗಕ್ಕೆ ಯೋಗ್ಯವಿದ್ದು, ಎರಡು ಯೋಗ್ಯವಲ್ಲ ಅಂತ ವರದಿಯಲ್ಲಿ ಉಲ್ಲೇಖವಾಗಿದೆ. ಸದ್ಯ, ಸರ್ಕಾರದ ಡ್ರಗ್ ಕಂಟ್ರೋಲ್ ಲ್ಯಾಬ್​ನ ವರದಿ ಮಾತ್ರ ಬಾಕಿ ಇದೆ ಎಂದು ರಾಯಚೂರು ಜಿಲ್ಲಾಧಿಕಾರಿ ನಿತೀಶ್​ ಕೆ ಮಾಹಿತಿ ನೀಡಿದ್ದಾರೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ