Breaking News

ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಆರಂಭ

Spread the love

ಬೆಳಗಾವಿ: ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ 1924ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಹಿನ್ನೆಲೆ ಬೆಳಗಾವಿಗೆ ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರ ದಂಡೇ ಆಗಮಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಭೆ ಆರಂಭವಾಗಿದ್ದು, 200ಕ್ಕೂ ಅಧಿಕ ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಭಾಗವಹಿಸಿದ್ದಾರೆ. ಸಂಜೆ 7 ಗಂಟೆವರೆಗೆ ಸಭೆ ನಡೆಯಲಿದೆ. ಆದರೆ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ಗೈರಾಗಿದ್ದಾರೆ.

ವೀರಸೌಧಕ್ಕೆ 100 ಮೀಟರ್ ನಡೆದುಕೊಂಡೆ ಆಗಮಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ‌ ರಾಹುಲ್ ಗಾಂಧಿ ಸೇರಿ ಇನ್ನಿತರ ನಾಯಕರನ್ನು ಸೇವಾ ದಳದ ಕಾರ್ಯಕರ್ತರು ಪಥಸಂಚಲನದ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು. ಈ ವೇಳೆ ಭಾರತ್ ಮಾತಾಕೀ ಜೈ ಘೋಷಣೆ ಮೊಳಗಿತು. ಜೊತೆಗೆ ಕೈಯಲ್ಲಿ ಎಲ್ಲ ನಾಯಕರು ನವಸತ್ಯಾಗ್ರಹ ಎಂಬ ಬರಹದ ಗಾಂಧೀಜಿ ಭಾವಚಿತ್ರ ಹಿಡಿದು ನಡೆದುಕೊಂಡೇ ಸೌಧ ಪ್ರವೇಶಿಸಿದರು.ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ

ಬಳಿಕ ವೀರಸೌಧ ಆವರಣದಲ್ಲಿ ಕಾಂಗ್ರೆಸ್ ಧ್ವಜಾರೋಹಣವನ್ನು ಮಲ್ಲಿಕಾರ್ಜುನ ಖರ್ಗೆ ನೆರವೇರಿಸಿದರು. ನಂತರ ಖರ್ಗೆ, ರಾಹುಲ್, ಸಿಎಂ ಸಿದ್ದರಾಮಯ್ಯ ಅವರು ಒಂದೊಂದು ಗಿಡ ನೆಟ್ಟು ಗಾಂಧೀಜಿ ಪ್ರತಿಮೆಗೆ ಎಲ್ಲ ನಾಯಕರು ನಮನ ಸಲ್ಲಿಸಿದರು.

ಸಿಡಬ್ಯುಸಿಯ ಎಲ್ಲ ಸದಸ್ಯರಿಗೆ ಮೈಸೂರು ರೇಷ್ಮೆ ಶಾಲು, ಬೆಳಗಾವಿ ಕುಂದಾ, ಗೋಕಾಕ್​ ಕರದಂಟು, ಮೈಸೂರು ಸ್ಯಾಂಡಲ್ ಸೋಪ್, ಲೆದರ್ ಬ್ಯಾಗ್, ಗಾಂಧೀಜಿ ಅವರ ‘ನನ್ನ ಕನಸಿನ ಭಾರತ’ ಪುಸ್ತಕವನ್ನು ನೆನಪಿನ ಕಾಣಿಕೆಯಾಗಿ ಉಪ‌ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ವಿತರಿಸಿದರು.


Spread the love

About Laxminews 24x7

Check Also

ಏಪ್ರಿಲ್‌ಗೆ ಜಿಬಿಎ, ಸ್ಥಳೀಯ ಸಂಸ್ಥೆ ಚುನಾವಣೆ ಸಿದ್ಧತೆಗೆ ಜಿಲ್ಲಾಧಿಕಾರಿಗಳಿಗೆ ಆಯೋಗ ಸೂಚನೆ

Spread the loveಬೆಂಗಳೂರು:ಕಳೆದ ನಾಲ್ಕೈದು ವರ್ಷಗಳಿಂದ ಒಂದಿಲ್ಲೊಂದು ಕಾರಣಗಳಿಂದ ಪದೇ ಪದೇ ಮುಂದೂಡಲಾಗಿದ್ದ ಕರ್ನಾಟಕ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಮುಂಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ