Breaking News

ಬೆಳಗಾವಿಯ ಕಾಂಗ್ರೆಸ್​ ಬ್ಯಾನರ್​ ನಕ್ಷೆಯಿಂದ ಪಿಒಕೆ ಕಾಣೆ: ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಖಂಡನೆ

Spread the love

ನವದೆಹಲಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಅಧಿವೇಶನಕ್ಕಾಗಿ ನಗರದಲ್ಲಿ ಅಳವಡಿಸಲಾಗಿರುವ ಭಾರತದ ವಿವಾದಾತ್ಮಕ ನಕಾಶೆ ಹೊಂದಿರುವ ಬ್ಯಾನರ್​ಗಳ ವಿರುದ್ಧ ಬಿಜೆಪಿ ಕಿಡಿ ಕಾರಿದೆ. ಬೆಳಗಾವಿ ನಗರದ ಪ್ರವೇಶದ್ವಾರದ ಬಳಿ ಹಾಕಲಾಗಿರುವ ಸ್ವಾಗತ ಫ್ಲೆಕ್ಸ್​ಗಳಲ್ಲಿ ಮುದ್ರಿಸಲಾದ ಭಾರತದ ನಕಾಶೆಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಅಕ್ಸಾಯ್ ಚಿನ್ ಪ್ರದೇಶಗಳು ಇಲ್ಲದೆ ಇರುವುದು ಸದ್ಯ ವಿವಾದದ ಕೇಂದ್ರ ಬಿಂದುವಾಗಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಮತ್ತು ರಾಜ್ಯಸಭಾ ಸಂಸದ ಸುಧಾಂಶು ತ್ರಿವೇದಿ, ಕಾಂಗ್ರೆಸ್ ವಿಭಜಕ ರಾಜಕೀಯದಲ್ಲಿ ತೊಡಗಿದೆ ಎಂದು ಆರೋಪಿಸಿದರು.

“ಬೆಳಗಾವಿಯಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಿಒಕೆ ಮತ್ತು ಅಕ್ಸಾಯ್ ಚಿನ್ ಇಲ್ಲದ ವಿಕೃತ ನಕ್ಷೆಯನ್ನು ತೋರಿಸುವ ಪೋಸ್ಟರ್​ಗಳನ್ನು ಹಾಕಲಾಗಿದೆ. ಕಾಂಗ್ರೆಸ್​ ಈ ಹಿಂದೆಯೂ ಈ ರೀತಿ ಮಾಡಿದೆ. ಈ ನಕ್ಷೆಗಳನ್ನು ಪ್ರದರ್ಶಿಸುವ ಟ್ವೀಟ್​ಗಳನ್ನು ಸಹ ಅಳಿಸಲಾಗಿದೆ” ಎಂದು ತ್ರಿವೇದಿ ಹೇಳಿದರು.

“ಈ ನಕ್ಷೆಯನ್ನು ಮಹಾತ್ಮ ಗಾಂಧಿಯವರ ಚಿತ್ರದ ಪಕ್ಕದಲ್ಲಿಯೇ ಮುದ್ರಿಸಲಾಗಿದೆ. ಆದರೆ ಮಹಾರಾಣಾ ಪ್ರತಾಪ್, ಛತ್ರಪತಿ ಶಿವಾಜಿ, ರಾಣಿ ಲಕ್ಷ್ಮಿಬಾಯಿ ಮತ್ತು ಗುರು ಗೋವಿಂದ್ ಸಿಂಗ್ ಅವರಂಥ ಮಹಾನ್ ವ್ಯಕ್ತಿಗಳ ತ್ಯಾಗದ ಇತಿಹಾಸ ಹೊಂದಿರುವ ಭಾರತಕ್ಕೆ ಇದು ಅಪಮಾನ ಮಾಡಿದಂತಾಗಿದೆ” ಎಂದು ಅವರು ಹೇಳಿದರು.

ಕಾಂಗ್ರೆಸ್ ಕ್ರಮವನ್ನು ಖಂಡಿಸಿದ ತ್ರಿವೇದಿ, ಕಾಂಗ್ರೆಸ್​ನ ಕ್ರಮಗಳು ದೇಶವನ್ನು ವಿಭಜಿಸುವ ಕನಸು ಕಾಣುವ ‘ಭಾರತ ವಿರೋಧಿ ಶಕ್ತಿಗಳೊಂದಿಗೆ’ ಹೊಂದಿಕೆಯಾಗುತ್ತವೆ ಎಂದು ಹೇಳಿದರು.


Spread the love

About Laxminews 24x7

Check Also

ಮೊಬೈಲ್ ನೋಡ್ಬೇಡ ಎಂದು ಬುದ್ಧಿ ಹೇಳಿದ್ದಕ್ಕೆ ವಿಷ ಸೇವಿಸಿ ಆತ್ಮಹತ್ಯೆ

Spread the loveಶಿವಮೊಗ್ಗ, (: ಮೊಬೈಲ್ (Mobile) ಹೆಚ್ಚು ನೋಡಬೇಡ ಎಂದು ಪೋಷಕರು ಬುದ್ಧಿ ಹೇಳಿದ್ದಕ್ಕೆ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ