ಸಾವಳಗಿ:ಗೋಕಾಕ ತಾಲೂಕಿನ ನಂದಗಾಂವ ಸಾವಳಗಿ ಗ್ರಾಮದ ನಮ್ಮೂರ ಸರಕಾರಿ ಹಿರಿಯ ಪ್ರಾಥಮಿಕ
ಹೆಣ್ಣು ಮಕ್ಕಳ ಕನ್ನಡ ಶಾಲೆ ನಂದಗಾಂವ ಒಂದು ದಿನದ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿ
ಡಿಸೆಂಬರ್ ತಿಂಗಳು ಬಂತೆಂದರೆ ಸಾಕು, ಬಹುತೇಕ ಶಾಲೆಗಳ ಮಕ್ಕಳು ತಮ್ಮ ಕನಸಿಗೆ ಬಣ್ಣಬಣ್ಣದ ರೆಕ್ಕೆ ಕಟ್ಟಿಕೊಂಡು ಕಲ್ಪನಾಲೋಕದಲ್ಲಿ ತೇಲುತ್ತಾರೆ. ಕಲಿಕಾರ್ಥಿಗಳಲ್ಲಿ ಸಡಗರ ಮತ್ತು ಉತ್ಸಾಹದ ಮೂಲಕ ಸ್ಫೂರ್ತಿ ಮತ್ತು ಪ್ರೇರಣೆ ತುಂಬುವ ಮಹತ್ತರ ಕಾರ್ಯಕ್ರಮವೇ ಶೈಕ್ಷಣಿಕ ಪ್ರವಾಸ.
ಕಲಿಕೆಯ ಒಂದು ಭಾಗವಾದ ಶೈಕ್ಷಣಿಕ ಪ್ರವಾಸವು ವೀಕ್ಷಣೆಯ ಮೂಲಕ ಅನುಭವ ಜನ್ಯ ಕಲಿಕೆಯಾಗಿದೆ. ತಾತ್ವಿಕ ಜ್ಞಾನವನ್ನು ಒರೆಗೆ ಹಚ್ಚಿ ವೀಕ್ಷಿಸುವ ಮತ್ತು ಸಾದೃಶ್ಯಗಳೊಂದಿಗೆ ಹೋಲಿಕೆ ಮಾಡಿ ಕಲಿಯುವ ಚಟುವಟಿಕೆಯಾಗಿದೆ. ಶೈಕ್ಷಣಿಕ ಪ್ರವಾಸವು ಮಕ್ಕಳಲ್ಲಿ ಪರಿಸರ ಪ್ರೇಮ, ನಿಸರ್ಗದ ರಮ್ಯತೆಗಳು, ಇತಿಹಾಸ ಮತ್ತು ವಾಸ್ತುಶಿಲ್ಪಗಳ ಅಧ್ಯಯನ, ಅಭಿವೃದ್ಧಿಗೆ ಪೂರಕವಾದ ಉದ್ಯಮಗಳ ವೀಕ್ಷಣೆ, ವೈವಿಧ್ಯಮಯ ಜನಸಮುದಾಯ ಮತ್ತು ವಿವಿಧ ಸಂಸ್ಕೃತಿಗಳ ಪರಿಚಯ, ಪಾರಂಪರಿಕ ವೃತ್ತಿಗಳ ಪರಿಚಯ, ವಿವಿಧ ಪ್ರಾಣಿ ಪಕ್ಷಿ ಖಗಮೃಗಗಳ ವೀಕ್ಷಣೆ ಮೂಲಕ ಜ್ಞಾನ ವಿಕಾಸಕ್ಕೆ ಪೂರಕವಾಗಿದೆ.
ಇವುಗಳ ಜೊತೆಗೆ ಮಕ್ಕಳಲ್ಲಿ ವ್ಯಕ್ತಿತ್ವ ನಿರ್ಮಾಣದಲ್ಲಿಯೂ ಶೈಕ್ಷಣಿಕ ಪ್ರವಾಸ ಹೆಚ್ಚು ಮಹತ್ತರವಾಗಿದೆ. ಶೈಕ್ಷಣಿಕ ಪ್ರವಾಸಗಳು ಮಕ್ಕಳಲ್ಲಿ ಒಗ್ಗಟ್ಟು, ಸಹಬಾಳ್ವೆ, ಪರಸ್ಪರ ಸಹಕಾರ, ಹಂಚಿ ತಿನ್ನುವ ಮನೋಭಾವ, ವಯಸ್ಸಿಗೆ ತಕ್ಕ ಜವಾಬ್ಧಾರಿ ನಿರ್ವಹಣೆ, ಇತರರಿಗೆ ಗೌರವ ನೀಡುವುದು, ವಿವಿಧ ಸಂಸ್ಕೃತಿಗಳ ಮೆಚ್ಚುಗೆ ಹೀಗೆ ಹಲವು ಬಗೆಯ ಸೌಜನ್ಯಯುತ ನಡವಳಿಕೆಗಳನ್ನು ಮಕ್ಕಳು ಬೆಳೆಸಿಕೊಳ್ಳುವಲ್ಲಿ ಸಹಕಾರಿಯಾಗಿದೆ. ಪಠ್ಯದಲ್ಲಿನ ಪರಿಕಲ್ಪನೆಗಳನ್ನು ಕೇಳಿ ತಿಳಿಯುವುದಕ್ಕಿಂತ ನೋಡಿ ತಿಳಿದಾಗ ಹೆಚ್ಚು ಸ್ಪಷ್ಟವಾಗಿ ನೆನಪಿನಲ್ಲಿ ಉಳಿಯುತ್ತದೆ. ಹಾಗಾಗಿ ಶೈಕ್ಷಣೀಕ ಪ್ರವಾಸಕ್ಕೆ ತನ್ನದೇ ಆದ ಮಹತ್ವವಿದೆ ಎಂದು SDMC ಸದಸ್ಯರಾದ ನಿಂಗನಗೌಡಾ ಪಾಟೀಲ ಹೇಳಿದರು.